Dr.Rajkumar : ಡಾ.ರಾಜ್ ಕುಮಾರ್ ಕುಡಿ ಚಿತ್ರರಂಗಕ್ಕೆ : ಹೈಡ್ ಆ್ಯಂಡ್ ಸೀಕ್ ಆಡಲು ಧನ್ಯ ತಯಾರಿ

ಬೆಂಗಳೂರು; ಫೆ.9: ಡಾ.ರಾಜ್ ಕುಮಾರ್ ಕುಡಿ ಧನ್ಯಾ ರಾಮ್ ಕುಮಾರ್ ಸಿನಿಮಾ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿದ್ದಾರೆ.. “ನಿನ್ನ ಸನಿಹಕೆ” ಸಿನಿಮಾ ಮೂಲಕ ಚಂದನ ವನಕ್ಕೆ ಎಂಟ್ರಿ ಕೊಟ್ಟ ರಾಮ್ ಕುಮಾರ್ ಪುತ್ರಿ ನಟಿ ಧನ್ಯಾ ರಾಮ್‌ಕುಮಾರ್ ಹೈಡ್ ಆ್ಯಂಡ್ ಸಿಕ್ ಆಡಲು ರೆಡಿಯಾಗಿದ್ದಾರೆ.

ಪುನೀತ್ ನಾಗರಾಜು ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರ ಹೈಡ್ ಅಂಡ್ ಸೀಕ್. ಚಿತ್ರದಲ್ಲಿ ಅನೂಪ್ ರೇವಣ್ಣಗೆ ನಾಯಕಿಯಾಗಿ ಧನ್ಯಾ ರಾಮ್ ಕುಮಾರ್ ನಟಿಸಿದ್ದಾರೆ. ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಧನ್ಯಾ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೈಡ್ ಆ್ಯಂಡ್ ಸೀಕ್ ಚಿತ್ರ ಒಳಗೊಂಡಿದ್ದು, ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ.

ಪುನೀತ್ ನಾಗರಾಜು, ವಸಂತ್ ರಾವ್ ಎಂ.ಕುಲ್ಕರ್ಣಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರ್ತಿದ್ದು, ರಿಜೋ ಪಿ ಜಾನ್ ಛಾಯಾಗ್ರಾಹಣ, ಸ್ಯಾಂಡಿ ಅದ್ದಾನ್ಕಿ ಸಂಗೀತ ನಿರ್ದೇಶನ, ಮಧು ತುಂಬಕೆರೆ ಸಂಕಲನ ‘ಹೈಡ್ ಅಂಡ್ ಸೀಕ್’ ಚಿತ್ರಕ್ಕಿದೆ.

More News

You cannot copy content of this page