ಬಾಗಲಕೋಟೆ :ಫೆ.10: ಸಚಿವ ಮುರಗೇಶ್ ನಿರಾಣಿ ಒಡೆತದನ ಸಕ್ಕರೆ ಕಾರ್ಖನೆಯಲ್ಲಿ ಸ್ಟೀಮ್ ಪೈಪ್ ಬ್ಲಾಸ್ಟ್ ಆಗಿ ಓರ್ವ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೊರವಲಯದಲ್ಲಿರುವ ಸಚಿವ ಮುರುಗೇಶ್ ನಿರಾಣಿ ಒಡೆತನದ ಎಂಆರ್ ಎನ್ ಸಕ್ಕರೆ ಕಾರ್ಖಾನೆ ಬಾಯಿಲಿಂಗ್ ಹೌಸ್ ನಲ್ಲಿ ಸ್ಟಿಮ್ ಪೈಪ್ ಬ್ಯಾಸ್ಟ್ ಆಗಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಮುಧೋಳ ನಗರದ ಕಾರ್ಮಿಕ ಗುರುನಾಥ್ ಹುಚ್ಚಣ್ಣವರ(27) ಮೃತಪಟ್ಟಿದ್ದಾನೆ. ಇದೆ ಸಕ್ಕರೆ ಖಾರ್ನೆಯಲ್ಲಿ 2018ರ ಡಿಸೆಂಬರ್ 16ರಲ್ಲಿ ಡಿಸಲರಿ ಘಟಕದಲ್ಲಿನ ಬ್ಲಾಸ್ಟ್ ಆಗಿ ನಾಲ್ಕು ಕಾರ್ಮಿಕರನ್ನ ಬಲಿ ಪಡೆದಿತ್ತು. ಇನ್ನು ಘಟನೆಯಲ್ಲಿ ಮೃತಪಟ್ಟ ಗುರುನಾಥ್ ಹುಚ್ಚನವರ ತಂದೆ-ತಾಯಿಗೆ ಒಬ್ಬನೆ ಮಗ. ಈ ಕುಟುಂಬಕ್ಕೆ ಆಸರೆಯಾಗಿದ್ದವನು. ಮಗನನ್ನ ಕಳೆದುಕೊಂಡ ವಯೊವೃದ್ಧ ತಂದೆ-ತಾಯಿ ಬದುಕು ಬೀದಿಪಾಲಾದಂತಾಗಿದೆ ಅಂತಾರೆ ಸ್ಥಳೀಯರು.




