Actress Rakhi Sawant : ಹಣಕ್ಕಾಗಿ ಆದಿಲ್ ನನ್ನ ಬೆತ್ತಲೆ ವಿಡಿಯೋ ತೆಗೆದು ಮಾರಿದ್ದಾನೆ : ನಟಿ ರಾಖಿ ಸಾವಂತ್

ಬೆಂಗಳೂರು:ಫೆ.10: ರಾಖಿ ಸಾವಂತ್ ವೈಯಕ್ತಿಕ ಬದುಕಿನ ಸುದ್ದಿ ದಿನಕ್ಕೊಂದು ರೂಪ ತಳೆದು ಗಂಭೀರತೆಯನ್ನು ಪಡೆಯುತ್ತಿದೆ.. ಪ್ರಾರಂಭದಲ್ಲಿ ನನಗೆ ಪತಿ ಬೇಕು.. ಒಟ್ಟಿಗೆ ಬದುಕಬೇಕು.. ಎಂದಿದ್ದ ನಟಿ ಬರು ಬರುತ್ತಾ ಗಂಭೀರ ಆರೋಪಗಳನ್ನು ಉದ್ಯಮಿ ಆದಿಲ್ ವಿರುದ್ಧ ಮಾಡಿದ್ದಾರೆ. ನನಗೆ ತಿಳಿಯದೇ ನನ್ನ ಪತಿ ಆದಿಲ್ ನನ್ನ ನಗ್ನ ಚಿತ್ರ ತೆಗೆದು ಮಾರಾಟ ಮಾಡಿದ್ದಾನೆ ಎಂದು ನಟಿ ರಾಖಿ ದೂರು ದಾಖಲಿಸಿದ್ದಾರೆ..

ಅಸಹಜ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧ, ಹಲ್ಲೇ ಸೇರಿದಂತೆ ಅನೇಕ ಪ್ರಕರಣ ಮೇಲೆ ಉದ್ಯಮಿ ಆದಿಲ್ ನನ್ನು ಫೆಬ್ರವರಿ 7 ರಂದು ಪೊಲೀಸರು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ..

ಗುರುವಾರ ಕೋರ್ಟ್​ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ನಟಿ ರಾಖಿ, ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ. ಹಣಕ್ಕಾಗಿ ನನ್ನ ಬೆತ್ತಲೆ ಚಿತ್ರಗಳನ್ನು ಚಿತ್ರಿಸಿ, ಮಾರಿದ್ದಾನೆ. ಈ ಬಗ್ಗೆ ಸೈಬರ್ ಕ್ರೈಂ ಇಲಾಖೆಯಲ್ಲಿ ನನ್ನ ಕೇಸ್ ದಾಖಲಿಸಿದ್ದೇನೆ. ಇದೀಗ ತನು ಎಂಬಾಕೆಯನ್ನು 3ನೇ ಬಾರಿಗೆ ಮದುವೆಯಾಗಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.

ಬಿಗ್ ಬಾಸ್ ಗೆ ಹೋಗುವ ಆಸೆಯಿಂದ ರಾಖಿ ಜೊತೆಗೆ ಮದುವೆ..!?

ಆದಿಲ್ ಆಪ್ತರ ಹೇಳಿಕೆ ಪ್ರಕಾರ, ಬಿಗ್ ಬಾಸ್ ಗೆ ಹೋಗುವ ಆಸೆಯಿಂದ ಆದಿಲ್ ರಾಖಿಯನ್ನು ವಿವಾಹವಾದ ಎನ್ನಲಾಗಿದೆ. ರಾಖಿ ಹಿಂದೆ ಹೋದರೆ, ಬಿಗ್ ಬಾಸ್ ಮನೆಗೆ ಹೋಗೋ ದಾರಿ ಸುಲಭವಾಗುತ್ತೆ ಎಂದು ಅರಿತ ಕಾರಣದಿಂದಲೇ ಪ್ರೀತಿ, ಪ್ರೇಮ ಎಂದು ನಟಿ ಹಿಂದೆ ಆದಿಲ್ ಬಿದ್ದಿದ್ದ ಎನ್ನಲಾಗಿದೆ. ಈ ಬಗ್ಗೆ ರಾಖಿಗೂ ಮನವಿ ಮಾಡಿದ್ದ ಎನ್ನಲಾಗಿದೆ. ಒಮ್ಮೆ ಈ ಬಗ್ಗೆ ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿದ್ದ ರಾಖಿ, ಆದಿಲ್ ಜೊತೆ ಬಿಗ್ ಬಾಸ್ ಮನೆಗೆ ಹೋಗಿ, ಅಲ್ಲೇ ಮದುವೆ ಆಗೋ ಪ್ರಸ್ತಾಪ ಮಾಡಿದ್ದರು. ಆದ್ರೆ ರಾಖಿ ಪ್ರಯತ್ನ ಪಟ್ಟುರು ಸಹ ಆದಿಲ್ ನನ್ನು ಕರೆದುಕೊಂಡು ಹೋಗಲು ಸಾಧ್ಯವಾಗದ ಕಾರಣ ರಾಖಿಯಿಂದ ದೂರವಾಗಲು ಪ್ರಯತ್ನಿಸಿದ್ದಾನೆ ಎಂಬ ಮಾಹಿತಿ ಆಪ್ತರಿಂದ ಕೇಳಿ ಬಂದಿದೆ.

More News