ನವದೆಹಲಿ: ಕಾಂತಾರ ವರಹ ರೂಪಂ ಹಾಡಿನ ಕಾಪಿ ರೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈ ಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಸಡಿಲಿಸಿದೆ. ನಿರ್ದೇಶಕ ರಿಷಬ್ ಮತ್ತು ವಿಜಯ್ ಕಿರಗಂದೂರುಗೆ ರಕ್ಷಣೆ ನೀಡಿದ್ದು, ಸುಪ್ರೀಂಕೋರ್ಟ್ ನಿಂದ ಇಬ್ಬರನ್ನು ಬಂಧಿಸದಂತೆ ಆದೇಶ ಹೊರಡಿಸಲಾಗಿದೆ.

ನಮ್ಮ ಆಲ್ಬಮ್ ಸಾಂಗ್ ನ್ನು ಕದ್ದು ಕಾಂತಾರ ಸಿನಿಮಾದಲ್ಲಿ ಬಳಕೆ ಮಾಡಲಾಗಿದೆ ಎಂದು ಮಲಯಾಳಂ ನ ತೈಕ್ಕುಡಂ ಬ್ರಿಡ್ಜ್ ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿತ್ತು. ಸಾಕ್ಷಿ ಸಮೇತ ದೂರು ನೀಡಿದ್ದ ಸಂಸ್ಥೆಯು, ನಮ್ಮ ನವರಸಂ ಹಾಡನ್ನು ಕಾಪಿ ಮಾಡಲಾಗಿದೆ. ಅನುಮತಿ ಇಲ್ಲದೇ ಬಳಕೆ ಮಾಡಿದೆ ಕಾಂತಾರ ಸಿನಿಮಾ ತಂಡ ಎಂದು ದೂರಿತ್ತು. ಜೊತೆಗೆ ಮತ್ತೊಂದು ತಂಡ ಸಹ ನಮ್ಮ ಹಾಡಿನ ಟ್ಯೂನ್ ಅನ್ನು ಕದಿಯಲಾಗಿದೆ ಎಂದು ದೂರು ನೀಡಿತ್ತು.

ಇವೆಲ್ಲವುಗಳ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಕಾಂತಾರ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಮತ್ತು ರಿಷಬ್ ಗೆ ನಿರೀಕ್ಷಣಾ ಜಾಮೀನು ನೀಡುವ ಮೂಲಕ ಒಂದಷ್ಟು ಷರತ್ತನ್ನು ಕೇರಳ ಹೈ ಕೋರ್ಟ್ ವಿಧಿಸಿತ್ತು.
ಕೇರಳ ಹೈ ಕೋರ್ಟ್ ಷರತ್ತುಗಳೇನು.. ?
ಫೆ.12 ಮತ್ತು 13 ಕ್ಕೆ ತನಿಖಾಧಿಕಾರಗಳ ಎದುರು ವಿಚಾರಣೆಗೆ ಹಾಜರಾಗಬೇಕು. 50 ಸಾವಿರ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಕೋರ್ಟ್ ಜಾಮೀನು ನೀಡಬೇಕು. ಯಾವುದೇ ಕಾರಣಕ್ಕೂ ಆರೋಪಿತರು ಸಾಕ್ಷಿಗಳನ್ನು ಬೆದರಿಸುವುದು, ಅರ್ಜಿದಾರರ ಮೇಲೆ ಒತ್ತಡ ಹೇರುವುದು ಮಾಡಿದರೆ ಹೆಚ್ಚುವರಿ ಶಿಕ್ಷೆ ನೀಡಲಾಗುವುದು. ಕೋರ್ಟ್ ನ ಅನುಮತಿ ಇಲ್ಲದೇ ಆರೋಪಿಗಳು ದೇಶದಿಂದ ಹೊರ ಹೋಗಬಾರದು. ಅಪರಾಧ ಕೆಲಸಗಳಲ್ಲಿ ಭಾಗಿಯಾಗಬಾರದು ಎಂದು ಷರತ್ತುಗಳನ್ನು ವಿಧಿಸಲಾಗಿದೆ.

ಕೇರಳ ಕೋರ್ಟ್ ಆದೇಶವನ್ನು ಪ್ರಶ್ನಿಸಿ, ರಿಷಬ್, ಕಿರಗಂದೂರು ಸುಪ್ರೀಂ ಮೊರೆ ಹೋಗಿದ್ದು, ಸರ್ವೋಚ್ಚ ನ್ಯಾಯಾಲಯದಿಂದ ರಕ್ಷಣೆ ದೊರೆತಿದೆ. ಫೆಬ್ರವರಿ 12 ಮತ್ತು 13 ರಂದು ಹೈ ಕೋರ್ಟ್ ಗೆ ಹಾಜರಾಗಲಿ. ಆದರೆ ಯಾವುದೇ ಕಾರಣಕ್ಕೂ ನಿರ್ದೇಶಕ ರಿಷಬ್, ನಿರ್ಮಾಪಕ ಕಿರಗಂದೂರನ್ನು ಬಂಧಿಸುವಂತಿಲ್ಲ ಎಂದು ಆದೇಶ ನೀಡಿದೆ. ಜೊತೆಗೆ ಸಿನಿಮಾ ದಲ್ಲಿ ವರಹಾ ರೂಪಂ ಹಾಡು ಪ್ರಸಾರ ಮಾಡೋದಕ್ಕೆ ಅವಕಾಶ ನೀಡಲಾಗಿದೆ.
#KANTARA #KERALA HIGHCOURT #VIJAY KIRANGDURU #RISHAB SHETTY #SUPREEME COURT #VARAHA RUPAM SONG #COPYRIGHT ACT




