ಬೆಂಗಳೂರು:ಫೆ.12: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ “ನನ್ನ ಪ್ರೀತಿಯ ಸೆಲೆಬ್ರಿಟಿ” ಎಂದು ಹಚ್ಚೆ ಹಾಕಿಸಿದ್ದೇ ತಡ.. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಆಯಿತು.. ನಟನೊಬ್ಬ ಅಭಿಮಾನಿಗಳ ಮೇಲಿನ ಪ್ರೀತಿಯನ್ನ ಹೀಗೂ ತೋರಿಸಬಹುದಾ ಎಂದು ಅಚ್ಚರಿ ಪಟ್ಟರು. ದರ್ಶನ್ ಅಭಿಮಾನಿಗಳ ಪ್ರೀತಿ ಕುರಿತು ಯೂಟ್ಯೂಬ್ ಒಂದಕ್ಕೆ ಮಾತನಾಡಿದ ಸ್ಯಾಂಡಲ್ ವುಡ್ ನಟ ಅಭಿಷೇಕ್ ಅಂಬರೀಶ್, ದರ್ಶನ್ ಜೊತೆಗೆ ಮಾತನಾಡುತ್ತಾ ಆದ ಘಟನೆಯೊಂದನ್ನ ಮೆಲುಕು ಹಾಕಿದ್ದಾರೆ.



ನಾನು ಎಂದೂ ಈ ಘಟನೆಯನ್ನು ಎಲ್ಲೂ ಪ್ರಸ್ತಾಪ ಮಾಡಿಲ್ಲ. ಜನ ಹೇಗೆ ತೆಗೆದುಕೊಳ್ತಾರೆ ಏನೋ ಗೊತ್ತಿಲ್ಲ. ಕೆಲ ವರ್ಷಗಳ ಹಿಂದೆ ಒಮ್ಮೆ ನಟ ದರ್ಶನ್ ಅವ್ರನ್ನು ಭೇಟಿ ಆದಾಗ ತುಂಬಾ ಸುಸ್ತಾದಂತೆ ಕಾಣುತ್ತಿದ್ದರು. ಅವರು ಜಿಮ್ ಅದು ಇದು ಅಂತ ಬರೀ ಎರಡೆರಡು ಗಂಟೆ ಮಾತ್ರ ನಿದ್ದೆ ಮಾಡುತ್ತಿದ್ದರು. ಆಗ ನಾನು ಹೇಳಿದೆ ಸ್ವಲ್ಪ ರೆಸ್ಟ್ ಮಾಡಿ. ಯಾಕೆ ಹೀಗೆ ಕಷ್ಟ ತಕೊಳ್ತಿದ್ದೀರಿ.. ಜಿಮ್ ವರ್ಕೌಟ್ ಬಿಟ್ಟು ಆರಾಮಾಗಿರಿ ಎಂದಿದ್ದೆ. ಇದಕ್ಕೆ ಉತ್ತರಿಸಿದ ನಟ ದರ್ಶನ್, ನಾನು ಏನೇ ಮಾಡಿದರೂ ನಮ್ಮ ಅಭಿಮಾನಿಗಳಿಗೆ ಮೋಸ ಮಾಡಲ್ಲ. ಅವ್ರು ನನ್ನಿಂದ ಅಪೇಕ್ಷೆ ಪಡ್ತಾರೆ. ನಾನು ಹೀಗೆ ಕಾಣಿಸ್ಬೇಕು ಅಂತ. ಅದಕ್ಕೆ ನಿದ್ದೆ ಕೆಟ್ಟರೂ ಪರವಾಗಿಲ್ಲ. ಆರೋಗ್ಯ ಕೈ ಕೊಟ್ಟರೂ ಪರವಾಗಿಲ್ಲ. ನಾನು ಜಿಮ್‌ಗೆ ಹೋಗ್ತೀನಿ ಎಂದಿದ್ದರು. ಇದನ್ನ ಕೇಳಿ ಅಚ್ಚರಿ ಅನಿಸಿತು ನಂಗೆ.. ಫ್ಯಾನ್ಸ್‌ಗೋಸ್ಕರ ಬದುಕ್ತಾರೆ ಅವ್ರು ಎಂದು ತಿಳಿಸಿದರು.






