ಬೆಂಗಳೂರು : ಏರೋ ಇಂಡಿಯಾ ಪ್ರದರ್ಶನ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ ರಾಜಭವನದಲ್ಲಿ ಏರ್ಪಡಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡು, ನಾನಾ ಕ್ಷೇತ್ರದ ಗಣ್ಯರ ಜತೆ ಮಹತ್ವದ ಚರ್ಚೆ ನಡೆಸಿದರು.


ರಾಜ್ಯದ ಚಿತ್ರನಟರು, ಕ್ರಿಕೆಟ್ ಆಟಗಾರರು, ಸಂಗೀತ ನಿರ್ದೇಶಕರು, ಉದ್ಯಮಿಗಳು ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡು ಪರಸ್ಪರ ಮಾತುಕತೆ ನಡೆಸಿದರು. ಸಿನಿಮಾ ನಟ ಯಶ್, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ ಕುಮಾರ್, ಶ್ರದ್ಧಾ ಜೈನ್, ನಿರ್ದೇಶಕ ಪ್ರಶಾಂತ್ ನೀಲ್ ಗೆ ಆಹ್ವಾನ ನೀಡಲಾಗಿತ್ತು.


ಹಾಗೆಯೇ, ಕ್ರಿಕೆಟ್ ಕ್ಷೇತ್ರದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್ ವಾಲ್, ಮನೀಶ್ ಪಾಂಡೆಗೆ ಅವರಿಗೂ ಆಹ್ವಾನ ನೀಡಲಾಗಿತ್ತು. ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾಗೆ ಔತಣಕೂಟದಲ್ಲಿ ಭಾಗಿಯಾಗಿದ್ದರು.

ಎಲ್ಲಾ ಗಣ್ಯರ ಜತೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂತರ ರಿಶಬ್ ಶೆಟ್ಟಿ ಮತ್ತು ಕೆಜಿಎಫ್ ನಟ ಯಶ್ ಅವರ ಬೆನ್ನು ತಟ್ಟಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಪುನಿತ್ ರಾಜಕುಮಾರ್ ಸಾಮಾಜಿಕ ಕಾರ್ಯಗಳ ಬಗ್ಗೆ ಮೆಚ್ಚುಗೆ ಮಾತನಾಡಿದ ಪಿಎಂ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಧಾನಿಯವರು ಅಭಿಪ್ರಾಯ ಪಡೆದರು. ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.
ರಾಜ್ಯದ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಸಹ ಮಾಹಿತಿ ಪಡೆದ ಪಿಎಂ ನರೇಂದ್ರ ಮೋದಿ, ಮುಂಬರುವ ದಿನಗಳಲ್ಲಿ ಇವುಗಳ ಬಗ್ಗೆ ಗಮನ ಹರಿಸುವ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
#RAJBHAVAN #PRIME MINISTER #NARENDRA MODI #DINNER PARTY #YASH #RISHAB SHETTY #KANTARA #VIJAY KIRANDOORU #ASHWINI PUNEET RAJKUMAR #PRASHANTH NEIL #JAVAGAL SRINATH #ANIL KUMBLE #MAYANK AGARWAL #MANISH PANDE #THARUN MEHTHA




