SUPERSTAR RAJINIKANTH MOVIE: ಸೂಪರ್ ಸ್ಟಾರ್ ರಜನೀಕಾಂತ್ ಸಿನಿಮಾ ನಿರ್ಮಾಣಕ್ಕೆ ಹೊಂಬಾಳೆ ಫಿಲ್ಮ್ಸ್‌ ಸಿದ್ದತೆ..?

ಕೆಜಿಎಫ್, ಕಾಂತಾರ ಸಿನಿಮಾ ಸಿನಿ ಅಂಗಳದಲ್ಲಿ ಸೂಪರ್ ಡೂಪರ್ ಹಿಟ್ ಕಂಡ ಬಳಿಕ ಸಾಲು ಸಾಲು ಸಿನಿಮಾ ನಿರ್ಮಾಣ ಕೆಲಸದಲ್ಲಿ ಹೊಂಬಾಳೆ ಸಂಸ್ಥೆ ಮುಂದಾಗಿದೆ.
ಇದೀಗ ಮತ್ತೊಂದು ಬಿಗ್ ಸಿನಿಮಾ ಒಂದನ್ನ ಮಾಡುವ ತಯಾರಿಯಲ್ಲಿ ಇದೆ ಎಂಬ ಸುಳಿವು ಸಿಕ್ಕಿದೆ.. ತಮಿಳು ನಾಡಿನ ತಲೈವಾ ಜೊತೆಗೆ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡೋ ಕಸರತ್ತಲ್ಲಿ ಹೊಂಬಾಳೆ ಇದೆ ಎಂಬ ಸುದ್ದಿ ಸಿನಿ ಅಂಗಳದಲ್ಲಿ ಸದ್ದು ಮಾಡ್ತಿದೆ..

ಕನ್ನಡ ಸಿನಿಮಾದಲ್ಲಿ ನಟಿಸಿ, ತಮಿಳು ನಾಡಿನ ಚಿತ್ರೋದ್ಯಮದ ಕಡೆ ವಾಲಿದ ನಟ ರಜನೀಕಾಂತ್ ಇಂದು ತಲೈವಾ, ಸೂಪರ್ ಸ್ಟಾರ್ ಎಂದೇ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ನಾಯಕ.. ಸಾಲು ಸಾಲು ಸಿನಿಮಾ ನಿರ್ಮಾಣದಲ್ಲಿ ಬ್ಯುಸಿ ಇರುವ ಹೊಂಬಾಳೆ ಫಿಲ್ಮ್ಸ್ ರಜನೀಕಾಂತ್ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಮುಂದಿನ 5 ವರ್ಷಕ್ಕೆ 3 ಸಾವಿರ ಕೋಟಿ‌ ರೂಪಾಯಿ ಯನ್ನು ಬರೀ ಚಿತ್ರರಂಗಕ್ಕೆಂದೇ ಮೀಸಲಿಡಲು ಹೊಂಬಾಳೆ ಫಿಲ್ಮ್ಸ್ ಮುಖ್ಯಸ್ಥ ವಿಜಯ್ ಕಿರಗಂದೂರು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ 10 ಸಿನಿಮಾ ಪ್ರೊಡಕ್ಷನ್ ಹಂತದಲ್ಲಿ ಯೂ ಇದ್ದು, ರಜನೀಕಾಂತ್ ಸಿನಿಮಾ ತೆರೆಗೆ ತೆರಲು ಸಿದ್ದತೆ ನಡೆಯುತ್ತಿದೆ.

ಈಗಾಗಲೇ ಒಂದು ಹಂತದ ಮಾತುಕತೆ ಯನ್ನೂ ಸಹ ನಟ ರಜನೀಕಾಂತ್ ಜೊತೆಗೆ ಹೊಂಬಾಳೆ ಸಂಸ್ಥೆ ಮುಖ್ಯಸ್ಥ ಕಿರಗಂದೂರು ಮಾಡಿದ್ದಾರೆ ಎನ್ನಲಾಗಿದೆ. ಇನ್ನೇನು ಕೆಲವೇ ದಿನದಲ್ಲಿ ದೊಡ್ಡ ಅನೌನ್ಸ್ ಮೆಂಟ್ ಹೊರ ಬೀಳೋ ಸಾಧ್ಯತೆ ಇದೆ ಎಂದು ಗಾಂಧಿನಗರದಲ್ಲಿ ಬ್ಯುಸಿ ಬ್ಯುಸಿ ಚರ್ಚೆ ಆಗ್ತಿದೆ.

#HOMBALE FILMS #VIJAY KIRANGADOORU #SUPERSTAR #RAJINIKANTH #THALAIVA #TAMIL #ACTING #NEW FILMS #GANDHINAGAR #ANNOUNCEMENT

More News