PUSHPA PART-2: ಪುಷ್ಪಾ 2 ನಲ್ಲಿ ಶ್ರೀವಲ್ಲಿ ಸ್ಕ್ರೀನ್ ಸ್ಪೇಸ್ ಗೆ ಕತ್ತರಿ..?

ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ತೆರೆಕಂಡ ಪುಷ್ಪ ಪಾರ್ಟ್ 1 ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಹುಟ್ಟಿ ಹಾಕಿತು. ತಗ್ಗೇದೇ ಲೇ ಡೈಲಾಗ್ ಮೂಲಕ ಕ್ರೇಸ್ ಹೆಚ್ಚಿಸಿದ ಪುಷ್ಪಾ ಭರ್ಜರಿ ಸದ್ದು ಮಾಡಿತು.. ಬನ್ನಿ ಮಾಸ್ ಲುಕ್ ಜೊತೆಗೆ ರಶ್ಮಿಕಾ ಮಂದಣ್ಣ ಟ್ರೆಡಿಷನಲ್ ಗೆಟಪ್‌ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡಿತು.. ಇದೀಗ ಪುಷ್ಪಾ ಪಾರ್ಟ್ 2 ಸಿದ್ದತೆಯಲ್ಲಿ ಇರುವ ಸಿನಿಮಾದಿಂದ ದಿನಕ್ಕೊಂದು ಸುದ್ದಿ ಹೊರ ಬೀಳ್ತಿದೆ.

ಇತ್ತೀಚೆಗೆ ಅಷ್ಟೇ ಪುಷ್ಪಾ 2 ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ಇರಲಿದ್ದಾರೆ.. ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಚಿಕ್ಕದಾಗಿ ಇರಲಿದೆ.. ಇಡೀ ಚಿತ್ರದಲ್ಲಿ ಅಲ್ಲು ಅರ್ಜುನ್ ರೂಲಿಂಗ್ ಮತ್ತಷ್ಟು ಹೆಚ್ಚಾಗಲಿದೆ.. ಮತ್ತಷ್ಟು ಇಂಟರೆಸ್ಟಿಂಗ್ ಕಹಾನಿ ಮೊಗೆದು ತುಂಬೋ ಕೆಲಸದಲ್ಲಿ ಚಿತ್ರ ತಂಡ ಇದೆ ಎಂಬ ಮಾಹಿತಿ ಸಿನಿ ಅಂಗಳದಲ್ಲಿ ಸದ್ದು ಮಾಡ್ತಿದೆ.

ಇನ್ನು ಪುಷ್ಪಾ 2 ಚಿತ್ರತಂಡ ವೈಜಾಗ್ ನಲ್ಲಿ ಶೆಡ್ಯೂಲ್ ಮುಗಿಸಿ, ಸುಕುಮಾರ್ ಮುಂದಿನ ಶೆಡ್ಯೂಲ್​ನನ್ನು ಹೈದರಾಬಾದ್ ನಲ್ಲಿ ಪ್ಲಾನ್ ಮಾಡುತ್ತಿದ್ದಾರೆ ಎಂಬ ಅಪ್ಡೇಟ್ ಸಿಕ್ಕಿದೆ. ಇದೇ ವೇಳೆ ರಶ್ಮಿಕಾ ಪಾತ್ರಕ್ಕೆ ಸಂಬಂಧಿಸಿದ ಪ್ರಮುಖ ದೃಶ್ಯಗಳ ಚಿತ್ರೀಕರಣ ಕೂಡ ನಡೆಯಲಿದೆ. ಅಲ್ಲು ಅರ್ಜುನ್​ಗೆ ಪ್ಯಾನ್ ವರ್ಲ್ಡ್ ಕ್ರೇಜ್ ಹುಟ್ಟುಹಾಕಲು ಸುಕುಮಾರ್ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ..
ಜೊತೆಗೆ ಚಿತ್ರದಲ್ಲಿ ಶ್ರೀವಲ್ಲಿ ಅಂದ್ರೆ ರಶ್ಮಿಕಾ ಪಾತ್ರವನ್ನು ಚಿಕ್ಕದಾಗಿ ಮಾಡಲು ನಿರ್ಧರಿಸಿದ್ದು, ಹೊಸ ಟ್ವಿಸ್ಟ್ ನೀಡೋ ಸಿದ್ದತೆಯಲ್ಲಿ ಇದೆ ಎನ್ನಲಾಗಿದೆ. ಇನ್ನು ಪುಷ್ಪಾ 2 ಸಿನಿಮಾ 2024 ರಲ್ಲಿ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ.

#PUSHPA2 #ALLU ARJUN #RASHMIKA MANDANNA #CUTDOWN #SRIVALLI PART #TWIST

More News