PM Modi Dinner Party : ಪ್ರಧಾನಿ ಮೋದಿ ಔತಣಕೂಟದಲ್ಲಿ ಚಿತ್ರ ನಟ, ನಟಿಯರು ಭಾಗಿ..!

ಬೆಂಗಳೂರು:ಫೆ.13: ರಾಕಿಂಗ್ ಸ್ಟಾರ್ ಯಶ್‌ ಹಾಗೂ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಈಗ ಎಲ್ಲಿ ಹೋದರೂ ಜನರು ಅವರನ್ನು ಗುರುತಿಸುತ್ತಾರೆ. ದೇಶದ ಯಾವ ರಾಜ್ಯಕ್ಕೆ ಹೋಗಲಿ, ವಿದೇಶಕ್ಕೆ ಹೋಗಲಿ ಇಬ್ಬರೂ ಪ್ಯಾನ್‌ ಇಂಡಿಯಾ ಸ್ಟಾರ್‌ಗಳಿಗೆ ಅದ್ಧೂರಿ ವೆಲ್‌ಕಮ್‌ ದೊರೆಯುತ್ತಿದೆ. ಇದೀಗ ನಟ ಯಶ್‌ ಹಾಗೂ ನಟ ರಿಷಬ್‌ ಇಬ್ಬರೂ ಪ್ರಧಾನಿ ನರೇಂದ್ರ ಮೋದಿ ಔತಣಕೂಟದಲ್ಲಿ ಪಾಲ್ಗೊಂಡಿದ್ದು ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಇಂದು ಏರೋ ಇಂಡಿಯಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ. ಇದಕ್ಕೂ ಮೊದಲು ಅಂದ್ರೆ ನಿನ್ನೆ ಸಂಜೆ ರಾಜಭವನದಲ್ಲಿ ಔತಣ ಕೂಟ ನಡೆದಿದ್ದು ಆ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಪ್ರಶಾಂತ್‌ ನೀಲ್‌, ವಿಜಯ್‌ ಕಿರಗಂದೂರು, ಜಾವಗಲ್‌ ಶ್ರೀನಾಥ್‌, ಮಯಾಂಕ್‌ ಅಗರ್‌ವಾಲ್‌, ವೆಂಕಟೇಶ್‌ ಪ್ರಸಾದ್‌, ತರುಣ್‌ ಮೆಹ್ತಾ ಸೇರಿದಂತೆ ಕನ್ನಡ ಚಿತ್ರರಂಗ, ಕ್ರೀಡೆ, ಉದ್ಯಮ ಹಾಗೂ ಇನ್ನಿತರ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು.. ಈ ಔತಣಕೂಟದಲ್ಲಿ ರಿಷಬ್‌ ಶೆಟ್ಟಿ ಹಾಗೂ ಯಶ್‌ ಇಬ್ಬರೂ ಪಾಲ್ಗೊಂಡಿದ್ದು ರಾಜಭವನದ ಸಿಬ್ಬಂದಿಗಳು ಇವರೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

More News