film city in Karnataka : ಕರ್ನಾಟಕದಲ್ಲಿ ಒಂದು ಸುಸಜ್ಜಿತ ಫಿಲ್ಮ್ ಸಿಟಿ ನಿರ್ಮಿಸಿಕೊಡಿ : ಪ್ರಧಾನಿ ಬಳಿ ಯಶ್ ಮನವಿ

ಬೆಂಗಳೂರು:ಫೆ.13: ಪ್ರಧಾನಿ ಮೋದಿ ಭೇಟಿಯಾದ ಸಂದರ್ಭದಲ್ಲಿ ನಟ ಯಶ್ ಕರ್ನಾಟಕದಲ್ಲಿ ಒಂದು ಸುಸಜ್ಜಿತ ಫಿಲ್ಮ್ ಸಿಟಿಯನ್ನು ನಿರ್ಮಿಸಿಕೊಡಿ ಎಂದು ಮನವಿ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬೆಂಗಳೂರಿನಲ್ಲಿ ಹಲವು ಕ್ಷೇತ್ರಗಳ ಗಣ್ಯರಿಗೆ ಔತಣಕೂಡ ಏರ್ಪಡಿಸಿದ್ದರು. ಸಿನಿಮಾ, ಕ್ರಿಕೆಟ್ ಸೇರಿದಂತೆ ಯುವ ಉದ್ಯಮಿಗಳನ್ನು ಆಹ್ವಾನಿಸಲಾಗಿತ್ತು. ಸಿನಿಮಾ ಕ್ಷೇತ್ರದಿಂದ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್, ಹೊಂಬಾಳೆಯ ವಿಜಯ್ ಕಿರಗಂದೂರು, ನಟರಾದ ಯಶ್ ಮತ್ತು ರಿಷಬ್ ಶೆಟ್ಟಿ ಹಾಗೂ ಮಾಜಿ ರೇಡಿಯೋ ಜಾಕಿ ಶ್ರದ್ಧಾ ಜೈನ್ ಗೆ ಆಹ್ವಾನ ನೀಡಲಾಗಿತ್ತು. ಈ ವೇಳೆ
ಕನ್ನಡ ಚಿತ್ರರಂಗದ ಎಲ್ಲರ ಪರವಾಗಿ ಮನವಿ ಮಾಡಿದ ನಟ ಯಶ್, ಒಂದೊಳ್ಳೆ ಸೌಕರ್ಯವಿರುವ ಫಿಲ್ಮ್ ಸಿಟಿಯನ್ನು ರಾಜ್ಯದಲ್ಲಿಯೇ ನಿರ್ಮಿಸಿದರೆ ವಿದೇಶಗಳಿಗೆ ಹೋಗಿ ಶೂಟಿಂಗ್ ಮಾಡುವ ಹೊರೆ ಕಡಿಮೆ ಆಗಲಿದೆ ಎಂದು ತಿಳಿಸಿದ್ದು, ಪ್ರಧಾನಿ ಅವರಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ ಎನ್ನಲಾಗಿದೆ.

ಇನ್ನು ಪ್ರಧಾನಿ ಭೇಟಿ ಬಗ್ಗೆ ಖಾಸಗಿ ಚಾನಲ್ ಗೆ ಮಾತನಾಡಿದ ನಟ ರಿಷಬ್, ತುಂಬಾ ಅಧ್ಬುತವಾದ ಚಾರ್ಮಿಂಗ್ ವ್ಯಕ್ತತ್ವ ಅವರದ್ದು. ಪ್ರಧಾನಿ ಅವರನ್ನು ಭೇಟಿ ಯಾಗುವುದೆಂದರೆ ತುಂಬಾನೇ ಖುಷಿಯ ವಿಚಾರ.. ಇದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಒಳಗೆ ಹೋಗುತ್ತಿದ್ದಂತೇ ಪ್ರಧಾನಿಯವರೇ ರಿಸೀವ್ ಮಾಡಿ ಮಾತನಾಡಿಸಿದರು. ದೇಶಕ್ಕೆ ಸಿನಿಮಾ ಇಂಡಸ್ಟ್ರಿ ಯಿಂದ ಆದ ಕೊಡುಗೆ.. ಕಾಂತಾರ ಕೆಜಿಎಫ್ ಸಿನಿಮಾ ಬಗ್ಗೆ ಇತ್ತೀಚಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದೆವು. ಮತ್ತು ನಮ್ಮ ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ಮಾತುಕತೆ ನಡೆಯಿತು. ಕಾಂತಾರ ಸಿನಿಮಾವನ್ನು ಪ್ರಧಾನಿ ನೋಡಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಎಲ್ಲೆಲ್ಲಿ ತಲುಪಿದೆ ಅನ್ನೋ ಬಗ್ಗೆ ಸಹ ಅವರಿಗೆ ಮಾಹಿತಿ‌ಇದೆ. ನಮ್ಮ ನೆಲದ ಸಂಸ್ಕೃತಿ ಮೇಲೆ ಕಟ್ಟಿದ ಕಥೆ ಅಂತರಾಷ್ಟ್ರೀಯ ಮಟ್ಟದ ವರೆಗೆ ಹೋಗಿದ್ದರ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿಸಿದರು.

More News