ನವದೆಹಲಿ:ಫೆ.15: ಕ್ರೀಡಾ ಲೋಕದಲ್ಲೇ ಸಂಚಲನವನ್ನು ಸೃಷ್ಟಿಸುವ ಬಾಂಬ್ ಒಂದನ್ನ ಭಾರತ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಹಾಕಿದ್ದಾರೆ.. ಟೀಂ ಇಂಡಿಯಾದ ಆಟಗಾರರು ನಿಷೇಧಿತ ಚುಚ್ಚುಮದ್ದು ತೆಗೆದುಕೊಳ್ತಿದ್ದಾರೆ. ಆ ಮೂಲಕ ತಾವು ಫಿಟ್ ಎಂದು ಸಾಬೀತುಪಡಿಸುತ್ತಿದ್ದಾರೆ ಎಂದು
ವಿವಾದಾತ್ಮಕ ಹೇಳಿಕೆ ಮೂಲಕ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನವ್ನನೇ ಸೃಷ್ಟಿಸಿದ್ದಾರೆ.

WION NEWS ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಕ್ರೀಡಾ ಜಗತ್ತಿನ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಶೇಕಡಾ 80ರಷ್ಟು ಫಿಟ್ ಆಗಿರುವ ಅನೇಕ ಆಟಗಾರರು ಚುಚ್ಚುಮದ್ದಿನ ಮೂಲಕ 100 ಪ್ರತಿಶತ ಫಿಟ್ ಎಂದು ಸಾಬೀತುಪಡಿಸುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಟೀಂ ಇಂಡಿಯಾದಲ್ಲಿ ಕೆಲವು ಸ್ಟಾರ್ ಆಟಗಾರರಿದ್ದಾರೆ, ಅವರು ಫಿಟ್ ಇಲ್ಲದಿದ್ದರೂ ಬಲವಂತವಾಗಿ ಫಿಟ್ ಎಂದು ಘೋಷಿಸುತ್ತಾರೆ. ಅವರು ಬಳಸುವ ಚುಚ್ಚುಮದ್ದು ನೋವು ನಿವಾರಕವಲ್ಲ. ಈ ಚುಚ್ಚುಮದ್ದುಗಳು ಡೋಪ್ ಪರೀಕ್ಷೆಯಲ್ಲೂ ಸಿಕ್ಕಿಬೀಳದಂತಹ ಔಷಧದಿಂದ ಕೂಡಿದೆ. ಬಿಸಿಸಿಐ ವೈದ್ಯರನ್ನು ಹೊರತುಪಡಿಸಿ ಈ ಕ್ರಿಕೆಟಿಗರು ತಮ್ಮದೇ ಆದ ವೈದ್ಯರನ್ನು ಹೊಂದಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಒಂದನ್ನ ಸೃಷ್ಟಿಸಿದ್ದಾರೆ.




