ಬೆಂಗಳೂರು ಫೆ.16: ಅನುಷ್ಕಾ ಶೆಟ್ಟಿ... ಟಾಲಿವುಡ್ ಟಾಪ್ ಹೀರೋಯಿನ್. ಸೌತ್ ಸಿನಿ ರಂಗದ ಅತ್ಯಂತ ಜನಪ್ರಿಯ ನಟಿ. ಎಸ್. ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದಲ್ಲಿ ರಾಣಿ ದೇವಸೇನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕರಾವಳಿ ಬೆಡಗಿ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಮಿಂಚಿದ ಅನುಷ್ಕಾ ವಿಚಿತ್ರ ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದಾರಂತೆ.
ಫಿಟ್ ಆಗಿರ್ಬೇಕು. ಸಖತ್ ಆಗಿ ಕಾಣ್ಬೇಕೆಂದು ನಟ ನಟಿಯರು ಮಾಡೋ ಕಸರತ್ತು ಒಂದಾ ಎರೆಡಾ..? ಆದ್ರೆ ಎಷ್ಟೇ ಕಾಳಜಿ ವಹಿಸಿದರೂ ಆರೋಗ್ಯ ಒಮ್ಮೊಮ್ಮೆ ಕೈ ಕೊಟ್ಟು ಬಿಡುತ್ತದೆ.. ಸೌತ್ ಸಿನಿ ದಂತದ ಬೊಂಬೆ ಅನುಷ್ಕಾ ಶೆಟ್ಟಿಗೆ ತಡೆಯಲಾರದ ನಗುವಿನ ಸಮಸ್ಯೆ ಇದೆಯಂತೆ.

ಕೆಲ ಸಿನಿಮಾಗಳಲ್ಲಿ ಸುಖಾ ಸುಮ್ಮನೆ ನಗುವ ಪಾತ್ರಗಳನ್ನು ನೀವು ಇಲ್ಲಿ ನೆನಪು ಮಾಡ್ಕೊಳ್ಬಹುದು.. ಇತ್ತೀಚೆಗೆ ತೆರೆ ಕಂಡಿದ್ದ ಜೋಕರ್ ಸಿನಿಮಾದಲ್ಲಿ ನಾಯಕ ನಟ ನಗುವಿನ ಸಮಸ್ಯೆಯಿಂದ ಬಳಲಿ ಕೊನೆಗೆ ಮುಜುಗರಕ್ಕೆ ಈಡಾಗುವ ಸಾಕಷ್ಟು ಸಂದರ್ಭಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.. ಇದು ಭೀಕರ ಖಾಯಿಲೆ ಸಮಸ್ಯೆ ಏನೂ ಅಲ್ಲದಿದ್ದರೂ, ಸುಖಾಸುಮ್ಮನೆ ಅತಿಯಾಗಿ ನಗುವುದು ಮುಜುಗರ ಉಂಟು ಮಾಡಿಬಿಡುತ್ತದೆ..
ಈ ಬಗ್ಗೆ ಒಮ್ಮೆ ಮಾತನಾಡಿದ್ದ ನಟಿ ಅನುಷ್ಕಾ ಶೆಟ್ಟಿ, ತಡೆಯಲಾರದ ನಗು ನನ್ನನ್ನು ಕಾಡುತ್ತಿದೆ ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ಒಮ್ಮೆ ನಗುವುದಕ್ಕೆ ಶುರು ಮಾಡಿದ್ರೆ ಕನಿಷ್ಠ 10 ರಿಂದ 15 ನಿಮಿಷ ನಗುತ್ತಲೇ ಇರುತ್ತೇನೆ ಎಂದು ನಟಿ ಅನುಷ್ಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಸ್ವೀಟಿ ಸಿನಿಮಾಗಾಗಿ ತೂಕವನ್ನು ಹೆಚ್ಚಿಸಿಕೊಂಡಿದ್ದ ನಟಿ, ಆ ತೂಕ ಇಳಿಸಲು ಸಿಕ್ಕಾಪಟ್ಟೆ ಕಸರತ್ತು ನಡೆಸ್ತಿದ್ದಾರೆ. ಇದೇ ಕಾರಣದಿಂದ ಸಿನಿಮಾಗಳಲ್ಲಿ ನಟಿಸಲು ಗ್ಯಾಪ್ ನೀಡಿದ್ದಾರಂತೆ. ಸಿನಿಮಾದಿಂದ ದೂರ ಉಳಿದು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ನಟಿ ಅನುಷ್ಕಾ ಶೆಟ್ಟಿ ಕ್ರೇಜಿ ಚಿತ್ರವೊಂದಕ್ಕೆ ಸಹಿ ಹಾಕಿದ್ದು, ದೇಹದ ತೂಕ ಇಳಿಸುವ ಕಸರತ್ತು ನಡೆಸುತ್ತಿದ್ದಾರಂತೆ.




