Shivaratri : ಶಿವರಾತ್ರಿ ಜಾಗರಣೆ ಕಳೆಯಲು ರಾಜಕುಮಾರ–ಕಾಂತಾರ ಮರು ಪ್ರದರ್ಶನ

ಬೆಂಗಳೂರು:ಫೆ.18: ಶಿವರಾತ್ರಿ ಹಬ್ಬ ಅಂದ್ರೆ ಅದೊಂದು ಸಡಗರ.. ಗ್ರಾಮೀಣ ಭಾಗದಲ್ಲಿ ವಿವಿಧ ಆಟಗಳನ್ನು ಆಡುವ ಮೂಲಕ ಜಾಗರಣೆಯನ್ನು ಮಾಡುತ್ತಾರೆ. ಆದರೆ, ನಗರ ಪ್ರದೇಶದಲ್ಲಿನ ಜನರು ಆಟ-ಪಾಠಗಳನ್ನು ಆಡುವ ಅಭ್ಯಾಸವನ್ನು ಅಷ್ಟಾಗಿ ಬೆಳೆಸಿಕೊಂಡಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ವಿಶೇಷವಾಗಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಶಿವರಾತ್ರಿ ಹಬ್ಬದ ದಿನದಂದು ಜಾಗರಣೆಯನ್ನು ಕಳೆಯಲು ರಿಷಬ್ ಶೆಟ್ಟಿ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಇಬ್ಬರು ನಟರ ವಿಶೇಷ ಸಿನಿಮಾಗಳ ಮರು ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ದೇಶದಾದ್ಯಂತ ಬಿಡುಗಡೆಯಾಗಿ ಕೋಟ್ಯಾಂತರ ರೂ.ಗಳನ್ನು ಗಳಿಸುವ ಮೂಲಕ ಬಾಕ್ಸಾಪೀಸ್ ನಲ್ಲಿ ಸಖತ್ ಹಿಟ್ ಆದಂತರ ಕಾಂತಾರ ಸಿನಿಮಾ ಈಗಾಗಲೇ ಒಟಿಟಿ ನಲ್ಲಿ ಸಹ ಬಿಡುಗಡೆಯಾಗಿ ಜನರ ಮನೆ ಮನೆಗಳಿಗೆ ತಲುಪಿದೆ. ಆದರೂ, ಕಾಂತಾರ ಸಿನಿಮಾ ಮೇಲಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹಬ್ಬದ ದಿನದಂದು ಜಾಗರಣೆಯನ್ನು ಕಳೆಯಲು ಅಭಿಮಾನಿಗಳು ವಿಶೇಷ ಪ್ರದರ್ಶನ ಏರ್ಪಡಿಸಿದ್ದು, ಫೆ.19 ರಂದು ಬೆಳಗ್ಗೆ 12 ಗಂಟೆಗೆ ಹಾಗೂ 3 ಗಂಟೆಗೆ ಹೈದರಾಬಾದ್ ನಲ್ಲಿನ ಸಪ್ತಗಿರಿ ಥಿಯೇಟರ್ ನಲ್ಲಿ ಕಾಂತಾರ ಸಿನಿಮಾ ವಿಶೇಷ ಪ್ರದರ್ಶನ ನಡೆಸುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಲಕ್ಷಾಂತರ ಜನರು ಅವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿದರು. ಅವರ ಸಮಾಧಿ ಬಳಿ ಇಂದಿಗೂ ಜನ ಸಾಗರವು ಹರಿದುಬರುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದ ರಾಜಕುಮಾರ ಸಿನಿಮಾ ಅನ್ನು ಫೆಬ್ರವರಿ 19ರಂದು ಬೆಂಗಳೂರಿನ ಪೀಣ್ಯ ಏರಿಯಾದ ಭಾರತಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12.30ಕ್ಕೆ ಮರು ಪ್ರದರ್ಶಿಸಲು ಮುಂದಾಗಿದ್ದಾರೆ. ರಾಜಕುಮಾರ ಸಿನಿಮಾ ಕನ್ನಡ ಸಿನಿಮಾ ಇತಿಹಾಸದಲ್ಲಿ ಅತಿಹೆಚ್ಚು ಹಣವನ್ನು ಕಲೆಕ್ಷನ್ ಮಾಡಿತ್ತು ಎಂಬುದು ಮತ್ತೊಂದು ವಿಶೇಷವಾಗಿದೆ. ಈ ಸಿನಿಮಾ ಸಹ ಶಿವರಾತ್ರಿ ದಿನದಂದು ಜಾಗರಣೆಯನ್ನು ಕಳೆಯಲು ಮರು ಬಿಡುಗಡೆಗೆ ಚಿಂತನೆ ನಡೆಸಲಾಗಿದೆ.

More News