Behaving Badly : ಬಹಳ ಕೆಟ್ಟದಾಗಿ ವರ್ತನೆ ಮಾಡ್ತಿದ್ದಾರೆ ; ಇಬ್ಬರ ವಿರುದ್ಧ ಕ್ರಮ ಎಂದ ಗೃಹ ಸಚಿವ

ಬೆಂಗಳೂರು :ಫೆ.20: ಇಷ್ಟು ದಿನ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರ ಮಧ್ಯೆ ನಡೆಯುತ್ತಿದ್ದ ಗದ್ದಲ ಗಲಾಟೆ, ಆರೋಪ- ಪ್ರತ್ಯಾರೋಪಗಳು ಈಗ ಮಹಿಳಾ ಅಧಿಕಾರಿಗಳಿಗೆ ಶಿಪ್ಟ್ ಆಗ್ತಿದೆ. ಉನ್ನತ ಹುದ್ದೆ ಅಲಂಕರಿಸಿದ ಅಧಿಕಾರಿಗಳೇ ಬೀದಿ ಕಾಳಗಕ್ಕೆ ಇಳಿದ ಕಾರಣ ಸರ್ಕಾರ ಪೇಚಿಗೆ ಸಿಲುಕಿದಂತಾಗಿದೆ. ಟಾಪ್ ಆಫೀಸರ್ ಗಳ ಬೀದಿ ರಂಪಾಟಕ್ಕೆ ಬ್ರೇಕ್ ಹಾಕಲು ಸಿಎಂ ಬಸವರಾಜ್ ಮುಂದಾಗಿದ್ದು, ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸಿಎಸ್ ಮೂಲಕ ಇಂದು ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡುವ ಸಾಧ್ಯತೆ

ಇಬ್ಬರು ಅಧಿಕಾರಿಗಳ ಸಾಮಾಜಿಕ ಜಾಲತಾಣದ ಕಿತ್ತಾಟದ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಿಎಂ, ಹೀಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಟ ನಡೆಸುತ್ತಿರೋದ್ರಿಂದ ಕಾನೂನು ಚೌಕಟ್ಟಿನಲ್ಲಿ ಕ್ರ‌ಮ ಕೃಗೊಳ್ಳಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದು, ಬಹಿರಂಗ ಕಿತ್ತಾಟದ ಕಾರಣ ಕೇಳಿ ನೋಟಿಸ್ ನೀಡುವ ಸಾಧ್ಯತೆ ಇದೆ.

ಇಬ್ಬರು ಟಾಪ್ ಆಫೀಸರ್ ಗಳ ಕಚ್ಚಾಟ ವಿಚಾರದ ಕುರಿತು ನಗರದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸರ್ಕಾರ ಕಣ್ಮುಚ್ಚಿ‌‌ ಕೂತಿಲ್ಲ. ಅವರಿಬ್ವರ ವಿರುದ್ಧವೂ ಕ್ರಮ ಆಗುತ್ತೆ. ಸಾಮಾನ್ಯ ಜನರು ಈ ರೀತಿ ಮಾತನಾಡಲ್ಲ. ಬಹಳ ಕೆಟ್ಟದಾಗಿ ವರ್ತನೆ ಮಾಡ್ತಿದ್ದಾರೆ ಎಂದು ಗರಂ ಆದರು.

ಜನರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದೇವ ಮಾನವರು ಅಂದುಕೊಂಡಿದ್ದಾರೆ.‌ ಆದರೆ ಇವರಿಂದ ಎಲ್ಲ ಅಧಿಕಾರಿಗಳಿಗೂ ಅಪಮಾನ ಆಗಿದೆ. ಈಗಾಗಲೇ ಡಿಜಿ ಹಾಗೂ ಸಿಎಸ್ ಜೊತೆಗೂ ಮಾತಾಡಿದ್ದೇನೆ.‌ ಅವರ ವ್ಯೆಯಕ್ತಿ ವಾಗಿ ಏನೇನೋ ಮಾತಾಡ್ತಾ ಇದ್ದಾರೆ. ಇವರಿಂದ ನನಗೂ ತುಂಬಾ ನೋವು ಆಗಿದೆ.‌ ಕಾನೂನು ಚೌಕಟ್ಟಿನೊಳಗೆ ಏನು ಕ್ರಮ ತಗೊಬೇಕೋ ಅದನ್ನು ಸಿಎಂ ತೆಗೆದುಕೊಳ್ಳುತ್ತಾರೆ. ಇಂತಹ ಅಧಿಕಾರಿಗಳ ವರ್ತನೆಯನ್ನು ನಿಜಕ್ಕೂ ಸಹಿಸೋಕೆ ಸಾಧ್ಯ ಇಲ್ಲ ಎಂದು ಗರಂ ಆದರು.

ಡಿ ರೂಪಾ ಹಾಗೂ ರೋಹಿಣಿ ಸಿಂಧೂರಿ ವಿರುದ್ದ ಗರಂ ಆದ ಗೃಹ ಸಚಿವರು‌, ಇವರದ್ದು ಪರ್ಸನಲ್ ಏನಾದರೂ ಇರಬಹುದು. ಆದರೆ ವೈಯಕ್ತಿಕ ಕಾರಣದಿಂದ ಬೀದಿ ರಂಪಾಟ ಸರಿಯಲ್ಲ.‌ಇವರಿಬ್ಬರೂ ಆಡ್ತಿರುವ ಆಟ, ನಡವಳಿಕೆ ಸರಿಯಲ್ಲ. ಐಪಿಎಸ್, ಐಎಎಸ್ ವಲಯಕ್ಕೆ ಅವಮಾನ. ನಾನು ಡಿಜಿಪಿ‌ ಜತೆ ಮಾತಾಡಿದ್ದೀನಿ ಎಂದರು.

More News