ಬೆಂಗಳೂರು:ಫೆ.20: ರೋಹಿಣಿ ಸಿಂಧೂರಿ ಐಎಎಸ್ ಹಾಗೂ ಡಿ.ರೂಪಾ ಐಪಿಎಸ್ ಇಬ್ಬರು ಮಹಿಳಾ ಅಧಿಕಾರಿಗಳ ಜಡೆಜಗಳದ ಬಗ್ಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಅವರವರ ಮಿತಿಯಲ್ಲಿ ಇರಬೇಕಿತ್ತು. ಅವರವರ ಮನೆ ವಿಚಾರಗಳನ್ನು ಸಾರ್ವಜನಿಕಕ್ಕೆ ತರುವ ಮುನ್ನ ಯಾವ ಸ್ಥಾನದಲ್ಲಿ ಇದ್ದೇವೆ ಎಂದು ಆಲೋಚನೆ ಮಾಡಬೇಕಿತ್ತು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ಗಲಾಟೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಇದು ಅವರ ವೈಯಕ್ತಿಕ ಆಟ ಅಂತಾ ನಾವು ಸುಮ್ಮನಿದ್ದೆವು. ಇದು ಹೀಗೆ ಮುಂದುವರೆದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿಧಾನಸೌಧದವರೆಗೂ ಬಂದು ಮುಂದುವರಿಯುತ್ತೆ ಅಂದ್ರೆ ಸುಮ್ಮನಿರಲು ಆಗಲ್ಲ ಎಂದು ತಿಳಿಸಿದರು. ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಕಾನೂನಿನಡಿ ಏನು ಕ್ರಮ ತಗೋಬಹುದು ನೋಡ್ತೀವಿ. ಸರ್ಕಾರ ಬೇರೆ ರೀತಿ ಆಲೋಚನೆ ಮಾಡಬೇಕಾಗುತ್ತದೆ. ಏನೇನು ಆಗಿದೆ ಎಂದು ನೋಡಿ, ಶಿಸ್ತಿನ ಪಾಲನೆ ಆಗುವ ರೀತಿ ನೋಡಿಕೊಳ್ಳುತ್ತೇವೆ ಎಂದರು.

ರಾಜ್ಯ ಸರ್ಕಾರದ ಬೇರೆ ರೀತಿ ಆಲೋಚನೆ ಮಾಡಬೇಕಾಗುತ್ತದೆ. ವಿಧಾನಸೌಧದಲ್ಲಿ ಗಲಾಟೆ ಆಗುತ್ತೆ ಎಂದ್ರೆ ನೋಡ್ತೇವೆ. ಏನೇನು ಆಗಿದೆ ಎಂದು ನೋಡಿ, ಶಿಸ್ತಿನ ಪಾಲನೆ ಆಗುವ ರೀತಿ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.




