Private Photo : ರೋಹಿಣಿ ಸಿಂಧೂರಿ ವಿರುದ್ಧ ನಗ್ನ ಚಿತ್ರ ಬಾಂಬ್ ಸಿಡಿಸಿದ ಡಿ. ರೂಪಾ..!

ಬೆಂಗಳೂರು:ಫೆ.21: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಡಿ ನಡುವಿನ ಯುದ್ದ ಬೇರೆ ದಿಕ್ಕಿನೆಡೆಗೇ ತಿರುಗುತ್ತಿದೆ. ತಮ್ಮ ವಿರುದ್ಧ ದ ಆರೋಪಕ್ಕೆ ಸಿಡಿದೆದ್ದ ಸಿಂಧೂರಿ ಡಿ ರೂಪಾ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ಡಿ ರೂಪಾ ಕೂಡ ಮುಖ್ಯಕಾರ್ಯದರ್ಶಿಗೆ ಸಿಂಧೂರಿ ವಿರುದ್ಧ ಆರೋಪಿಸಿ ದೂರು ದಾಖಲಿಸಿದ್ದಾರೆ. ಇದರ ನಡುವೆ ಡಿ ರೂಪಾ ಮಾಡಿರೋ ಪೋಸ್ಟ್ ಸಾಕಷ್ಟು ಸದ್ದು ಮಾಡ್ತಿದೆ.

ರೋಹಿಣಿ, ಸಿಂಧೂರಿ ನಡುವಿನ ಕಾಳಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆರೋಪ ಗಳ ಮೇಲೆ ಆರೋಪ ಮಾಡುತ್ತಾ ಹೊರಟ ಅಧಿಕಾರಿ ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ನಗ್ನ ಬಾಂಬ್ ಸಿಡಿಸಿದ್ದಾರೆ. ನಿನ್ನೆ ಫೋಟೋಗಳ ಸ್ಯಾಂಪಲ್ ಹಾಕಿದ್ದ, ರೂಪಾ ಒಂದು ಹೆಜ್ಜೆ ಮುಂದೆ ಹೋಗಿ ರೋಹಿಣಿ ಸಿಂಧೂರಿ ನಗ್ನ ಚಿತ್ರದ ಬಗ್ಗೆಯೂ ಟ್ವೀಟ್ ಮಾಡಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.

ಫೋಟೋ ಹಾಕಿ ವಾಗ್ದಾಳಿ ನಡೆಸಿದ್ದ ಡಿ ರೂಪಾ ನಡೆಗೆ ಸಿಂಧೂರಿ ಅವರು ವ್ಯಂಗ್ಯ ವಾಗಿ ಪ್ರತಿಕ್ರಿಯೆ ನೀಡಿದ್ದರು. ಗೆಟ್ ವೆಲ್ ಸೂನ್ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಇನ್ನಷ್ಟು ಕುಪಿತರಾದ ರೂಪಾ ಡಿ, ರೋಹಿಣಿ ಸಿಂಧೂರಿ ವ್ಯಕ್ತಿಯೋರ್ವರಿಗೆ ನಗ್ನ ಚಿತ್ರವನ್ನು ಕಳಿಸಿದ್ದು, ವಾಪಸ್ ಡಿಲೀಟ್ ಮಾಡಿದ್ದಾರೆ.. ನಂಗೆ ಗೆಟ್ ವೆಲ್ ಸೂನ್ ಎಂದವರು ಈ ಚಿತ್ರಗಳ ಬಗ್ಗೆ ಮಾತಾಡ್ತಾರಾ..? ಎಂದು ಪ್ರಶ್ನೆ ಹಾಕಿದ್ದಾರೆ.

ರೋಹಿಣಿ ನಂಬರ್ ಎನ್ನಲಾದ ಸ್ಕ್ರೀನ್ ಶಾರ್ಟ್ ನ್ನು ಫೇಸ್ಬುಕ್ ಗೆ ಶೇರ್ ಮಾಡಿದ ರೂಪಾ, 10 ಡಿಲೀಟ್ ಆದ ಮೆಸೇಜ್ ಗಳು ಇದ್ದವು. ಆ ಡಿಲೀಡೆಡ್ ಮೆಸೇಜ್ ಕೆಳಗೆ ಮ್ಯಾಡ್ಲೀ.. ಸೋ ಮ್ಯಾಡ್ಲೀ.. ಬ್ಯುಟಿಫುಲ್ ಎಂಬ ಮೆಸೇಜ್ ಇರೋ ಸ್ಕ್ರೀನ್ ಶಾರ್ಟ್ ನ್ನು ಶೇರ್ ಮಾಡಿದ್ದಾರೆ. ಈ ಬಗ್ಗೆ ಮಾತಾಡ್ತಾರಾ ಸಿಂಧೂರಿ ಎಂದು ಪ್ರಶ್ನೆ ಹಾಕಿದ್ದಾರೆ.. ಇನ್ನು ಸಿಎಸ್ ಕಚೇರಿಗೆ ಸಿಂಧೂರಿ ಕಂಪ್ಲೇನ್ ಕೊಟ್ಟ ಬೆನ್ನಲ್ಲೇ ರೂಪಾ ಸಹ ದೂರು ದಾಖಲಿಸಿದ್ದಾರೆ. ಈ ಖಾಸಗಿ ಫೋಟೋಗಳನ್ನು ಸಿಂಧೂರಿ 2015 ರಲ್ಲಿ ಡಿಕೆ ರವಿಗೆ ಕಳಿಸಿದ್ದು, ಎನ್ನಲಾಗಿದ್ದು, ಅದರ ತನಿಖೆ ನಡೆಸಲು‌ಸಹ ಮುಂದಾಗಿದ್ದಾರೆ.

ಪ್ರೊಫೇಷನಲ್ ಫೈಟ್ ಬರ್ತಾ ಬರ್ತಾ ವೈಯಕ್ತಿಕ ಫೈಟ್ ಆಗಿ ಮುಂದುವರೆಯುತ್ತಿದ್ದು, ಇದು ನಗ್ನ ಚಿತ್ರಕ್ಕೆ ಕೊನೆಗೊಳ್ಳದೇ ದೊಡ್ಡ ಸತ್ಯವೇ ಹೊರ ಬರೋ ಲಕ್ಷಣ ಕಾಣುತ್ತಿದೆ.

More News