ROHINI v/s ROOPA FIGHT:ರೋಹಿಣಿ-ರೂಪಾ ರಂಪಾಟ: ರಾಜ್ಯ ಸರ್ಕಾರಕ್ಕೆ ಮುಜುಗರ: ಅಧಿಕಾರಿಗಳಿಗೆ ನೋಟಿಸ್ ಜಾರಿ

ಬೆಂಗಳೂರು.ಫೆ.21 : ರೋಹಿಣಿ ಸಿಂಧೂರಿ ಹಾಗೂ ಡಿ.ರೂಪ ಅವರುಗಳ ಬೀದಿ ರಂಪಾಟ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಇಬ್ಬರಿಗೂ ನೊಟೀಸ್ ಜಾರಿ ಮಾಡಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಸರ್ಕಾರದ ಅಧಿಕಾರಿಯ ವಿರುದ್ಧದ ಆರೋಪಕ್ಕೆ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡಿದ್ದೀರಾ, ಸೂಕ್ತ ವೇದಿಕೆಯನ್ನು ಬಳಸುವುದನ್ನು ಬಿಟ್ಟು ಮಾಧ್ಯಮ ಮುಂದೆ ಹೋಗಿರುವುದು ಎಷ್ಟು ಸರಿ ಎಂದು ರಾಜ್ಯ ಸರ್ಕಾರ ಪ್ರಶ್ನಿಸಿದೆ.

ಇದರಿಂದ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಮುಜುಗರ ಆಗಿದ್ದು, ಇದು ಭಾರತೀಯ ಸರ್ವೀಸ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಿಮ್ಮ ಆರೋಪಕ್ಕೆ ಸಕ್ಷಮ‌ ಪ್ರಾಧಿಕಾರದ ಮುಂದೆ ಮಾಡಬಹುದಿತ್ತು ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.

ಹೀಗಾಗಿ ನೀವು ಇನ್ನು ಮುಂದೆ ಮಾದ್ಯಮಗಳ ಹೋಗಬಾರದು ಎಂದು ಸೂಚನೆ ನೀಡಿರುವ ರಾಜ್ಯ ಸರ್ಕಾರ, ರಾಜ್ಯ ಸರ್ಕಾರದಿಂದ‌ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ಜಾರಿ ಮಾಡಲಾಗಿದೆ.


ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ರಿಂದ ನೊಟೀಸ್ ಜಾರಿ ಮಾಡಲಾಗಿದ್ದು, ಇದರಿಂದ ಹಾದಿ ಬೀದಿ ರಂಪಾಟಕ್ಕೆ ಸ್ವಲ್ಪ ವಿರಾಮ ನೀಡಿದಂತಾಗಿದೆ. ಇಬ್ಬರೂ ಅಧಿಕಾರಿಗಳೂ ಈ ಆದೇಶಕ್ಕೆ ಯಾವ ರೀತಿಯಲ್ಲಿ ಬೆಲೆ ನೀಡುತ್ತಾರೋ ಎನ್ನುವುದನ್ನು ಕಾದುನೋಡಬೇಕಾಗಿದೆ. ಇಲ್ಲ ತಮ್ಮ ರಂಪಾಟ ಮುಂದುವರೆಸುತ್ತಾರೋ ನೋಡಬೇಕು.

More News