ಬೆಂಗಳೂರು.ಫೆ.21: ಮುಂದೆ ಬರೋದು ಕಾಂತಾರ ಪಾರ್ಟ್ ಎರಡಲ್ಲ.. ಈ ಮೊದಲು ಬಿಡುಗಡೆ ಕಂಡದ್ದೇ ಕಾಂತಾರ ಪಾರ್ಟ್ ಎರಡು.. ಮುಂದೆ ಬರೋದು ಕಾಂತಾರ ಪಾರ್ಟ್ ಒಂದು ಎಂದು ಹೇಳೋ ಮೂಲಕ ಸಿನಿ ರಸಿಕರನ್ನು ಹಿಡಿದಿಟ್ಟಿದ್ದ ನಟ ರಿಷಬ್ ಕೊನೆಗೂ ಗುಡ್ ನ್ಯೂಸ್ ಒಂದನ್ನ ನೀಡಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮುಂಬೈನಲ್ಲಿ ಮಾತನಾಡಿದ ರಿಷಬ್, ಕಾಂತಾರ ಚಿತ್ರದ ಮತ್ತೊಂದು ಭಾಗ ತಯಾರಿ ಆರಂಭಿಸಿದ್ದೇನೆ.. ಇನ್ನೇನಿದ್ರೂ ನನ್ ಮೊಬೈಲ್ ಸ್ವಿಚ್ ಹಾಫ್ ಆಗಲಿದೆ ಎಂದು ಹೇಳೋ ಮೂಲಕ ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ.
ಕಾಂತಾರ ಚಿತ್ರದ ಹುಟ್ಟಿನ ಕಥೆ ಹೆಣೆಯೋ ಸಿದ್ದತೆಯಲ್ಲಿ ರಿಷಬ್ ಇದ್ದಾರೆ. ಇದರಲ್ಲಿ ದೈವದ ಹುಟ್ಟು, ನಾಡಿನ ಜನರ ಹಿಂದಿನ ಬದುಕಿನ ಚಿತ್ರಣ, ಸರ್ಕಾರದ ಧೋರಣೆ ಸೇರಿದಂತೆ ಇನ್ನಷ್ಟು ಇಂಟರೆಸ್ಟಿಂಗ್ ಕಹಾನಿ ಸೇರಿಸೋ ಕಸರತ್ತಲ್ಲಿ ರಿಷಬ್ ತೊಡಗಿದ್ದಾರೆ. ಈಗಾಗಲೇ ಚಿತ್ರದ ಕಥೆ ಹೆಣೆಯೋ ವೇಳೆ ನಟ, ನಿರ್ದೇಶಕ ರಿಷಬ್ ಕರಾವಳಿ ಭಾಗದ ಕಾಡಿನಲ್ಲಿ ಓಡಾಡಿದ್ದಾರೆ.. ಅಲ್ಲಿನ ಕಥೆಗಳನ್ನು ಕೇಳಿ, ತಮ್ಮದೇ ಸ್ಕ್ರಿಪ್ಟ್ ಒಂದನ್ನ ರೆಡಿಮಾಡಿಕೊಂಡು ಅಖಾಡಕ್ಕೆ ಇಳಿಯಲು ಸಿದ್ದರಾಗಿದ್ದಾರೆ.

ಕಾಂತಾರ ಸಿನಿಮಾ ಸಿಕ್ಕಾಪಟ್ಟೆ ಸಕ್ಸಸ್ ಕಂಡಾಯ್ತು.. ಮುಂದೇನು.. ಕಾಂತಾರ ಮುಂದಿನ ಭಾಗ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ನಟ ರಿಷಬ್,ಮಾರ್ಚ್‌ನಿಂದಲೇ ಕಾಂತಾರ-2′ ಪ್ರಾರಂಭವಾಗಲಿದೆ. ಇನ್ಮುಂದೆಕಾಂತಾರ 2′ ಕೆಲಸ ಶುರು ಮಾಡುತ್ತೇನೆ. ಮಾರ್ಚ್‌ನಿಂದ ಫೋನ್ ಆಫ್ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.
ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದದ್ದು ಹಿಂದಿ ಚಿತ್ರ ಕ್ಕೆ
ಪ್ರಶಸ್ತಿ ಕುರಿತು ಮಾತನಾಡಿದ ಅವರು, ಕಾಂತಾರ ಹಿಂದಿಯಲ್ಲೂ ತೆರೆ ಕಂಡಿತು. ಹಿಂದಿ ಸಿನಿಮಾಗೆ ಕೊಟ್ಟ ಪ್ರಶಸ್ತಿ ಇದಾಗಿದೆ. ಕನ್ನಡ ಸಿನಿಮಾಗೆ ಅಲ್ಲ. ಪ್ರಶಸ್ತಿ ಸಿಕ್ಕಿದ್ದು ತುಂಬಾನೇ ಖುಷಿಯ ವಿಷಯ. ಜವಾಬ್ದಾರಿ ಹೆಚ್ಚು ಆಯ್ತು ಅನ್ನಿಸುತ್ತೆ. ಪ್ರಶಸ್ತಿ ಸ್ವೀಕಾರ ವೇಳೆ ನಮ್ಮ ಟ್ರೆಡಿಷನಲ್ ಸ್ಟೈಲಿನಲ್ಲಿ ಹೋಗಿದ್ದೆ. ಅಲ್ಲಿದ್ದವರೆಲ್ಲಾ ಗುರುತಿಸಿದರು ಎಂದು ಸಂತಸ ವ್ಯಕ್ತಪಡಿಸಿದರು.




