ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ ಕಿತ್ತಾಟ ನಡುವೆ ರೂಪಾ ಪತಿ ಮುನೀಶ್ ವರ್ಗಾವಣೆ ಸಧ್ಯ ಕುತೂಹಲ ಮೂಡಿಸಿದೆ. ಸಿಂಧೂರಿ, ರೂಪಾ ಟ್ರ್ಯಾನ್ಸ್ ಫರ್ ಒಕೆ.. ಮುನೀಶ್ ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಕಳೆದ ಎರಡು ದಿನಗಳಿಂದ ಐಎಎಸ್ ಅಧಿಕಾರಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಜಟಾಪಟಿ ಶುರುವಾಗಿದೆ. ತೀರ ಕೆಟ್ಟದಾಗಿ ನಡ್ಕೊಳ್ತಿದ್ದಾರೆ ಎಂದು ಗೃಹ ಸಚಿವ ಅರಗ ದೂರಿದ ನಂತರವೂ ಇವರ ಕಾಳಗ ಮುಂದುವರೆದಿತ್ತು.. ಇದರಿಂದ ಸರ್ಕಾರ ಮುಜುಗರಕ್ಕೂ ಒಳಗಾಗಿತ್ತು. ಇಬ್ಬರಿಗೂ ಬಿಸಿ ಮುಟ್ಟಿಸಲು ಮುಂದಾಗಿದ್ದ ರಾಜ್ಯ ಸರ್ಕಾರ ಸೈಲೆಂಟ್ ಇರುವಂತೆ ನೋಟಿಸ್ ನ್ನೂ ನೀಡಿತು. ಆದರೆ ಇವರ ರಂಪಾಟ ನಿಲ್ಲಿಸಲು ಯಾವ ಅಸ್ತ್ರವೂ ವರ್ಕೌಟ್ ಆಗದ ಕಾರಣ ರಾಜ್ಯ ಸರ್ಕಾರ ವರ್ಗಾವಣೆ ಅಸ್ತ್ರ ಬಳಸಿದೆ.. ಸಿಂಧೂರಿ ಹಾಗೂ ರೂಪಾ ರಿಗೆ ಸ್ಥಳದ ನಿಯುಕ್ತಿ ಗೊಳಿಸದೇ ವರ್ಗಾವಣೆ ಮಾಡಿ ಆದೇಶ ನೀಡಿದೆ.

ಟಾಪ್ ಆಫೀಸರ್ ಗಳಾದ ಇಬ್ಬರು ಮಹಿಳಾ ಮಣಿಯರ ಗಲಾಟೆ ಗದ್ದಲ ಸರ್ಕಾರಕ್ಕೆ ಮುಜುಗರವಾಗಿ ವರ್ಗಾವಣೆ ಮಾಡಿತು. ಆದರೆ ಇಲ್ಲಿ ಇರುವ ಕುತೂಹಲ ವಿಚಾರವೆಂದರೆ ಐಪಿಎಸ್ ಅಧಿಕಾರಿ ಡಿ ರೂಪಾ ಪತಿ ಮುನೀಶ್ ಮೌದ್ಗಿಲ್ ಗೆ ಡಿಪಿಆರ್ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಆದೇಶ ಹೊರಡಿಸಿದ್ದು..!
ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸಹಜವಾದರೂ ಸಹ ರೂಲ್ಸ್ ವಯಲೇಷನ್ ವಿಚಾರದಲ್ಲಿ ವರ್ಗಾವಣೆ ಆದ ಸಂದರ್ಭದಲ್ಲಿ ಒಂದಷ್ಟು ಕಾರಣ ಇಟ್ಟುಕೊಂಡೇ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಹಾಗಿದ್ದರೆ ಈ ಮಹಿಳಾಮಣಿಯರ ಜಟಾಪಟಿ ನಡುವೆ ಮುನೀಶ್ ಪಾತ್ರ ಏನು ಎಂಬ ಕುತೂಹಲ ಸಾಮಾನ್ಯವಾಗಿ ಮೂಡುತ್ತದೆ. ವರ್ಗಾವಣೆ ಮೂಲಕ ಮುನೀಶ್ ಪಾತ್ರ ಇರೋದಂತು ಸತ್ಯ ಅನ್ನೋದು ಸರ್ಕಾರದ ನಡೆಯಿಂದ ಗೊತ್ತಾಗಿದೆ. ಹಾಗಿದ್ರೆ ಮುನೀಶ್ ಪಾತ್ರ ಇರೋದು ಭ್ರಷ್ಟಾಚಾರ ವಿಚಾರದಲ್ಲಾ..? ಅಥವಾ ಖಾಸಗಿ ಫೋಟೋ ವಿಚಾರದಲ್ಲಾ ಎಂಬ ಬಿಸಿ ಬಿಸಿ ಚರ್ಚೆ ಗೆ ಸರ್ಕಾರದ ನಡೆ ಎಡೆ ಮಾಡಿ ಕೊಟ್ಟಿದೆ.




