THESE VISUALS ARE FAKE Mr. C T RAVI?: ಇದೇನು ಸಿಟಿ ರವಿಯವರೇ: ಈ ದೃಶ್ಯಗಳು ಸುಳ್ಳಾ ಅಥವಾ ನೀವು ಹೇಳುತ್ತಿರುವುದು ಸುಳ್ಳಾ?

ಕಾರವಾರ: ಬಿಜೆಪಿ ಶಾಸಕ ಸಿ.ಟಿ.ರವಿ ಮಾಂಸಾಹಾರ ಮಾಡಿ ದೇಗುಲ ಭೇಟಿಗೆ ಮಹತ್ವದ ಸಾಕ್ಷ್ಯ ಸಿಕ್ಕಿದ್ದು, ದೃಶ್ಯಗಳು, ಫೋಟೋಗಳು ಇದ್ದರೂ ಕೂಡ ನಾನು ದೇವಸ್ಥಾನದ ಒಳಗೆ ಹೋಗಿಲ್ಲ ಎಂದು ವಿತಂಡ ವಾದದ ಮಾತುಗಳನ್ನು ಹೇಳಿದ್ದಾರೆ.

ಮಾಂಸಾಹಾರ ಸೇವಿಸಿ ಕರಿಬಂಟ ಹನುಮ ದೇಗುಲಕ್ಕೆ ಭೇಟಿ ನೀಡಿದ್ದ ಸಿ.ಟಿ.ರವಿ, ದೇಗುಲದ ಗರ್ಭಗುಡಿ ಮುಂದೆಯೇ ನಿಂತು ಕೈ ಮುಗಿದಿದ್ದರು. ಆದರೆ, ನಾನು ದೇಗುಲಕ್ಕೆ ಹೋಗೇ ಇಲ್ಲ ಎಂದು ವಾದ ಮಂಡಿಸಿದ್ದರು. ನಾಗಬನ ದೇಗುಲಕ್ಕೂ ಮುಂಚೆಯೇ ಕರಿಬಂಟ ಹನುಮ ದೇಗುಲಕ್ಕೆ ಅವರು ಭೇಟಿ ನೀಡಿದ್ದರು.
ನಾನು ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿಲ್ಲ – ಸಿ ಟಿ ರವಿ
ಇದಕ್ಕೂ ಮುನ್ನ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಖಂಡಿತ ನಾನು ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ನನಗೆ ದೇವರಲ್ಲಿ ಶ್ರದ್ಧೆ ಇದೆ, ಮಾಂಸ ತಿಂದು ನಾನು ಹೋಗಿಲ್ಲ, ದೇಗುಲಕ್ಕೆ ಬೀಗ ಹಾಕಿದ್ದರಿಂದ ರೋಡಲ್ಲೇ ನಿಂತು ಕೈ ಮುಗಿದು ಬಂದಿದ್ದೇನೆ ಎಂಬ ಉಡಾಫೆ ಮಾತು.

ನಾನು ಹುಟ್ಟಿರೋದು ಮಾಂಸ ತಿನ್ನೋ ಜಾತಿಯಲ್ಲಿ, ಸುಮ್ಮನೆ ವಿವಾದ ಮಾಡಲೇಬೇಕು ಅಂತ ಮಾಂಸಹಾರದ ವಿಚಾರ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು. ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಅನ್ನುವವ ನಾನಲ್ಲ ಎಂಬ ಸಮಜಾಯಿಸಿ ನೀಡಿದ್ದಾರೆ.

ಆದರೆ, ದಿ ನ್ಯೂಸ್ ಪೆಗ್ ಗೆ ಸಿಕ್ಕಿರುವ ಫೋಟೋ ಹಾಗೂ ದೃಶ್ಯಗಳು ಅವರು ದೇಗುಲದ ಒಳಗೆ ಪ್ರವೇಶಿಸಿ ದೇವರಿಗೆ ಕೈ ಮುಗಿದಿದ್ದಾರೆ. ಅದು ಸತ್ಯ.

More News