Martin Teaser: ಖಡಕ್ ಮೈಕಟ್ಟು.. ಎದುರಾಳಿಯನ್ನು ಕುಟ್ಟಿ ಪುಡಿ ಮಾಡೋ ಸರ್ಜಾ ಸ್ಟೈಲ್ ಗೆ ಅಭಿಮಾನಿಗಳು ಬೋಲ್ಡ್

ಬೆಂಗಳೂರು ಫೆ.24: ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ. ಆ ನಾಯಕನ ಸುತ್ತ ಹೆಣೆದ ಕಥೆಗೆ ನಟ ಧ್ರುವ ಸರ್ಜಾ ಬಣ್ಣ ಹಚ್ಚಿದ್ದಾರೆ…ಖಡಕ್ ಮೈಕಟ್ಟು.. ಎದುರಾಳಿಗಳನ್ನು ಕುಟ್ಟಿ ಪುಡಿ ಮಾಡೋ ಸರ್ಜಾ ಸ್ಟೈಲ್ ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಧ್ರುವ ಸರ್ಜಾ ನಟನೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಟೀಸರ್ ಬಿಡುಗಡೆ ಕಂಡಿದ್ದು, ಸಿನಿಮಾ ತುಂಬಾ ಹೊಡೆದಾಟ, ಬಂದೂಕು, ಬಾಂಬುಗಳೇ ಘರ್ಜಿಸಿವೆ.

ಮಾರ್ಟಿನ್ ಸಿನಿಮಾಗೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸ್ಟೋರಿ ಬರೆದಿದ್ದು, ಎಪಿ ಅರ್ಜುನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.. ಚಿತ್ರಕ್ಕೆ ರವಿಬಸ್ರೂರ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಮಣಿ ಶರ್ಮಾ ಹಾಡುಗಳನ್ನು ಕಂಪೋಸ್ ಮಾಡಿದ್ದು, ಸಿನಿಮಾ ಮಾಸ್ ಆಗಿರಲಿದೆ ಅನ್ನೋದಕ್ಕೆ ಟೀಸರ್ ಸಾಕ್ಷಿಯಾಗಿದೆ.

ಯಶ್, ಸುದೀಪ್, ಗೆ ಕಾಂಪಿಟೇಟರ್ ಆಗಿ ನಿಲ್ಲೋ ಲಕ್ಷಣ ಕಾಣ್ತಿದೆಯಲ್ಲಾ ಎಂಬ ಪ್ರಶ್ನೆಗೆ ಮಾತನಾಡಿದ ಸರ್ಜಾ,
ಅವರೆಲ್ಲರೂ ನನ್ನ ಸಹೋದ್ಯೋಗಿಗಳು. ನಾನು ನನ್ನ ಸ್ನೇಹಿತರೊಂದಿಗೆ ಸ್ಪರ್ಧೆ ಮಾಡಲ್ಲ. ಸುದೀಪ್ ಸರ್ ಸೀನಿಯರ್ ನಟ. ಹಾಗೇ ಯಶ್ ಸರ್ ಕೂಡ ಸೀನಿಯರ್ ಆ್ಯಕ್ಟರ್. ಅವರೆಲ್ಲರೂ ನನ್ನ ಸಹೋದ್ಯೋಗಿಗಳು. ಹಾಗಾಗಿ ಅವರೊಂದಿಗೆ ನಾನು ಕಾಂಪಿಟ್ ಮಾಡುವುದಿಲ್ಲ. ನನ್ನೊಂದಿಗೆ ನಾನೇ ಕಾಂಪಿಟ್ ಮಾಡುತ್ತೇನೆ ಎಂದು ಹೇಳಿದರು.

ಇನ್ನು ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್,ಚಿಕ್ಕಣ್ಣ, ಮಾಳವಿಕ ಅವಿನಾಶ್,ಅಚ್ಯುತ್ ಕುಮಾರ್,ನಿಖಿತಿನ್ ಧೀರ್, ನವಾಬ್ ಶಾ ಹಾಗೂ ರೋಹಿತ್ ಪಾಟಕ್ ತಾರಾಬಳಗ ಬಣ್ಣ ಹಚ್ಚಿದೆ. ಸತ್ಯ ಹೆಗ್ಡೆ ಕ್ಯಾಮರಾ ಹಾಗೂ ಕೆ ಎಂ ಪ್ರಕಾಶ್ ಎಡಿಟಿಂಗ್ ಸಿನಿಮಾಗೆ ಇದೆ.

More News