ಬೆಂಗಳೂರು ಫೆ.24: ಐಎಎಸ್ ರೋಹಿಣಿ ಸಿಂಧೂರಿ ವರ್ಸಸ್ ಐಪಿಎಸ್ ರೂಪಾ ಕಾಳಗ ಕೋರ್ಟ್ ಮೆಟ್ಟಿಲೇರಿದೆ. ಸೋಷಿಯಲ್ ಮೀಡಿಯಾ ದಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಪೋಸ್ಟ್ ಹಾಕಿ ಸಂಚಲನ ಸೃಷ್ಟಿಸುತ್ತಿದ್ದ ಐಪಿಎಸ್ ಅಧಿಕಾರಿ ರೂಪಾ ಬಾಯಿಗೆ ಕೋರ್ಟ್ ಬೀಗ ಹಾಕಿದೆ. ಈಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯ ಸೈಲೆಂಟ್ ವಾರ್ ಶುರುವಾಗಿದೆ.

ಸಿಂಧೂರಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಬೆಂಗಳೂರಿನ ಮೆಯೋ ಹಾಲ್ ಬಳಿ ಇರುವ ಸಿವಿಲ್ ಕೋರ್ಟ್ ಮಧ್ಯಂತರ ನಿರ್ಬಂಧ ವಿಧಿಸಿದೆ. ರೂಪಾ ಸೇರಿದಂತೆ 59 ಪ್ರತಿವಾದಿ ಮಾಧ್ಯಮ ಸಂಸ್ಥೆಗಳಿಗೆ ಕೋರ್ಟ್ ಮಧ್ಯಂತರ ವಿಧಿಸಿ, ನೋಟಿಸ್ ಜಾರಿಗೆ ಆದೇಶಿದೆ. ಮಾರ್ಚ್ 7 ರ ವರೆಗೆ ಸಿಂಧೂರಿ ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ.

ಇದಿಷ್ಟಕ್ಕೇ ಸುಮ್ಮನಾಗದ ಸಿಂಧೂರಿ, ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಪಟ್ಟನ್ನ ಹಿಡಿದಿದ್ದಾರೆ. ಪೊಲೀಸ್ ಆಯುಕ್ತ ರಿಗೆ ಪತ್ರವನ್ನು ಬರೆದಿರುವ ಸಿಂಧೂರಿ, ಬಾಗಲಗುಂಟೆ ಠಾಣೆಯಲ್ಲಿ ಫೆಬ್ರವರಿ 28 ರಂದು ದಾಖಲಾದ ಕೇಸ್ ಸಂಬಂಧ ಎಫ್ ಐ ಆರ್ ದಾಖಲಿಸುವಂತೆ ಪತ್ರ ಬರೆದಿದ್ದಾರೆ. ದೂರನ್ನು ಸಧ್ಯ ಪಿಟಿಷನ್ ಎಂದು ಪೊಲೀಸರು ಪಡೆದಿದ್ದಾರೆ.

ಇತ್ತ ಕಾನೂನು ಹೋರಾಟ ಮುಂದುವರೆಸಲು ರೂಪಾ ಸಹ ತೆರೆ ಮರೆ ಸಿದ್ದತೆ ನಡೆಸುತ್ತಿದ್ದಾರೆ. ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಮಾಡಿದ್ದಾರೆ ಎನ್ನಲಾದ ಆರೋಪದ ವಿರುದ್ಧ ಬೇಹುಗಾರಿಕೆ ನಡೆಸಿ ಕಲೆ ಹಾಕಿದ ಸುದ್ದಿ, ಡಾಕ್ಯುಮೆಂಟ್ ಕೋರ್ಟ್ ಗೆ ನೀಡಲು ಸಿದ್ದತೆ ನಡೆಸ್ತಿದ್ದಾರೆ. ಮುಂದೆ ಈ ಗದ್ದಲ ಯಾವ ಹಂತಕ್ಕೆ ತಲುಪಲಿದೆ ಅನ್ನೋದನ್ನು ಕಾದು ನೋಡ್ಬೇಕಿದೆ.




