AKSHAY KUMAR LEAVE CANADA: ಕೆನಡಾ ಪೌರತ್ವ ತೊರೆಯಲು ಸಜ್ಜಾದ ನಟ ಅಕ್ಷಯ್ ಕುಮಾರ್: ಭಾರತವೇ ನಂಗೆಲ್ಲಾ ಎಂದು ಭಾವುಕ

ಮುಂಬೈ : 1990ರ ದಶಕದಲ್ಲಿ ನಟ ಅಕ್ಷಯ್ ಕುಮಾರ್ ನಟನೆಯಲ್ಲಿ ತೆರೆ ಕಂಡ ಬಹುತೇಕ ಚಿತ್ರಗಳು ಫ್ಲಾಪ್ ಕಂಡವು. ಈ ಕಾರಣದಿಂದಾಯೇ ಕೆನಡಾ ಪೌರತ್ವ ಬದಲಿಸದೇ ಹಾಗೇ ಇದ್ದೆ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ..
ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಿಂದೂ ಪರ ವಾದ ಮಂಡಿಸಿದಾಗಲೆಲ್ಲ ಟೀಕೆಗೆ ಗುರಿಯಾಗುತ್ತಿದ್ದರು.. ನಮ್ಮ ದೇಶದ ಪೌರತ್ವನ್ನೂ ಪಡೆಯದ ವ್ಯಕ್ತಿ ನಮ್ಮ ದೇಶದ ಬಗ್ಗೆ ಮಾತಾಡೋ ಹಕ್ಕು ಏನಿದೆ ಎಂದೆಲ್ಲಾ ಪ್ರಶ್ನೆ ಮಾಡಲಾಗುತ್ತಿತ್ತು‌. ಹೀಗಾಗಿಯೇ ನಟ ಅಕ್ಷಯ್,
ಭಾರತದ ಪೌರತ್ವ ಪಡೆಯುವುದಕ್ಕಾಗಿ ಕೆನಡಾದ  ಪಾಸ್ ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಹೆರಾ ಫೆರಿ, ನಮಸ್ತೆ ಲಂಡನ್, ಟಾಯ್ಲೆಟ್; ಏಕ್ ಪ್ರೇಮ್ ಕಥಾ, ಪ್ಯಾಡ್ ಮ್ಯಾನ್ ಮುಂತಾದ ಚಿತ್ರಗಳಿಂದ ಗಮನ ಸೆಳೆದ ನಟ ಅಕ್ಷಯ್, ತಮ್ಮ ಫೇಲ್ಯೂರ್ ದಿನಗಳ ಕುರಿತು ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದ ವೇಳೆ ಮೆಲುಕು ಹಾಕಿದರು.

https://twitter.com/akki_dhoni/status/1628762140193726464?s=20

90ರ ದಶಕದ ನನ್ನ ಚಿತ್ರಗಳು ಸೋಲುತ್ತಿದ್ದವು. ಅನಿವಾರ್ಯವಾಗಿ ಬೇರೆ ಕೆಲಸ ಹುಡುಕುವ ಸ್ಥಿತಿ ಬಂದಿತ್ತು. ಹೀಗಾಗಿ ಕೆನಡಾದಲ್ಲಿದ್ದ ನನ್ನ ಸ್ನೇಹಿತ ಉದ್ಯೋಗದಲ್ಲಿದ್ದ. ಆಗ ನನ್ನನ್ನೂ ಕರೆದಿದ್ದ. ಹೀಗಾಗಿ ಅಲ್ಲಿಯ ಪೌರತ್ವ ಹಾಗೇ ಉಳಿಸಿಕೊಂಡು ಬಂದಿದ್ದೆ.

ಆದರೆ ಎಲ್ಲಾ ಸಿನಿಮಾ ಮಕಾಡೆ ಮಲಗಿದರೂ ಎರಡು ಚಿತ್ರಗಳು ಬಿಡುಗಡೆ ಬಾಕಿ ಇತ್ತು. ನನ್ನ ಪುಣ್ಯ, ಅದೃಷ್ಟವಶಾತ್ ಆ ಎರಡೂ ಸಿನಿಮಾ ಹಿಟ್ ಕಂಡಿತು. ಹೀಗಾಗಿ ಚಿತ್ರರಂಗದಲ್ಲಿ ಮುಂದುವರಿಯುವಂತೆ ಗೆಳೆಯ ಸೂಚಿಸಿದ. ಬಳಿಕ, ನನಗೆ ಮತ್ತಷ್ಟು ಚಿತ್ರಗಳು ಬಂದವು. ಕೈತುಂಬಾ ಕೆಲಸವೂ ಸಿಕ್ಕಿತು ಎಂದು ಮೆಲುಕು ಹಾಕಿದರು.

ಪಾಸ್ ಪೋರ್ಟ್ ವಜಾ ಅರ್ಜಿ ಹಾಕುವ ಕಾರಣದ ಬಗ್ಗೆ ಮಾತನಾಡಿದ ನಟ ಅಕ್ಷಯ್, ನಾನು ಕೆನಡಾ ಪಾಸ್‌ಪೋರ್ಟ್ ಹೊಂದಿದ್ದನ್ನೇ ಮರೆತಿದ್ದೆ. ಪಾಸ್‌ಪೋರ್ಟ್ ಅನ್ನು ಬದಲಾಯಿಸಬೇಕು ಎಂಬ ಯೋಚನೆಯೂ ನನಗೆ ಬಂದಿರಲಿಲ್ಲ. ಈಗ ನನ್ನ ಪಾಸ್‌ಪೋರ್ಟ್ ಅನ್ನು ಬದಲಾಯಿಸಲು ಅರ್ಜಿ ಸಲ್ಲಿಸಿದ್ದೇನೆ.

ನನಗೆ ಭಾರತವೇ ಎಲ್ಲ. ಎಲ್ಲವನ್ನೂ ಭಾರತ ನನಗೆ ಕೊಟ್ಟಿದೆ. ನಾನು ಇಲ್ಲಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ಹಾಗಾಗಿ ನಾನು ಕೆನಡಾ ಪಾಸ್ ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಭಾವುಕರಾದರು.

More News