ಬೆಂಗಳೂರು : ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಡಬ್ಬಲ್ ಇಂಜಿನ್ ಸರ್ಕಾರದ ಕೊಡುಗೆ, ಇನ್ನೊಂದೆಡೆ ಆಕಾಶದೆತ್ತರಕ್ಕೆ ಟೋಲ್ ದರಗಳನ್ನು ಏಕಾಏಕಿ ಏರಿಸಿ ಹಗಲು ದರೋಡೆ ನಡೆಯುತ್ತಿದೆ. ರಾಜ್ಯ ಸರ್ಕಾರ ಈ ರೀತಿಯ ಹೊರೆ ಹಾಕಿ ರಕ್ತ ಹೀರುತ್ತಿವೆ ಎಂದು ಜಾತ್ಯಾತೀತ ಜನತಾದಳ ಆರೋಪಿಸಿದೆ.
ಬೆಲೆ ಏರಿಕೆಯಿಂದಾಗಿ ಇಡೀ ಸಾರಿಗೆ ವ್ಯವಸ್ಥೆ ಮುಳುಗುವ ಮುನ್ನಾ ಡಬ್ಬಲ್ ಇಂಜಿನ್ ಸರ್ಕಾರ ಎಚ್ಚೆತ್ತು ಜನಸಾಮಾನ್ಯರ ಹೊರೆಯನ್ನು ಇಳಿಸಬೇಕೆಂದು ಜೆಡಿಎಸ್ ಸರಣಿ ಟ್ವೀಟ್ ಮಾಡಿ ಒತ್ತಾಯಿಸಿದೆ.
ಅಗತ್ಯ ವಸ್ತುಗಳ ಬೆಲೆ ಆಕಾಶದೆತ್ತರಕ್ಕೆ ಏರಿರುವ ಕಾಲದಲ್ಲಿ ಟೋಲ್ ಗಳ ಶುಲ್ಕವನ್ನು ಯಥೇಚ್ಛವಾಗಿ ಏರಿಕೆ ಮಾಡಿರುವುದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಷ್ಟೋ ಕಡೆ ಶುಲ್ಕದ ದರ ದ್ವಿಗುಣವಾಗಿದೆ. ಇದು ಹಗಲು ದರೋಡೆಯಲ್ಲದೆ ಇನ್ನೇನು? ಈ ರೀತಿ ಜನರ ಹಣ ಸುಲಿಯುವುದು ಕ್ರೌರ್ಯಕ್ಕೆ ಸಮ.1/4 pic.twitter.com/iYZOPVDsbV
— Janata Dal Secular (@JanataDal_S) February 24, 2023
ಅಗತ್ಯ ವಸ್ತುಗಳ ಬೆಲೆ ಆಕಾಶದೆತ್ತರಕ್ಕೆ ಏರಿರುವ ಕಾಲದಲ್ಲಿ ಟೋಲ್ ಗಳ ಶುಲ್ಕವನ್ನು ಯಥೇಚ್ಛವಾಗಿ ಏರಿಕೆ ಮಾಡಿರುವುದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಷ್ಟೋ ಕಡೆ ಶುಲ್ಕದ ದರ ದ್ವಿಗುಣವಾಗಿದೆ. ಇದು ಹಗಲು ದರೋಡೆಯಲ್ಲದೆ ಇನ್ನೇನು? ಈ ರೀತಿ ಜನರ ಹಣ ಸುಲಿಯುವುದು ಕ್ರೌರ್ಯಕ್ಕೆ ಸಮ.
ಭಾರತೀಯ ಹೆದ್ದಾರಿ ಪ್ರಾಧಿಕಾರದ ನೋಟಿಫಿಕೇಷನ್ ಆಧಾರದ ಮೇಲೆ ಬಳಕೆದಾರರ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳೇ ಹೇಳಿದ್ದಾರೆ. ಈ ಮಟ್ಟದ ಹೊರೆ ಜನರ ಮೇಲೆ ಹಾಕಿದರೆ ಬದುಕುವುದಾದರೂ ಹೇಗೆ? ಹೇಳುವವರು ಕೇಳುವವರು ಯಾರು ಇಲ್ಲದ ಹಾಗಿದೆ ಈ ನಿರ್ಧಾರ.

ದಶಪಥ, ಎಂಟು ಪಥ ಎಂದು ದೊಡ್ಡದಾಗಿ ಹೆದ್ದಾರಿ ಅಭಿವೃದ್ಧಿ ಎಂದು ಬೀಗುವ ಕೇಂದ್ರ @BJP4India ಸರ್ಕಾರ ಮತ್ತು ಅದನ್ನೇ ಪುನರುಚ್ಚರಿಸುವ ರಾಜ್ಯ @BJP4Karnataka ಸರ್ಕಾರಗಳು ಸುಲಿಗೆಗಿಳಿದಿವೆ. ಯಾವ ಕಾರಣಕ್ಕೆ ಟೋಲ್ ಶುಲ್ಕ ಹೆಚ್ಚಿಸಿದ್ದು? ಅದಕ್ಕೇನಾದರೂ ತರ್ಕವಿದೆಯೆ? ರಕ್ತ ಹೀರುವ ಜಿಗಣೆಗಳಂತೆ ಸರ್ಕಾರ ವರ್ತಿಸುತ್ತಿರುವುದು ತರವಲ್ಲ.
ಈ ಟೋಲ್ ಹೆಚ್ಚಳ ಸಾರಿಗೆ ವ್ಯವಸ್ಥೆಯನ್ನೇ ಮುಳುಗಿಸಲಿದೆ. ನಿತ್ಯದ ಬದುಕಿಗೆ ಅಗತ್ಯವಾಗಿರುವ ವಸ್ತುಗಳ ಬೆಲೆ ಮತ್ತೆ ಏರಲಿದೆ. ಇದೇನು ಸರ್ಕಾರವಾ ಅಥವಾ ದಂಧೇಕೋರರ ಗುಂಪೊ ಎಂಬ ಅನುಮಾನ ಮೂಡುತ್ತಿದೆ. ಜನತೆಯ ಬದುಕಿನ ಮೇಲೆ ಪದೇ ಪದೇ ಬರೆ ಎಳೆಯುತ್ತಿದ್ದರೆ, ಬದುಕುವುದಾದರೂ ಹೇಗೆ?




