RANBIR KAPOOR: ಪಾಕಿಸ್ತಾನ ಸಿನಿಮಾದಲ್ಲಿ ಯಾಕೆ ನಟಿಸಬಾರ್ದು ಎಂದ ರಣಬೀರ್: ವಿವಾದ ಬೆನ್ನಲ್ಲೇ ಉಲ್ಟಾ

ಪಾಕಿಸ್ತಾನ ಸಿನಿಮಾದಲ್ಲಿ ಯಾಕೆ ನಟಿಸಬಾರದು..? ಎಂಬ ರಣಬೀರ್ ಕಪೂರ್ ಹೇಳಿಕೆ ವಿವಾದದ ಕಿಡಿ ಹಚ್ಚಿದೆ.. ಸಾಮಾಜಿಕ ಜಾಲತಾಣದಲ್ಲಿ ನಟನ ಹೇಳಿಕೆ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿರುವ ಬೆನ್ನಲ್ಲೇ ನನ್ನ ಹೇಳಿಕೆ ತಿರುಚಲಾಗಿದೆ ಎಂದು ರಣಬೀರ್ ಉಲ್ಟಾ ಹೊಡೆದಿದ್ದಾರೆ.

ಡಿಸೆಂಬರ್ ನಲ್ಲಿ ನಡೆದ ಚಿತ್ರೋತ್ಸವವೊಂದರಲ್ಲಿ ಭಾಗಿಯಾಗಿದ್ದ ರಣಬೀರ್ ಗೆ ಪಾಕಿಸ್ತಾನಿ ನಿರ್ದೇಶಕರೊಬ್ಬರು ‘ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸಲು ಆಫರ್ ಬಂದರೆ ಒಪ್ಪುವಿರಾ?’ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ನಟ ರಣಬೀರ್, ಒಬ್ಬ ನಟನಾಗಿ ಯಾಕೆ ಮಾಡಬಾರದು? ಎಂದು ಹೇಳಿಕೆ ನೀಡಿದ್ದು, ಭಾರೀ ವಿವಾದಕ್ಕೆ ಕಾರಣವಾಗುತ್ತಿದೆ.

ರಣಬೀರ್ ಕಪೂರ್ ‘ತು ಜೂತಿ ಮೇನ್ ಮಕ್ಕರ್’ ಸಿನಿಮಾ ಪ್ರಚಾರದಲ್ಲಿ ಸಧ್ಯ ಬ್ಯುಸಿ ಇದ್ದಾರೆ. ಪ್ರಚಾರದ ವೇಳೆ ತಮ್ಮ ವಿರುದ್ಧದ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಮಾತನಾಡಿದ ನಟ ರಣಬೀರ್, ‘ನಾನು ಹೇಳಿದ ರೀತಿಯೇ ಬೇರೆ ಇತ್ತು. ಆದರೆ ನನ್ನ ಹೇಳಿಕೆಯನ್ನು ರಿಸೀವ್ ಮಾಡಿದ ರೀತಿಯೇ ನಂಗೆ ಅಚ್ಚರಿ ಅನಿಸುತ್ತೆ. ನಾನೊಬ್ಬ ಕಲಾವಿದ. ಸಿನಿಮಾ ವಿಚಾರದಲ್ಲಿ ನನ್ನ ಹೇಳಿಕೆಯನ್ನು ಕಲಾವಿದನ ರೀತಿಯಲ್ಲೇ ನೋಡಬೇಕಿತ್ತು. ಆದರೆ, ಅದು ಹಾಗಾಗಲಿಲ್ಲ ಎಂದರು.

ಕಲಾವಿದರಾದರೆ ಹೀಗೆ ಹೇಳಿಕೆ ಕೊಡಬಹುದಾ ಎಂಬ ಪ್ರಶ್ನೆಗೆ ಮಾತನಾಡಿದ ಅವರು, ಕಲೆ ದೇಶಕ್ಕಿಂತ ದೊಡ್ಡದಲ್ಲ ಅನ್ನೋ ಅರಿವು ನನಗಿದೆ.. ಎಂದು ಉತ್ತರಿಸಿದ್ದಾರೆ. ಆದರೂ ನಟನ ಹೇಳಿಕೆ ವಿರುದ್ಧ ಅಸಮಧಾನ ತಣ್ಣಗಾಗಿಲ್ಲ.

More News