ಪಾಂಡವಪುರ: ಹಿಜಾಬ್ ಅಂದ್ರೆ ಶಾಲು..ಸೆರಗು. ಇಂದಿರಾಗಾಂಧಿ ಅವರು ಕೂಡ ಹಿಜಾಬ್ ಹಾಕಿದ್ರು. ಕಿತ್ತೂರು ರಾಣಿ ಚೆನ್ನಮ್ಮ ಸಹ ಹಿಜಾಬ್ ಹಾಕಿದ್ರು. ಬಿಜೆಪಿಯವರು ದಾರಿ ತಪ್ಪಿಸುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೇ ಹಿಜಾಬ್ ಗದ್ದಲ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಏನ್ ಹೇಳ್ತೀರಿ.. ಆ ಸಮುದಾಯದಿಂದಲೇ ಚುನಾವಣೆ ಎದುರಿಸ್ತಿದ್ದೀರಿ.. ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ ಪ್ರಶ್ನೆಗೆ ಪಾಂಡವಪುರದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮದರಸ ಅಂದ್ರೆ ಸ್ಕೂಲ್, ಸ್ಕೂಲ್ ಅಂದ್ರೆ ಮದರಸ. ಬಿಜೆಪಿಯವರು ಕನ್ಫ್ಯೂಷನ್ ಮಾಡ್ತಾರೆ. ಗುರುಕುಲ ಅಂದ್ರೇನು ಅದೇ ಮದರಸ. ಹಿಜಾಬ್ ಅಂದ್ರೆ ಶಾಲು, ಸೆರಗು. ಇಂದಿರಾಗಾಂಧಿ ಅವರು ಕೂಡ ಹಿಜಾಬ್ ಹಾಕಿದ್ರು. ಕಿತ್ತೂರು ರಾಣಿ ಚೆನ್ನಮ್ಮ ಹಿಜಾಬ್ ಹಾಕಿದ್ರು. ಬಿಜೆಪಿಯವರು ದಾರಿ ತಪ್ಪಿಸುತ್ತಾರೆ ಎಂದು ದೂರಿದರು.
“ಬಿಜೆಪಿ ಯವ್ರು ಬಾಂಬೆಗೆ ಹೋದ್ರು.. ಸಿಡಿ ತಂದ್ರು.. ಅದನ್ನ ಹೈ ಕೊರ್ಟ್ನಲ್ಲಿ ಸ್ಟೇ ತಂದ್ರು”
ಮುಂದುವರೆದು ಮಾತನಾಡಿದ ಅವರು, ಬಿಜೆಪಿಯವರು ಯಾವುದಾದರು ಒಳ್ಳೆಯ ಕೆಲಸ ಮಾಡಿದ್ದಾರಾ? ಅವರು ಮಾಡಿದ್ದು ಕೆಲಸ ಬಾಂಬೆಯಲ್ಲಿ ಹೋಗಿ ಸಿಡಿ ತಂದ್ರು.. ಅದನ್ನ ಇಟ್ಟು ಹೈ ಕೊರ್ಟ್ನಲ್ಲಿ ಸ್ಟೇ ತಂದ್ರು. ಅಚ್ಚೆದೀನ್ ಆಯಂಗೆ ಅಂತಾರೆ. ದೇವೇಗೌಡ್ರು ಸರ್ಕಾರ ತೆಗೆದಿದ್ದು ಸೀತಾರಾಂ. ಯಾಕೆ ತೆಗೆದರು ಅಂತ ಇನ್ನೂ ಹೇಳಿಲ್ಲ. ದೇವೇಗೌಡ್ರು ಭ್ರಷ್ಟಾಚಾರ ಮಾಡಿದ್ರಾ ? ಎಂದು ಪ್ರಶ್ನಿಸಿದರು.
ಇನ್ನು ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಿದ್ದ ಕುರಿತು ಮಾತನಾಡಿದ ಇಬ್ರಾಹಿಂ, ಕುಮಾರಸ್ವಾಮಿ ನೇ ಗಂಡು ಆಗಬೇಕು ಅಂದ್ರಿ. ಮೇಕಪ್ ಮಾಡಿ ಬಂದು ನಿಂತ್ರೂ ಬಾಂಬೆಗೆ ಕಳುಹಿಸಿ ಕುಮಾರಣ್ಣ ಸರ್ಕಾರ ತೆಗಿದ್ರಲ್ಲ ಸಿದ್ದರಾಮಯ್ಯ… ಯಾರಿಗಾದ್ರು ಕುಮಾರಣ್ಣ ಅನ್ಯಾಯ ಮಾಡಿದ್ರಾ? ಸಿದ್ದರಾಮಯ್ಯ, ಶಿವಕುಮಾರ್ ಉತ್ತರ ಕೊಡಿ ಎಂದು ಆರೋಪಿಸಿದರು.




