ಬೆಂಗಳೂರು: ಫೇಮಸ್ ಆಗಿರೋ ಕಥೆ, ಕಾದಂಬರಿ, ಪೌರಾಣಿಕ ಸಿನಿಮಾ ಅಥವಾ ಒಂದು ಅದ್ಭುತ ಕಥೆ ತೆರೆ ಮೇಲೆ ಬರೋದು ಸಾಮಾನ್ಯ.. ಆದರೆ ಇದೀಗ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಮಹಿಳಾ ಮಣಿಗಳ ಫೈಟ್ ತೆರೆ ಮೇಲೆ ಬರೋಕೆ ಸಜ್ಜಾಗಿದೆ.
ರಾಜ್ಯದಲ್ಲಿ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸೋಶಿಯಲ್ ಮೀಡಿಯಾ ಜಗಳ ಇದೀಗ ತೆರೆ ಮೇಲೆಗೆ ಬರಲು ತುದಿಗಾಲಿನ ಮೇಲೆ ತರಲು ಚಿತ್ರರಂಗವು ಬಹಳಷ್ಟು ಉತ್ಸುಕವಾಗಿದೆ. ಭಾರತದಲ್ಲಿ ಕಾರ್ಯಾಂಗವು ಪ್ರಜಾಪ್ರಭುತ್ವದ ಒಂದು ಅಂಗ. ಅದು ನಮ್ಮ ವ್ಯವಸ್ಥೆಯ ಭಾಗವಾಗಿದ್ದು, ಅಲ್ಲಿರುವವರು ಸರಿಯಾಗಿ ನಡೆದುಕೊಳ್ಳಬೇಕಾಗಿರೋದು ಧರ್ಮ.

ಆದರೆ, ಉನ್ನತ ಹುದ್ದೆಯಲ್ಲಿ ಇದ್ದರೂ ಸಹ ಬೀದಿಜಗಳ ನಿಂತಿಲ್ಲ. ಒಂದು ಹೆಣ್ಣಿನ ಮಾನ ತೆಗೆಯಲು ಇನ್ನೊಂದು ಹೆಣ್ಣು ಇರ್ತಾರೆ ಅಂದ ಹಾಗೇ ಆಗಿದೆ. ಇದೀಗ ಅವರ ನಡುವಿನ ಜಗಳವು ರಾಜಕೀಯ ತಿರುವು ಪಡೆದುಕೊಂಡು ದೊಡ್ಡ ಮಟ್ಟದ ಪ್ರಚಾರ ನಡೆಯಿತು. ಅಂತಹ ಕಥೆಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲು ಚಿತ್ರರಂಗದ ಬಿಯಾಂಡ್ ಡ್ರೀಮ್ಸ್ ಸಂಸ್ಥೆ ಹಾಗೂ ನಿರ್ಮಾಪಕ ಪ್ರವೀಣ್ ಶೆಟ್ಟಿ ಮುಂದಾಗಿದ್ದಾರೆ.
ಈಗಾಗಲೇ ಸಿನಿಮಾ ಟೈಟಲ್‌ಗಾಗಿ ಫಿಲ್ಮ್ ಚೇಂಬರ್ ಮೆಟ್ಟಿಲನ್ನು ಏರಿದ್ದಾರೆ. ಟೈಟಲ್ ಸಿಕ್ಕರೆ ಕೂಡಲೇ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ ಎನ್ನಲಾಗಿದೆ.

ಉನ್ನತ ಹುದ್ದೆಯಲ್ಲಿ ಇರುವಂತಹ ಅಧಿಕಾರಿಗಳು ಶಾಸಕಾಂಗವು ಜಾರಿ ಮಾಡುವುದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು. ಅದನ್ನು ಹೊರತುಪಡಿಸಿ ಇಂತಹ ಜಗಳಕ್ಕೆ ನಿಂತಿರುವುದು ಸರಿಯಲ್ಲ. ಅಲ್ಲದೇ, ಇವರ ಜಗಳ ಇದೀಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜನರು ರಾಜ್ಯದಲ್ಲಿ ಸರ್ಕಾರ ಬದುಕಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಸಧ್ಯಕ್ಕೆ ಸಿನಿಮಾ ಗೆ ಇಬ್ಬರು ಅಧಿಕಾರಗಳ ಹೆಸರಿನಲ್ಲಿ ಹೆಸರು ಇಡಲು ಚಿಂತನೆ ಇದೆ. ಆರ್ ವರ್ಸಸ್ ಆರ್ ಎಂಬ ಹೆಸರಿನಲ್ಲಿ ಟೈಟಲ್ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರೆಯೆ ನೀಡಿದ ಫಿಲ್ಮಿ ಛೇಂಬರ್ ಅಧ್ಯಕ್ಷ ಭಾ ಮಾ ಹರೀಶ್, ಈ ರೀತಿ ಸಿನಿಮಾ ಟೈಟಲ್‌ಗಾಗಿ ಅರ್ಜಿ ಬಂದಿರುವುದು ನಿಜ ಎಂದಿದ್ದಾರೆ.

ಎರಡು ಸಿನಿಮಾ ಟೈಟಲ್‌ಗಳ ಅರ್ಜಿಯನ್ನು ಸೋಮವಾರ ಟೈಟಲ್ ಕಮಿಟಿ ಮುಂದೆ ಬರಲಿದೆ. ಕಮಿಟಿ ಒಪ್ಪಿದರೆ ಟೈಟಲ್ ಕೊಡುತ್ತೇವೆ. ವ್ಯಕ್ತಿಯಾಧಾರಿತ ಸಿನಿಮಾ ಮಾಡಬೇಕು ಅಂದರೆ ಅವರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಆದರೆ, ಮುಂದೆ ಏನಾಗಲಿದೆ ಅನ್ನುವುದು ಕಾದುನೋಡಬೇಕು.
#BHA MA HARISH #KARNATAKA FILM CHEMBER #TITLE #RR #ROHINI SINDHURI #ROOPA #IAS #IPS #OFFICERS #STATE GOVERNMENT




