ಬೆಂಗಳೂರು. ಮಾ.1: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಐಎಎಸ್, ಐಪಿಎಸ್ ಅಧಿಕಾರಿಗಳ ಗದ್ದಲ ಇನ್ನೇನು ಮುಗಿದು ಹೋಯ್ತು ಎನ್ನುವಾಗಲೇ ಸೈಲೆಂಟ್ ಆಗಿ ಸಿಂಧೂರಿ ಕಾನೂನು ಸಮರ ಸಾರಿದ್ದಾರೆ. ಐಪಿಎಸ್ ಅಧಿಕಾರಿ ಡಿ ರೂಪಾ ಸೋಷಿಯಲ್ ಮೀಡಿಯಾ ಸ್ಟೇಟ್ಮೆಂಟ್ ನಿಂದ ರೊಚ್ಚಿಗೆದ್ದ ಸಿಂಧೂರಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮಂಗಳವಾರ ಖುದ್ದು ಪತಿ ಸುಧೀರ್ ರೆಡ್ಡಿ ಜೊತೆ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದ ಐಎಎಸ್ ರೋಹಿಣಿ ಸಿಂಧೂರಿ, ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ರೂಪಾ ಆರೋಪದಿಂದ ಮಾನಸಿಕವಾಗಿ ಹಿಂಸೆ ಆಗಿದೆ: ಸಿಂಧೂರಿ

ವೈಯಕ್ತಿಕ ತೇಜೋವಧೆ ಮಾಡುವ ಕಾರಣದಿಂದಾಗಿ ರೂಪ, ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಅವಹೇಳನಕಾರಿ ಪೋಸ್ಟ್ ಮಾಡ್ತಿದ್ದಾರೆ. ತಡೆಯಾಜ್ಞೆ ಇದ್ದರೂ, ರೂಪಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಲೇ ಇದ್ದಾರೆ. ಅವಹೇಳನ ಬರವಣಿಗೆ ಪೋಸ್ಟ್ ಮಾಡುತ್ತಿದ್ದಾರೆ. ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ. ಸಿಎಸ್ ಗೆ ದೂರು ನೀಡಿದರು ಸಹ ಅದಕ್ಕೂ ಡಿ ರೂಪ ಗೌರವಿಸುತ್ತಿಲ್ಲ. ಅವರ ಆರೋಪದಿಂದಾಗಿ ಮಾನಸಿಕವಾಗಿ ಹಿಂಸೆ ಆಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಧೀಶ ಚಂದ್ರಶೇಖರ್ ಬಿಸಿ ಮುಂದೆ ಹೇಳಿಕೆ ನೀಡಿದ್ದಾರೆ.
ರೂಪಾಹೇಳಿಕೆಯಿಂದ ಮಾನಸಿಕ ವಾಗಿ ಹಿಂಸೆಯಾಗಿದ್ದು,
ಶಿಕ್ಷೆಯ ಜೊತೆಗೆ 1 ಕೋಟಿ ರೂಪಾಯಿ ಪರಿಹಾರ ಮೊತ್ತ ಕೊಡಬೇಕೆಂದು ಕೋರ್ಟ್ ಬಳಿ ಮನವಿ ಮಾಡಿದ್ದಾರೆ.
ಇವರ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ್ ಬಿಸಿ, ಮಾರ್ಚ್ 3 ತಾರೀಖಿಗೆ ಅರ್ಜಿ ವಿಚಾರಣೆ ಮುಂದೂಡಿದೆ.




