ನವದೆಹಲಿ : ಬರಿಕಣ್ಣಲ್ಲಿ ಕಾಣದ್ದನ್ನ ಕ್ಯಾಮರಾ ಕಣ್ಣಲ್ಲಿ ತೋರಿಸಿ, ಯಶಸ್ವಿ ಫೋಟೋಗ್ರಾಫರ್ ಆಗಿರುವ THE WEEK ವಾರಪತ್ರಿಕೆಯ ಭಾನು ಪ್ರಕಾಶ್ ಚಂದ್ರ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ಮಂಗಳವಾರ ನವಜದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಭಾನು ಪ್ರಕಾಶ್ ಚಂದ್ರ, ಅವರು, ಕುಂಭಮೇಳದ ವೈಶಿಷ್ಟ್ಯತೆಯ ಫೋಟೋಗಾಗಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪಿಸಿದ ಫೋಟೋ ವೈಶಿಷ್ಟ್ಯ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ದಿ ವೀಕ್ ಪತ್ರಿಕೆಯಲ್ಲಿ ಡೆಪ್ಯುಟಿ ಫೋಟೋ ಎಡಿಟರ್ ಆಗಿ ಸೇವೆ ಸಲ್ಲಿಸುತ್ತಿರುವ ಭಾನು ಪ್ರಕಾಶ್ ಚಂದ್ರ ಅವರದ್ದು 20 ವರ್ಷಗಳ ಸತತ ಪತ್ರಿಕೋದ್ಯಮದ ಅನುಭವ. ಇದುವರೆಗೂ ಅವರು, ಇಂಟರ್ ನ್ಯಾಷನಲ್ ಪ್ರೆಸ್ ಇನ್ಸಿಟಿಟ್ಯೂಟ್ ಪ್ರಶಸ್ತಿ, ಮತ್ತು ವರ್ಲ್ಡ್ ಅಸೋಶಿಸಿಯನ್ ಆಫ್ ನ್ಯೂಸ್ ಪೇಪರ್ಸ್ ಪ್ರಶಸ್ತಿಯನ್ನು ನಾಲ್ಕು ಬಾರಿ ಸ್ವೀಕರಿಸಿದ್ದಾರೆ.
2011ರಲ್ಲಿ ಚಿನ್ನದ ಪದಕ ಮತ್ತು ಪ್ರಶಸ್ತಿ, 2017, ಮತ್ತು 2021ರಲ್ಲಿ ಚಿನ್ನ ಮತ್ತು ಕಂಚಿನ ಪದಕ ಪಡೆದಿದ್ದಾರೆ. ಮೈಸೂರಿನ ಕಾವಾದಲ್ಲಿ ಫೋಟೋಗ್ರಾಫಿ ಕಲೆಯನ್ನು ಕರಗತ ಮಾಡಿಕೊಂಡ ಭಾನುಪ್ರಕಾಶ್ ಚಂದ್ರ ಅವರು, ಫಿಲ್ಮ್ ಫೋಟೋ ನಂತರ ಡಿಜಿಟಲ್ ಇದೀಗ ಮಿರರ್ ಲೆಸ್ ಟೆಕ್ನಾಲಜಿಯನ್ನು ಕರಗತ ಮಾಡಿಕೊಂಡಿದ್ದಾರೆ.
ಹಿರಿಯ ಫೋಟೋ ಜರ್ನಲಿಸ್ಟ್ ಭಾನು ಪ್ರಕಾಶ್ ಚಂದ್ರ ಅವರಿಗೊಂಡು ನಮ್ಮ ಕಡೆಯಿಂದ ಶುಭಾಶಯಗಳನ್ನು ಹೇಳೋಣ ಹಾಗೂ ಅವರು ಕುಂಭಮೇಳದಲ್ಲಿ ತೆಗೆದ ವೈಶಿಷ್ಟಗಳ ಕೆಲವೇ ಕೆಲವು ಫೋಟೋಗಳನ್ನು ನೋಡೋಣ.



#PRESS COUNCIL OF INDIA #NATIONAL AWARD WINNER #BHANU PRAKASH CHANDRA #THE WEEK #MAGZINE




