ಬೆಂಗಳೂರು: ಬಾಲಿವುಡ್ ನಟ ನವಾಜುದ್ದೀನ್ ಸಿದ್ದೀಕಿ ದಾಂಪತ್ಯ ಕಲಹ ಬೀದಿಗೆ ಬಂದಿದೆ. ರಾತ್ರೋ ರಾತ್ರಿ ಮನೆಯಿಂದ ಹೊರ ಹಾಕಿದ್ದರು ನವಾಜ್ ಎಂದು ಮಾಜಿ ಪತ್ನಿ ಆಲಿಯಾ ಆರೋಪಿಸಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರು ಮಕ್ಕಳೊಂದಿಗೆ ನಿಂತು ತೆಗೆದ ವೀಡಿಯೋ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದಷ್ಟೇ ಇನ್ ಸ್ಟಾ ದಲ್ಲಿ ನವಾಜ್ ವಿರುದ್ಧ ಪೋಸ್ಟ್ ಒಂದನ್ನು ಮಾಡಿದ್ದ ಅಲಿಯಾ,
ನವಾಜುದ್ದೀನ್ ನಿಜ ಸ್ವರೂಪ ಇದು. ನೀವು ತಿಳಿದುಕೊಂಡಂತೆ ನವಾಜ್ ಇಲ್ಲ. ಸ್ಟಾರ್ ಗಿರಿ ಬರೋದಕ್ಕು ಮೊದಲು ನವಾಜ್ ಚನ್ನಾಗಿ ಯೇ ಇದ್ದ.. ಸ್ಟಾರ್ ಆಗುತ್ತಿದ್ದಂತೆ ತಮ್ಮ ವರಸೆಯನ್ನೇ ಬದಲಿಸಿದ್ದ ಎಂದು ದೂರಿದ್ದರು. ಇದೀಗ ಮತ್ತೊಂದು ವೀಡಿಯೋ ಪೋಸ್ಟ್ ಮಾಡೋ ಮೂಲಕ ನವಾಜ್ ಅಸಲಿಯತ್ತು ನೋಡಿ ಎಂದು ತಿಳಿಸಿದ್ದಾರೆ.

ಕಳೆದ ವಾರ ಆಲಿಯಾ ಮತ್ತು ಇಬ್ಬರು ಮಕ್ಕಳಾದ ಶೋರಾ ಮತ್ತು ಯಾನಿ ಅವರೊಂದಿಗೆ ನವಾಜುದ್ದೀನ್ ಅವರ ಅಂಧೇರಿ ಬಂಗಲೆಯಲ್ಲಿ ಉಳಿದುಕೊಂಡಿರುವುದಾಗಿ ಹೇಳಿದ್ದರು. ಅಲ್ಲಿ ಯಾವುದೇ ಸೌಲಭ್ಯವಿಲ್ಲ, ಸ್ನಾನ ಮಾಡಲು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಇದೀಗ ಮಕ್ಕಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿ ವಿಡಿಯೋ ಮಾಡಿದ್ದು, ಭಾರೀ ವೈರಲ್ ಆಗ್ತಿದೆ. ತನ್ನ ಬಂಗಲೆ ಪ್ರವೇಶಿಸದಂತೆ ನವಾಜುದ್ದೀನ್ ಬಾಡಿಗಾರ್ಡ್ ನಿಯೋಜಿಸಿದ್ದಾರೆ ಎಂದು ವೀಡಿಯೋ ದಲ್ಲಿ ಪತ್ನಿ ಆಲಿಯಾ ದೂರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ ಆಲಿಯಾ ಮನೆಯನ್ನು ಪ್ರವೇಶಿಸದಂತೆ ತಡೆಯಲು ನಟ ಅಲ್ಲಿ ಕಾವಲುಗಾರರನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ವೀಡಿಯೋದಲ್ಲಿ ನಟನ 12 ವರ್ಷದ ಮಗಳು ಅಳುತ್ತಿರುವುದನ್ನು ಮತ್ತು ಅವರ 7 ವರ್ಷದ ಮಗ ತನ್ನ ತಾಯಿಯ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು.
ಇಬ್ಬರೂ ಮಕ್ಕಳನ್ನು ಸಹ ಬಂಗಲೆಯಿಂದ ಹೊರಹಾಕಿದ್ದಾರೆ. ಮನೆಯೊಳಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ನನ್ನ ಬಳಿ ಕೇವಲ 81 ರೂಪಾಯಿ ಇದೆ. ಎಲ್ಲಿಗೆ ಹೋಗಬೇಕು, ಮುಂದೆ ಏನು ಎಂಬುದು ಗೊತ್ತಿಲ್ಲ. ನವಾಜ್ ಅವರು ಯಾಕೆ ಹೀಗೆ ವರ್ತಿಸುತ್ತಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಅವರು ತೀರಾ ಕೆಳಮಟ್ಟಕ್ಕೆ ಇಳಿದಿದ್ದಾರೆ. ನಾನು ಎಂದೂ ಆತನನ್ನು ಕ್ಷಮಿಸಲ್ಲ ಎಂದು ವೀಡಿಯೋ ಬಿಡುಗಡೆ ಮಾಡಿದ್ದು, ಸಾಕಷ್ಟು ಪರ ವಿರೋಧಕ್ಕೆ ಕಾರಣವಾಗಿದೆ.
ಈ ಘಟನೆಯನ್ನು ನಟನ ವಕ್ತಾರರು ತಳ್ಳಿಹಾಕಿದ್ದಾರೆ. ಆಸ್ತಿ ಸಿದ್ದಿಕಿ ಅವರ ತಾಯಿಯ ಹೆಸರಿನಲ್ಲಿರುವುದರಿಂದ, ಅಲ್ಲಿ ಯಾರು ಇರಬೇಕು. ಯಾರೂ ಇರಬಾರದು ಎಂಬುದನ್ನು ಆಲಿಯಾ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.




