Illegal money:ಹುಬ್ಬಳ್ಳಿ ಉದ್ಯಮಿಯೊಬ್ಬರ ಮನೆಯಲ್ಲಿ ಪತ್ತೆಯಾಯ್ತು ಬರೋಬ್ಬರಿ ಮೂರು ಕೋಟಿ ರೂಪಾಯಿ ಅಕ್ರಮ ಹಣ ಪತ್ತೆ

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಶಾಸಕ ಮತ್ತು ಮತ್ತು ಆತನ ಪುತ್ರನ ಕಚೇರಿ ಮತ್ತು ಮನೆಯಲ್ಲಿ ಸಿಕ್ಕಿರುವ ಕೋಟಿ ಕೋಟಿ ಲಂಚದ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಅಕ್ರಮ ಬಯಲಾಗಿದೆ.
ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ, ಉದ್ಯಮಿಯೊಬ್ಬರ ಮನೆಯಲ್ಲಿ ಬರೋಬ್ಬರಿ ಮೂರು ಕೋಟಿ ರೂಪಾಯಿ ಹಣ ಪತ್ತೆ ಮಾಡಿದ್ದಾರೆ.

ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ನ ಸಿಸಿಬಿಯಲ್ಲಿ ಎಸಿಪಿಯಾಗಿರುವ ನಾರಾಯಣ ಭರಮಣಿ ನೇತೃತ್ವದ ತಂಡ ಭವಾನಿ ನಗರದಲ್ಲಿರುವ ರಮೇಶ್ ಬೊಣಗೇರಿ ಮನೆ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆಯಲ್ಲಿ ಮನೆಯಲ್ಲಿ ದಾಖಲೆಗಳು ಇಲ್ಲದ ಮೂರು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ವಶಕ್ಕೆ ಪಡೆದ ಮೂರು ಕೋಟಿ ರೂಪಾಯಿ ಹಣವನ್ನು ಅಶೋಕನಗರ ಪೊಲೀಸರು ಠಾಣೆಗೆ ತೆಗೆದುಕೊಂಡು ಹೋದ್ದಾರೆ.


ಹಾಗೆಯೇ ಹಣದ ಮೂಲದ ಬಗ್ಗೆ ತಿಳಿಸಲು ಉದ್ಯಮಿ ಸುರೇಶ್ ಬೊಣಗೇರಿಯವರಿಗೆ ಪೊಲೀಸರು ಸೂಚಿಸಿದ್ದು, ಈ ಕುರಿತು ಇಂದು ವಿಚಾರಮೆ ನಡೆಸಲಿದ್ದಾರೆ.

More News