MP Muniswamy Lashed Out Women: ಹಣೆಗೆ ಬೊಟ್ಟು ಯಾಕಿಟ್ಟಿಲ್ಲ.. ಗಂಡ ಸತ್ತಿದ್ದಾನಾ..?: ಮಹಿಳೆ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ ಮುನಿಸ್ವಾಮಿ

ಬೆಂಗಳೂರು: ಹಣೆಗೆ ಬೊಟ್ಟು ಏಕಿಟ್ಟಿಲ್ಲ.. ಗಂಡ ಸತ್ತಿದ್ದಾನಾ..? ಎಂದು ಬಿಜೆಪಿ ಸಂಸದ ಮುನಿಸ್ವಾಮಿ ನಾಲಿಗೆ ಹರಿಬಿಟ್ಟ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ನಗರದ ಚೆನ್ನಯ್ಯ ರಂಗಮಂದಿರದಲ್ಲಿ ನಡೆದ ಮಹಿಳಾ ದಿನಾಚರಣೆ ಅಂಗವಾಗಿ ಮಾರಾಟ ಮಳಿಗೆ ತೆರೆಯಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಹೋದ ಸಂಸದರು ಮಳಿಗೆ ತೆರೆದಿದ್ದ ಮಹಿಳೆ (ಸುಜಾತ) ಮಳಿಗೆಗೆ ತೆರಳಿದ್ದಾರೆ. ಈ ವೇಳೆ ಹಣೆಗೆ ಬೊಟ್ಟು ಇಡದ ಮಹಿಳೆಯನ್ನು ನೋಡಿ‌ ಸಂಸದರು ಗರಂ ಆದರು..!

ಏಕಾಏಕಿ ಸಿಟ್ಟಿಗೆದ್ದ ಸಂಸದ ಮುನಿಸ್ವಾಮಿ ಮಹಿಳೆ ವಿರುದ್ಧ ಏಕವಚನ ದಲ್ಲಿ ಮಾತನಾಡಲು ಪ್ರಾರಂಭಿಸಿದರು.
ಏನಮ್ಮ‌ ನಿನ್ನ ಹೆಸರು. ಹಣೆಗೆ ಬೊಟ್ಟು ಯಾಕಿಟ್ಟಿಲ್ಲ. ಕಾಸು ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ವ ನಿಂಗೆ.. ವೈಷ್ಣವಿ ಅಂತ ಅಂಗಡಿ ಹೆಸರು ಯಾಕಿಟ್ಟುಕೊಂಡಿದ್ದೀಯ..? ಸುಜಾತ ಅಂತ ಹೆಸರು ಇಟ್ಟುಕೊಂಡು ಯಾರೊ ಕಾಸು ಕೊಡ್ತಾರೆ ಅಂತಲಾ..? ಬೊಟ್ಟ ಇಟ್ಕೋ ಮೊದಲು ಎಂದು ರೇಗಿದ್ದಾರೆ..

ಜೊತೆಯಲ್ಲಿ ಇದ್ದ ಶಾಸಕ ಶ್ರೀನಿವಾಸಗೌಡ ಬೇರೆ ಕಾರಣ ಇರಬಹುದು ಬಿಡಪ್ಪ ಎಂದರೂ ಸಂಸದರಿಗೆ ಸಿಟ್ಟು ತಣಿಯಲಿಲ್ಲ. ವಿಧಾನಪರಿಷತ್ ಸದಸ್ಯ ಗೋವಿಂದರಾಜು ಕೂಡ ಸಮಾಧಾನಿಸಲು ಯತ್ನಿಸಿದರೂ ಸುಮ್ಮನಾಗದ ಸಂಸದ ಗಂಡ ಬದುಕಿದ್ದಾನೆ ತಾನೇ..? ಕಾಮನ್ ಸೆನ್ಸ್ ಇಲ್ಲ ನಿಂಗೆ..? ತಂದೆ ಹೆಸರು ಬದಲಾಯಿಸ್ತಿಯಾ ನೀನು.. ಅದನ್ನೆಲ್ಲ‌ ಇಟ್ಕೋಳ್ಳೊದಿಕ್ಕೆ ಯೋಗ್ಯತೆ ಇಲ್ಲ ನಿನಗೆ ಎಂದು ರೇಗಿದ್ದಾರೆ..!

ಇನ್ನು ಸಂಸದರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಬೊಟ್ಟು ಇಡಬೇಕೋ.. ಬೇಡವೋ ಅದು ಆಕೆಯ ವೈಯಕ್ತಿಕ ವಿಚಾರ.. ನಿಮಗ್ಯಾಕೆ ಆ ವಿಚಾರ. ಮೊದಲು ನಿಮ್ಮ ಕೆಲಸ ನೀವು ಮಾಡಿ ಎಂದು ಟೀಕಿಸಲಾಗ್ತಿದೆ. ಇಷ್ಟೆಲ್ಲಾ ಮಹಿಳೆಯನ್ನು ಮುಜುಗರಕ್ಕೆ ಈಡುಮಾಡಿದರೂ ಸಂಸದರಿಂದ ಯಾವುದೇ ರೀತಿಯ ರಿಯಾಕ್ಷನ್ ಬಂದಿಲ್ಲ..

More News