ಹುಬ್ಬಳ್ಳಿ : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮೂರು ದಶಕಗಳಿಂದ ರಾಜಕೀಯದಲ್ಲಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ರೀತಿಯ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ್ ರೆಡ್ಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಯಿಸಿದರು. ಜನಾರ್ಧನ ರೆಡ್ಡಿ ಇನ್ನೂ ಅವರ ತೀರ್ಮಾನ ಪ್ರಕಟ ಮಾಡಿಲ್ಲ, ಅವರೂ ಕೂಡ ರಾಜ್ಯದಲ್ಲಿ ಮೂರು ದಶಕದಿಂದ ರಾಜಕೀಯದಲ್ಲಿದ್ದಾರೆ, ಅವರು ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ.
ರೆಡ್ಡಿಯವರಿಗೆ ಬಿಜೆಪಿ ಜತೆ ಹಳೆಯ ಸಂಬಂಧ ಇದೆ, ಜನಾರ್ದನ ರೆಡ್ಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸಚಿವರು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಕೆಲವು ಊಹಾಪೋಹಗಳು ಇರ್ತವೆ, ಚುನಾವಣೆ ಸಂದರ್ಭದಲ್ಲಿ ಆ ಪಕ್ಷದಿಂದ ಈ ಪಕ್ಷಕ್ಕೆ, ಈ ಪಕ್ಷದಿಂದ ಆ ಪಕ್ಷಕ್ಕೆ ಹೋಗೋದು ಸಹಜ ಎಂದು ತಿಳಿಸಿದರು.
ಶಶಿಕಲಾ ಜೊಲ್ಲೆ ಹಾಗೂ ರಮೇಶ್ ಜಾರಕಿಹೊಳಿ ಕದನ
ಸಚಿವೆ ಶಶಕಲಾ ಜೊಲ್ಲೆ ಹಾಗೂ ಮಾಜಿ ಸಚಿವೆ ರಮೇಶ್ ಜಾರಕಿಹೊಳಿ ಕದನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲವನ್ನೂ ನಿಭಾಯಿಸುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ ಎಂದು ತಿಳಿಸಿದರು.
ಡಿಕೆಶಿ ಅವರು ಎಲ್ಲೋ ಹೇಳಿದ್ದಾರೆ ಬಿಜೆಪಿಗೆ 65 ಸೀಟು ಬರುತ್ತೆ ಅಂತಾ, ಆದ್ರೆ, ಅವರು ಅವರ ಪಕ್ಷದ ಸರ್ವೇ ನೋಡಿ ಹೇಳಿರಬಹುದು ಎಂದು ವ್ಯಂಗ್ಯವಾಡಿದರು. ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವ ವಿಚಾರವಾಗಿ ಮತ್ತೆ ಪ್ರತಿಕ್ರಯಿಸಿದ ಅವರು, ಆ ಪ್ರಶ್ನೆಯೇ ಇಲ್ಲ, ಸರ್ವೇ ಮಾಡ್ತಾರೆ, ಅದರಲ್ಲಿ ಏನು ಬರುತ್ತೆ ಅಂತಾ ನೋಡ್ತಾರೆ, ಆ ಮೇಲೆ ರಾಜಕೀಯ ಎದುರಾಳಿ ಹಲವಾರು ಆಯಾಮದ ಮೇಲೆ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದರು.
ಒಂದೇ ಸಾರಿ ಯಾರಿಗೋ ಟಿಕೆಟ್ ತಪ್ಪುತ್ತೆ ಅನೋದಕ್ಕೆ ಆಗಲ್ಲ, ಎಲ್ಲರಿಗೂ ಸಿಗುತ್ತೆ ಅನ್ನೋದು ಸರಿ ಅಲ್ಲ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅನುಭವ ತಕ್ಕಂತೆ ಹೇಳಿರಬಹುದು, ಅವರ ಹೇಳಿಕೆ ಗೌರವಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.




