CASINO KING JOINED CONGRESS: ಬಿಜೆಪಿ ಆಯ್ತು, ಇದೀಗ ಕಾಂಗ್ರೆಸ್: ರೌಡಿ ಶೀಟರ್ ರನ್ನು ಪಕ್ಷಕ್ಕೆ ಸೇರಿಸಿಕೊಂಡ ಡಿಕೆ ಶಿವಕುಮಾರ್

ಬೆಂಗಳೂರು : ಕ್ಯಾಸಿನೋ ಕಿಂಗ್ ಉದಯ್ ಗೌಡ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರೌಡಿ ಶೀಟರ್ ಗಳ ಸೇರ್ಪಡೆಯ ಸಂಖ್ಯೆ ಏರುತ್ತಲೆ ಇದೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆಯ ನಾಯಕರುಗಳಾದ ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ಮಾಜಿ ಎಂಎಲ್ ಸಿ ರಾಮಕೃಷ್ಣ, ದಿನೇಶ್ ಗೂಳಿಗೌಡ, ಗುರುಚರಣ್, ಕೆ.ಬಿ.ಚಂದ್ರಶೇಖರ್ ಸೇರಿ ಹಲವರು ಭಾಗಿಯಾಗಿದ್ದರು.

ಮಂಡ್ಯ ಜಿಲ್ಲೆಯ ಮದ್ದೂರು ಜಿಲ್ಲೆ ಉತ್ತಮ ರಾಜಕಾರಿಣಿಗಳನ್ನು ಕೊಟ್ಟ ಕ್ಷೇತ್ರವಾಗಿದ್ದು, ಮಾದೇಗೌಡ, ಮಂಚೇಗೌಡ, ಎಸ್ ಎಂ.ಕೃಷ್ಣರನ್ನು ಕೊಟ್ಟಿದೆ.

ಮದ್ದೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿಯನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಎಲ್ಲರ ಜೊತೆ ಮಾತನಾಡಿ ಉದಯ್ ಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ಯಾರಿಗೇ ಟಿಕೆಟ್ ಕೊಟ್ರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂಬ ಸ್ಥಳೀಯ ಮುಖಂಡರ ಭರವಸೆ ಹಿನ್ನೆಲೆಯಲ್ಲಿ ಉದಯ್ ಗೌಡರನ್ನ ಸೇರಿಸಿಕೊಳ್ಳಲಾಗಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.

More News