ಬೆಂಗಳೂರು: ಸ್ವತಂತ್ರ ಅಭ್ಯರ್ಥಿ ನಾನು.. ಬೇರೆ ಪಕ್ಷದಲ್ಲಿ ಇದ್ದಾಗಲೂ ನನ್ನ ಫೇಮ್ ಮೇಲೆಯೇ ಗೆದ್ದು ಬಂದವ ನಾನು. ರಾಜಕಾರಣ ಅಂದ್ರೆ ಏನು..? ಬೆಂಗಳೂರಿಗೆ ಅಷ್ಟೇ ಸೀಮಿತ ಆಗ್ಬೇಕು ಅಂತಲಾ..? ಒಂದು ಪಕ್ಷದಲ್ಲಿ ಕೆಲಸ ಮಾಡ್ತಿದ್ದು, ಅಲ್ಲಿ ನಾನೇನೂ ಹೇಳಬಾರ್ದು ಅಂದ್ರೆ ಹೇಗೆ..? ನಾನೇನು ಸನ್ಯಾಸಿ ಅಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದ್ದ ವಿ ಸೋಮಣ್ಣ, ಕೈ ಗೆ ಹಸ್ತ ಚಾಚಿದ್ದಾರೆ. ವಸತಿ ಸಚಿವ ಸೋಮಣ್ಣ ಕಾಂಗ್ರೆಸ್ ಪಕ್ಷದ ಸೂರು ಹುಡುಕಾಟದಲ್ಲಿ ಇದ್ದಾರೆ ಅನ್ನೋದಕ್ಕೆ ಫೋಟೋ ಒಂದು ಸಾಕ್ಷಿ ಆಗಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಪಕ್ಷಾಂತರದ ತಲೆ ಬಿಸಿ ಶುರುವಾಗಿದೆ. ಸಮಾಧಾನ ಮಾಡಿದ್ದಾಯ್ತು, ಅಮಿತ್ ಷಾ ಮನೆಗೆ ಬಂದಾಯ್ತು.. ಆದ್ರೂ ವಿ ಸೋಮಣ್ಣ ಅಸಮಧಾನ ತಣ್ಣಗಾಗ್ತಿಲ್ಲ. ವಿ ಸೋಮಣ್ಣ ಗೆ ಕಾಂಗ್ರೆಸ್ ಗೆ ಸೇರೋ ಒಲವಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಡಿಕೆ ಶಿವಕುಮಾರ್ ಜೊತೆಗಿನ ಫೊಟೋ ಇದೀಗ ಔಟ್ ಆಗಿದ್ದು,
ಸೋಮಣ್ಣ ನ ಸಿಟ್ಟು ಬಿಜೆಪಿ ಗೆ ಬಿಕ್ಕಟ್ಟನ್ನು ಉಂಟು ಮಾಡುತ್ತಿದೆ.
ಸಚಿವ ವಿ.ಸೋಮಣ್ಣನ ನಡೆ ನಿಗೂಢ
ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಾರಾ..? ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರಾ..? ಅನ್ನೋ ಸುದ್ದಿ ಸದ್ದು ಮಾಡಿದ ಬೆನ್ನಲೇ ಇದೀಗ ಎಕ್ಸ್ ಕ್ಲ್ಯೂಸಿವ್ ಫೋಟೋ ಒಂದು ವೈರಲ್ ಆಗಿದೆ. ಸೋಮಣ್ಣ ಮತ್ತು ಡಿಕೆ ಶಿವಕುಮಾರ್ ಮಾತುಕತೆಯ ಪೋಟೋ ಬಟಾಬಯಲಾಗಿದೆ. ಡಿಕೆ ಶಿವಕುಮಾರ್ ಮತ್ತು ವಿ ಸೋಮಣ್ಣ ಪ್ಲೈಟ್ ಒಂದರಲ್ಲಿ ಒಟ್ಟಿಗೆ ಕೂತು ಪ್ರಯಾಣಿಸುತ್ತಿರೋ ಪೋಟೋ ಲಭ್ಯವಾಗಿದ್ದು, ಪೋಟೊ ಸುತ್ತ ಅನುಮಾನದ ಹುತ್ತ ಶುರುವಾಗಿದೆ.

ಸದ್ಯದ ಮಾಹಿತಿ ಪ್ರಕಾರ ಗೋವಿಂದರಾಜುನಗರ ಅಥವಾ ಗುಂಡ್ಲುಪೇಟೆಯ ಮೇಲೆ ವಿ.ಸೋಮಣ್ಣ ಕಣ್ಣು ಇದೆ. ಎರಡು ಕ್ಷೇತ್ರದಲ್ಲಿ ಒಂದು ಕೊಡಿ ಅನ್ನೋ ಬೇಡಿಕೆ ಸೋಮಣ್ಣದು ಎನ್ನಲಾಗಿದೆ. ಆದ್ರೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಇದಕ್ಕೆ ನೋ ಎಂದಿದ್ದಾರಂತೆ. ಹೀಗಾಗಿ ಸೋಮಣ್ಣ ಕೈ ಹಿಡಿಯೋ ಪ್ರಯತ್ನ ಸಪಲವಾಗಿಲ್ಲ.
ಸದ್ಯ ಈ ಒತ್ತಡದ ಮೂಲಕ ಬಿಜೆಪಿಯಲ್ಲಿ ಮಗನಿಗೆ ಟಿಕೆಟ್ ಭದ್ರ ಮಾಡೋದಕ್ಕೆ ಹೊರಟಿದ್ದಾರೆ ಎನ್ನಲಾಗಿದೆ.
ಇತ್ತ ಕೆಪಿಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ವಿ ಸೋಮಣ್ಣ ರನ್ನು ಪಾರ್ಟಿಗೆ ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಸಮಧಾನ ಶಮನಕ್ಕೆ ಬಿಎಲ್ ಸಂತೋಷ್ ಅಖಾಡಕ್ಕೆ

ವಿ ಸೋಮಣ್ಣ ಅವರನ್ನು ಬಿಜೆಪಿ ಪಕ್ಷದಲ್ಲಿ ಕಡೆಗಣಿಸಲಾಗ್ತಿದೆ ಎಂಬ ಅಸಮಧಾನ ಇದ್ದರೆ, ಇತ್ತ
ನಾರಾಯಣಗೌಡರಿಕೆ ಕೆ ಆರ್ ಪೇಟೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿ ಸೇರ್ಪಡೆಯಿಂದ ಕ್ಷೇತ್ರದಲ್ಲಿ ನಾರಾಯಣ ಗೌಡರಿಗೆ ನೆಗೆಟಿವ್ ಅಲೆ ಎದ್ದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾದರೆ ರಾಜಕೀಯ ಭವಿಷ್ಯ ಭದ್ರಗೊಳ್ಳಲಿದೆ ಎಂಬ ಲೆಕ್ಕಾಚಾರ ದಲ್ಲಿ ಇದ್ದಾರೆ. ಹೀಗಾಗಿ ಪಕ್ಷದ ನಡೆಯಿಂದ ಬೇಸರ ಗೊಂಡಿರುವ ವಿ ಸೋಮಣ್ಣ, ನಾರಾಯಣ ಗೌಡ ಜೊತೆಗೆ ಮಾತುಕತೆ ನಡೆಸಲು ಬಿ ಎಲ್ ಸಂತೋಷ್ ಗೆ ಟಾಸ್ಕ್ ನೀಡಲಾಗಿದ್ದು, ಸಂಧಾನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.