KPSC Called For 242 Posts: ಸ್ಪರ್ಧಾರ್ಥಿಗಳಿಗೆ ಗುಡ್ ನ್ಯೂಸ್: KPSC ಯಿಂದ ಕಾಲ್ ಆಯ್ತು 242 ಹುದ್ದೆ

ಬೆಂಗಳೂರು: ಕೋವಿಡ್ ಕಳೆದು ಎರಡು ವರ್ಷದ ಮೇಲೆಯೇ ಆಯ್ತು.. ಕೆಪಿಎಸ್ಸಿ ಯಿಂದ ಎಗ್ಸಾಮ್ ಏನೂ ಕಾಲ್ ಆಗ್ತಿಲ್ವಲ್ಲ ಎಂದು ಎದುರು ನೋಡ್ತಿದ್ದ ಸ್ಪರ್ಧಾ ಆಕಾಂಕ್ಷಿಗಳಿಗೆ ಕೆಪಿಎಸ್ ಸಿ ಕೊನೆಗೂ ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ರಾಜ್ಯ ಲೆಕ್ಕಪತ್ರ & ಲೆಕ್ಕ ಪರಿಶೋಧನೆ ಇಲಾಖೆಯಲ್ಲಿನ ಲೆಕ್ಕ ಸಹಾಯಕರು (Accounts Assistant ) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.

ಅಕೌಂಟೆಂಟ್ ಅಸಿಸ್ಟೆಂಟ್ ಹುದ್ದೆಯು ಗ್ರೂಪ್ ಸಿ ವೃಂದದ ಹುದ್ದೆಯಾಗಿದ್ದು, ಅರ್ಜಿ ಸಲ್ಲಿಸಲು ಜನರಲ್ ಅಭ್ಯರ್ಥಿಗಳಿಗೆ 600 ರೂಪಾಯಿ ಇದ್ದರೆ, ಒಬಿಸಿ ಅಭ್ಯರ್ಥಿಗಳಿಗೆ 300 ರೂ, ಹಾಗೂ ಮಾಜಿ ಸೈನಿಕರಿಗೆ 50 ರೂ ಶುಲ್ಕ ಇದ್ದರೆ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಪ್ರೊಸೆಸ್ಸಿಂಗ್ ಫೀಸ್ 35 ರೂಗಳನ್ನು ಎಲ್ಲಾ ಅಭ್ಯರ್ಥಿಗಳು ಪಾವತಿ ಮಾಡಬೇಕಿದೆ.

ಒಟ್ಟು ಹುದ್ದೆಗಳು: 242 (Non HK)

ವಿದ್ಯಾರ್ಹತೆ:
B.Com / BBM / BBA Degree

ವಯಸ್ಸು: 18-35 (40) years

ಅರ್ಜಿ ಸಲ್ಲಿಸುವ ಅವಧಿ:
23-03-2023 ರಿಂದ 23-04-2023ರ ವರೆಗೆ
(ಮಾರ್ಚ್ 14 ರಿಂದ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಏಪ್ರಿಲ್ 23 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಏಪ್ರಿಲ್ 24 ಪರೀಕ್ಷೆ ಶುಲ್ಕ ಪಾವತಿಸಲು ಕೊನೆ ದಿನಾಂಕವಾಗಿದೆ)

ನೆಗೆಟಿವ್ ಮಾರ್ಕ್ಸ್: 1/4

ವೇತನ : 27, 650- 52,650.

ಸೆಲೆಕ್ಷನ್
ಮೂರು ಪತ್ರಿಕೆ ಇರಲಿದೆ. ಒಂದು ಕಡ್ಡಾಯ ಕನ್ನಡ ಪರೀಕ್ಷೆ ಇರಲಿದೆ. 150 ಅಂಕಗಳಿಗೆ 50 ಅಂಕ ಪಡೆಯುವುದು ಕಡ್ಡಾಯವಾಗಿರಲಿದೆ.
ಎರಡನೇಯದು ಕಮ್ಯೂನಿಕೇಶನ್ ಪತ್ರಿಕೆ 100 ಅಂಕ (ಕಂಪ್ಯೂಟರ್, ಕನ್ನಡ, ಇಂಗ್ಲಿಷ್ ಭಾಷೆ ಪತ್ರಿಕೆ) ಇರಲಿದೆ.

ಮೂರನೇಯದಾಗಿ ಜನರಲ್ ಸ್ಟಡೀಸ್ ಪೇಪರ್ 100 ಅಂಕ ಇರಲಿದೆ. (ಇತಿಹಾಸ, ಭೂಗೋಳ,ಸಂವಿಧಾನ, ವಿಜ್ಞಾನ, ಮೆಂಟಲ್ ಎಬಿಲಿಟಿ)‌. ಈ ಎರಡೂ ಪತ್ರಿಕೆಯ ಮೆರಿಟ್ ಮೇಲೆ ಸೆಲೆಕ್ಷನ್ ಲಿಸ್ಟ್ ಪ್ರಕಟವಾಗಲಿದೆ.

More News