Urigowda-Nanjegowda Movie: ಉರಿಗೌಡ – ನಂಜೇಗೌಡ ಹೆಸರಿನಲ್ಲಿ ಸಿನಿಮಾ..!: ನಿರ್ಮಾಣಕ್ಕೆ ಮುನಿರತ್ನ ತಯಾರಿ

ಬೆಂಗಳೂರು:ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸಿದ ವೇಳೆಯಲ್ಲಿ ಉರಿಗೌರ ಮತ್ತು ನಂಜೇಗೌಡರ ಹೆಸರಿನಲ್ಲಿ ಸ್ವಾಗತ ಕಮಾನುಗಳನ್ನು ಮಾಡುವ ಬಿಜೆಪಿ ಹೊಸದೊಂದು ಇತಿಹಾಸದ ಸಾಲನ್ನು ಹೇಳಲು ಪ್ರಾರಂಭಿಸಿತು. ಉರಿಗೌಡ, ನಂಜೇಗೌಡ ಎಂಬ ಗೌಡರೇ ಟಿಪ್ಪು ಹತ್ಯೆಗೆ ಕಾರಣಕರ್ತರು ಎಂದು ಸಾರಿ ಸಾರಿ ಹೇಳಿದ್ದರು. ಇದು ಸಾರ್ವಜನಿಕರಿಂದ ಟೀಕೆಗೂ ಗುರಿಯಾಯ್ತು. ಈ ಟ್ರೆಂಡ್ ನ್ನು ಇನ್ನಷ್ಟು ದಿನಗಳ ಕಾಲ ಬೂಸ್ಟ್ ಮಾಡಲು ಸಚಿವ ಮುನಿರತ್ನ ಮುಂದಾಗಿದ್ದಾರೆ. ಉರಿಗೌಡ, ನಂಜೇಗೌಡದ ಬಗ್ಗೆ ಪರ ವಿರೋಧ ಹೇಳಿಕೆ ಬೆನ್ನಲ್ಲೇ ಅವರ ಕುರಿತು ಸಿನಿಮಾ ನಿರ್ಮಾಣಕ್ಕೆ ಮುನಿರತ್ನ ಮುಂದಾಗಿದ್ದಾರೆ.

ಮಂಡ್ಯದ ಒಕ್ಕಲಿಗ ವೀರರು ಎಂದು ಬಿಂಬಿಸಲಾಗುತ್ತಿರುವ ವ್ಯಕ್ತಿಗಳ ಹೆಸರಿನಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಸಿನಿಮಾ ಮಾಡುವ ಸಂಬಂಧ ಈಗಾಗಲೇ ಎರಡು ಟೈಟಲ್ ಅನ್ನು ರಿಜಿಸ್ಟರ್ ಕೂಡ ಮಾಡಿಸಿದ್ದು, ಉರಿಗೌಡ –ನಂಜೇಗೌಡ ಅಥವಾ ನಂಜೇಗೌಡ-ಉರಿಗೌಡ ಎಂಬ ಹೆಸರನ್ನು ನೀಡಲು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಈ ಬಗ್ಗೆ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ಪ್ರತಿಕ್ರಿಯಿಸಿದ್ದು, ಮುನಿರತ್ನ ಅವರು ಸಿನಿಮಾ ಮಾಡುವ ಸಂಬಂಧ ಅವರದ್ದೇ ಬ್ಯಾನರ್ ಅಡಿಯಲ್ಲಿ ಎರಡು ಶೀರ್ಷಿಕೆಗಳನ್ನು ನೋಂದಾವಣಿ ಮಾಡಿಕೊಳ್ಳಲು ಅರ್ಜಿ ಕೊಟ್ಟಿದ್ದಾರೆ. ಮುಂದೆ ನಡೆಯುವ ಸಮಿತಿಯ ಸಭೆಯಲ್ಲಿ ಟೈಟಲ್ ಗಳನ್ನು ಪರಿಶೀಲಿಸಿ ಅಂತಿಮ ಮಾಡುತ್ತೇವೆ ಎಂದಿದ್ದಾರೆ.

More News