Prabhas’s Photo Goes Viral: ಪ್ರಭಾಸ್‌ ಎನ್ನಲಾದ ಫೋಟೋ ವೈರಲ್‌ : ಅಯ್ಯೋ ಏನಾಯ್ತು ಪ್ರಭಾಸ್ ಗೆ ಎಂದು ದಂಗಾದ ಅಭಿಮಾನಿಗಳು

ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್‌ ನ ಸ್ಟಾರ್‌ ನಟ ಪ್ರಭಾಸ್‌ ಅವರ ಫೋಟೋ ಒಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳಿಗೆ ಶಾಕ್‌ ಆಗಿದೆ. ಪ್ರಭಾಸ್‌ ಜೊತೆಗೆ ಕನ್ನಡದ ಹೆಸರಾಂತ ನಟ ಶಿವರಾಜ್‌ ಕುಮಾರ್‌ ಹಾಗೂ ತಲೈವಾ ರಜನೀಕಾಂತ್‌ ಸಹ ಇದ್ದಾರೆ.

ಬಾಹುಬಲಿ ಸಿನಿಮಾ ಮೂಲಕ ದೇಶದೆಲ್ಲೆಡೆ ಸಂಚರಿಸಿರುವ ಪ್ರಭಾಸ್‌ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಯಾರು ಏನೇ ಹಾಕಿದರೂ ಸಹ ಅತಿ ವೇಗವಾಗಿ ಎಲ್ಲ ಕಡೆಗಳಲ್ಲಿ ಹರಡಿಬಿಡುತ್ತದೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಪ್ರಭಾಸ್‌, ಶಿವಣ್ಣ ಹಾಗೂ ತಲೈವಾ ಇರುವ ಫೋಟೋ ಒಂದು ವೈರಲ್‌ ಆಗುತ್ತಿದ್ದು, ಅದನ್ನು ನೋಡಿದ ಪ್ರಭಾಸ್‌ ಅಭಿಮಾನಿಗಳಿಗೆ ಶಾಕ್‌ ಆಗಿದೆ. ಇದು ಏನು ಎಂದು ತಿಳಿದವರು ಗಾಬರಿ ಪಟ್ಟಿಲ್ಲ. ಆದರೆ, ಅನೇಕರು ಪ್ರಭಾಸ್‌ ಗೆ ಏನಾಗಿದೆ ಎಂದು ಅಚ್ಚರಿಪಟ್ಟಿದ್ದಾರೆ. ಮೂರು ಸ್ಟಾರ್‌ ಹೀರೋಗಳು ಒಟ್ಟಿಗೆ ಸೇರಿದ್ದು, ಅದರಲ್ಲಿ ಪ್ರಭಾಸ್‌ ದಪ್ಪದಾಗಿ, ಒಂದು ವಿಚಿತ್ರವಾದ ಆಕಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ-ಮೊನ್ನೆಯವರಿಗೆ ಚೆನ್ನಾಗಿದ್ದ ಪ್ರಭಾಸ್‌ ಯಾಕೆ ಹೀಗೆ ಆಗೋದ್ರು ಅಂತ ಅಚ್ಚರಿಯನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶಿವಣ್ಣ ಹಾಗೂ ರಜನೀಕಾಂತ್‌ ಮಿಂಚುತ್ತಿದ್ರೆ, ಪ್ರಭಾಸ್‌ ಕೆಟ್ಟದಾಗಿದ್ದಾರೆ ಎಂದು ಅನೇಕರು ಕಮೆಂಟಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಟ ಪ್ರಭಾಸ್‌ ಅವರ ಹೊಸ ಅವತಾರದ ಕುರಿತು ಅವರ ಅಭಿಮಾನಿಗಳು ಹುಡುಕುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಿಳಿದ ಸಂಗತಿ ಎಂದರೆ, ಪ್ರಭಾಸ್‌ ಗೆ ಏನೂ ಆಗಿಲ್ಲ. ಮುಂದೆ ಬರಲಿರುವ ಜೈಲರ್‌ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ತೆಗೆದ ಚಿತ್ರವಾಗಿದೆ. ಆದರೆ, ಆ ವ್ಯಕ್ತಿಯು ನಟ ಪ್ರಭಾಸ್‌ ಅಲ್ಲ, ಬದಲಿಗೆ ಶೂಟಿಂಗ್‌ ಸೆಟ್‌ ಗೆ ಬಂದಿದ್ದ ಅತಿಥಿಯೊಬ್ಬರೊಟ್ಟಿಗೆ ತೆಗೆಸಿಕೊಂಡಿರುವ ಚಿತ್ರವಾಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಹಾಗೂ ತಲೈವಾ ರಜನೀಕಾಂತ್‌ ನಟಿಸಿದ್ದಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ಎಡಿಟ್‌ ಮಾಡಿದ್ದಾಗಿದೆ ಎನ್ನಲಾಗಿದೆ.

ಶೂಟಿಂಗ್‌ ಗೆ ಬ್ರೇಕ್‌ ಹಾಕಿದ ಪ್ರಭಾಸ್‌ : ಪ್ಯಾನ್‌ ಇಂಡಿಯಾ ಲೆವೆಲ್‌ ಸಿನಿಮಾ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರೊಂದಿಗೆ ಸಲಾರ್‌ ಸಿನಿಮಾ ಹಾಗೂ ಬಾಲಿವುಡ್‌ ನ ಹೆಸರಾಂತ ನಿರ್ದೇಶಕ ಓಂ ರಾವುತ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆದಿಪುರುಷ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಸಧ್ಯಕ್ಕೆ ಪ್ರಭಾಸ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ಹೇಳಿದ್ದು, ಸಧ್ಯಕ್ಕೆ ಶೂಟಿಂಗ್‌ ಅನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಮಾರ್ಚ್‌ ನಲ್ಲಿ ಶೂಟಿಂಗ್‌ ಶುರುವಾಗಬೇಕಿದ್ದ ಪೀಪಲ್‌ ಮೀಡಿಯಾ ಸಿನಿಮಾ ಟೀಂ ಸಹ ಶೂಟಿಂಗ್‌ ಅನ್ನು ಕ್ಯಾನ್ಸಲ್‌ ಮಾಡಲಾಗಿದೆ ಎಂದು ಮೂಲಗಳು ಹೇಳಿದ್ದು, ಪ್ರಭಾಸ್‌ ಅವರು ಸಾಮಾನ್ಯ ಜ್ವರದಿಂದ ಬಳಲುತ್ತಿದ್ದು, ಯಾರೂ ಆತಂಕ ಪಡಬೇಕಿಲ್ಲ ಎಂದು ವೈದ್ಯ ಮೂಲಗಳು ಹೇಳಿವೆ.

More News