ಕಲುಷಿತ ನೀರು ಕುಡಿದು ಸಾವನ್ನಪ್ಪಿದ ಕುಟುಂಬಕ್ಕೆ ಮೂರು ಲಕ್ಷ ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪಿರೋದು ದುಃಖಕರ ಸಂಗತಿ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮನೀಷ್ ಮುದ್ಗಿಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ, ಒಂದು ವಾರದಲ್ಲಿ ವರದಿ ಕೊಡಲು ಸೂಚಿಸಲಾಗಿದೆ ಎಂದು ವಿವರಿಸಿದರು.

ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರಲು ಯಾರು ಏನು, ಸಂಬಂಧಪಟ್ಟ ಜಾಗ, ಅಧಿಕಾರಿಗಳು ಎಲ್ಲರ ಬಗ್ಗೆ ಸಮಗ್ರ ವರದಿ ಕೇಳಲಾಗಿದೆ, ಇನ್ನೊಂದೆಡೆ ಕುಟುಂಬ ತನ್ನವರನ್ನಲ್ಲಾ ಕಳೆದುಕೊಂಡಿದೆ. ಅವರ ದಃಖದಲ್ಲಿ ನಾನೂ ಭಾಗಿಯಾಗುತ್ತೇನೆ, ಅವರಿಗೆ ದಃಖ ಬರಿಸೋ ಶಕ್ತಿ ನೀಡಲಿ ಎಂದು ತಿಳಿಸಿದ ಅವರು ಪ್ರತೀ ಕುಟುಂಬಕ್ಕೆ ಮೂರು ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

ಅಫಜಲಪುರದಲ್ಲಿ ಮಂಗನ ಖಾಯಿಲೆ ಕಾಣಿಸಿಕೊಂಡ ಹಿನ್ನೆಲೆ, ಅಲ್ಲೂ ಕೂಡ ಕಲುಷಿತ ನೀರು ಸೇರಿರಬಹುದು ಶಂಕೆ ವ್ಯಕ್ತವಾಗಿದೆ, ಅಲ್ಲೂ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿಲಾಗಿದೆ, ಅಲ್ಲಿಯೂ ಕೂಡ ಹೂವಿನಹಡಗಲಿ ರೀತಿಯಲ್ಲಿ ಪರಿಹಾರ ನೀಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಅವರು ವಿವರಿಸಿದರು.

More News