High Command Stops Siddu Contest Kolar: ಕೋಲಾರದಲ್ಲಿ ಸಿದ್ದು ಸ್ಪರ್ಧೆಗೆ ಹೈಕಮಾಂಡ್ ತಡೆ: ಎಲ್ಲಿ ಹೇಳ್ತಾರೆ ಅಲ್ಲಿ ನಿಲ್ತೇನೆ. ಇಲ್ಲ ಅಂದ್ರೆ ಇಲ್ಲ ಎಂದ ಸಿದ್ದರಾಮಯ್ಯ

ಕೋಲಾರ ಸುರಕ್ಷಿತ ಕ್ಷೇತ್ರವಲ್ಲ.. ಕೋಲಾರಕ್ಕೆ ಹೋದ್ರೆ ಸೋಲು ಖಚಿತ ಎಂಬ ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದಾರೆ. ಹೈಕಮಾಂಡ್ ಸೂಚಿಸಿದ ಕಡೆ ನಿಲ್ಲುತ್ತೇನೆ. ಇಲ್ಲ ಅಂದ್ರೆ ಇಲ್ಲ ಎಂದು ವಿಪಕ್ಷ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಎರಡು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಫರ್ಧೆ ವಿಚಾರದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್ ಏನು ಹೇಳುತ್ತೆ ಅಂತ ಗೊತ್ತಿಲ್ಲ.‌ ಹೈಕಮಾಂಡ್ ಎರಡು ಕ್ಷೇತ್ರದಲ್ಲಿ ನಿಲ್ಲಿ ಅಂತ ಹೇಳಲ್ಲ. ಜನರ ಸೇವೆ ಮಾಡಲು ರಾಜಕೀಯದಲ್ಲಿ ಇದ್ದೇವೆ.‌ ಎಲ್ಲಿ‌ನಿಲ್ಲಿ ಅಂತ ಹೇಳ್ತಾರೆ ಅಲ್ಲಿ ನಿಲ್ತೇನೆ. ಇಲ್ಲ ಅಂದ್ರೆ ಇಲ್ಲ. ಬಾದಾಮಿಯಿಂದ ನನಗೆ ಒತ್ತಡ ಇದೆ. ಕೋಲಾರ ನಾಯಕರಿಂದ ಕೂಡ ಒತ್ತಡ ಇದೆ
ಆದ್ರೆ ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೆ ಅದರ ಮೇಲೆ ನಿರ್ಧಾರ ಎಂದರು.

ನಾಳೆ ಕೋಲಾರ ಪ್ರವಾಸ ಸಿದ್ದರಾಮಯ್ಯ ರದ್ದು ಮಾಡಿದ್ದಾರೆ. ಕೋಲಾರ ಸುರಕ್ಷಿತ ಕ್ಷೇತ್ರವಲ್ಲ ಎಂದು ರಾಹುಲ್ ಗಾಂಧಿ ಹೇಳಿರುವ ಕಾರಣ ಸಿದ್ದರಾಮಯ್ಯ ಕೋಲಾರ ಪ್ರವಾಸ ರದ್ದು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ.‌ನಾನು ಯಾವುದೇ ಕ್ಷೇತ್ರಕ್ಕೆ ಅರ್ಜಿ ಹಾಕಿಲ್ಲ. ಹೈಕಮಾಂಡ್ ನಿರ್ಧಾರ ಅಂತ ಹೇಳಿದ್ದೆ. ನಾನು ಕೋಲಾರದಲ್ಲಿ ಮನೆ ಮಾಡಿಲ್ಲ.‌ ಮನೆ ನೋಡಿದ್ದು ನಿಜ ಆದರೆ ಮನೆ ಮಾಡಿಲ್ಲ.‌ಹೈಕಮಾಂಡ್ ತಿರ್ಮಾನ ಅಂತ ಹೇಳಿದ್ದೆ.‌ನಾಳೆ ಬೆಳಗಾವಿಗೆ ಹೋಗಬೇಕು.‌ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ.‌ ಬಾದಾಮಿ, ಕೋಲಾರ, ವರುಣಾ ಎಲ್ಲಿ ಹೇಳ್ತಾರೆ ಅಲ್ಲಿ ನಿಲ್ತೇನೆ.‌ ನಾನು ಯಾವ ಟೆನ್ಷನ್ ನಲ್ಲೂ ಇಲ್ಲ ಎಂದರು.

ಶಾಸಕರ‌ ಮಕ್ಕಳ ಟಿಕೆಟ್ ವಿಚಾರದ ಕುರಿತು ಮಾತನಾಡಿದ ಅವರು, ಆ ಬಗ್ಗೆ ಚರ್ಚೆ ಆಗಿಲ್ಲ. ೨೨ ರ ಬೆಳಗ್ಗೆ ಟಿಕೆಟ್ ಘೋಷಣೆ ಆಗುತ್ತೆ. ೨೨ ಯುಗಾದಿ ಹಬ್ಬ, ೨೧ ಕ್ಕೆ ಅಮವಾಸ್ಯೆ. ಅಮವಾಸ್ಯೆ, ಹಣ್ಣಿಮೆ ಯಾವುದೇ ಸಂಬಂಧ ಇಲ್ಲ. ಎಲ್ಲಾ ಹಾಲಿ‌ ಶಾಸಕರ ಕ್ಷೇತ್ರ ಚರ್ಚೆ ಆಗಿಲ್ಲ. ಒಂದು ಹೆಸರು ಇರುವ ಕ್ಷೇತ್ರಗಳು ಕ್ಲೀಯರ್ ಆಗುತ್ತೆ. ವರುಣಾದಲ್ಲಿ ಯತೀಂದ್ರ ಇದ್ದಾನೆ, ಅವನದು ಒಂದೇ ಹೆಸರು ಇದೆ. ಕ್ಲೀಯರ್ ಆಗಬೇಕು ಅಲ್ವಾ.‌ಬಿಜೆಪಿಯಿಂದ ಕೆಲವರು ಬರ್ತಾರೆ.‌ಒಂದು ಹೆಸರು ಇರುವ ಕ್ಷೇತ್ರ ಮಾತ್ರ ಕ್ಲೀಯರ್ ಆಗಿದೆ. ಸ್ಕ್ರೀನಿಂಗ್ ಕಮಿಟಿ ಸಹ ಒಂದು ಹೆಸರು ಇರುವ ಕ್ಷೇತ್ರವನ್ನಷ್ಟೇ ಕ್ಲೀಯರ್ ಮಾಡಿದ್ದು. ಕೆಲ ಶಾಸಕರ ಹೊಲ್ಡ್ ಮಾಡಿದ್ದಾರೆ ಅಂತ ಯಾರು ಹೇಳಿದ್ದು..? ಕ್ರಾಸ್ ಎಕ್ಸಾಮಿನೇಷನ್ ಮಾಡಬೇಡಿ ಎಂದು ಹೇಳಿದರು.

ದಶಪಥ ಹೆದ್ದಾರಿಯಲ್ಲಿ ನೀರು‌ನಿಂತ ವಿಚಾರದ ಕುರಿತು ಮಾತನಾಡಿದ ಅವರು, ಚುನಾವಣೆ ಇದೆ ಅಂತ ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಕ್ರೆಡಿಟ್ ಪಡೆಯಲು ಉದ್ಘಾಟನೆ ಮಾಡಿದ್ರು. ನಮ್ಮ ಕಾಲದಲ್ಲಿ ಹೈವೆ ಕಾಮಗಾರಿ ಬಿಡುಗಡೆ ಆಗಿದ್ದು. ಕೇಂದ್ರದಲ್ಲಿ ಆಸ್ಕರ್ ಫರ್ನಾಂಡೀಸ್ ಇದ್ರು. ನಾನು ಸಿಎಂ ಆಗಿದ್ದೆ.‌ ಈಗ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಅದರಿಂದ ನೀರು ನಿಲ್ಲುತ್ತಿದೆ ಎಂದು ಕುಟುಕಿದರು.

More News