ಬೆಂಗಳೂರು: ಬಾಲಿವುಡ್ ಸಿನಿಮಾದಲ್ಲಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡರೆ ವ್ಹಾವ್ ಅಂತಾರೆ. ಕನ್ನಡದವ್ರು ಆ ರೀತಿ ಕಾಣಿಸಿಕೊಂಡರೆ ವಿರೋಧಿಸೋದ್ಯಾಕೆ.? ಎಂದು ತನಿಷಾ ಕುಪ್ಪಂದ ಬೇಸರ ವ್ಯಕ್ತಪಡಿಸಿದರು.

‘ಪೆಂಟಗಾನ್’ ಸಿನಿಮಾ ಬೋಲ್ಡ್ ಸೀನ್ ವಿಚಾರದ ಕುರಿತು ಬಹಳಷ್ಟು ಸದ್ದು ಮಾಡ್ತಿದೆ. ಕಾಮನಬಿಲ್ಲು ಮೂಡುತಿದೆ ಎಂಬ ಬೋಲ್ಡ್ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸುತ್ತಿದೆ. ಸಿನಿಮಾದ ಬಗ್ಗೆ ಮಾತಾಡ್ತಾ ಕನ್ನಡ ಸಿನಿಮಾ ಇಂಡಸ್ಟ್ರಿ ಕುರಿತು ಬೇಸರ ವ್ಯಕ್ತಪಡಿಸಿದ ನಟಿ, ಕನ್ನಡ ದ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡರೆ, ಬೇಕಿತ್ತಾ ಇವರಿಗೆ..? ನಮ್ ನೇಟಿವಿಟಿ ಇದಲ್ಲ ಅಂತಾರೆ. ಆದರೆ ನಮ್ಮ ಜನರೇ ಎಷ್ಟೋ ಮಂದಿ ಬಾಲಿವುಡ್, ಹಾಲಿವುಡ್ ಗೆ ಹೋಗಿ ನಟಿಸ್ತಾರೆ. ಅಲ್ಲಿದ್ದಾಗ ಬೆಂಬಲಿಸ್ತಾರೆ.. ಆದರೆ ಕನ್ನಡದಲ್ಲಿ ಮಾತ್ರ ಹೀಗೆ ಯಾಕೆ..?
ಎಂದು ಬೇಸರಗೊಂಡರು.

ಬೇರೆ ಭಾಷಿಗರನ್ನು ಕರ್ಕೊಂಡ್ ಬಂದು ಬೋಲ್ಡ್ ಸೀನ್ ಯಾಕೆ ಮಾಡಿಸ್ತೀರಿ..? ನಾವಿದ್ದೇವೆ.. ನನ್ನನ್ನೋ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಆರ್ಟಿಸ್ಟ್ ಇದ್ದೇವೆ..
ನಮ್ಮನ್ನೇ ಆಯ್ಕೆ ಮಾಡಿಯಲ್ಲಾ..? ಮೊದಲು ನಮ್ಮವರು ನಮ್ಮನ್ನು ಅಕ್ಸೆಪ್ಟ್ ಮಾಡ್ಬೇಕು. ಬೇರೆ ಭಾಷಿಗರು ನಂಗೆ ಮೆಸೇಜ್ ಮಾಡಿ ಸೀನ್ ನಲ್ಲಿ ತುಂಬಾ ಚನ್ನಾಗಿ ಕಾಣಿಸಿಕೊಂಡಿದ್ದೀರಿ.. ಗ್ರೇಟ್ ಜಾಬ್ ಎಂದು ಆಂಧ್ರದಿಂದ ಮೆಸೇಜ್ ಮಾಡ್ತಾರೆ.. ಆದರೆ ಇಲ್ಲಿವರೆಗೂ ನಮ್ಮ ಕನ್ನಡಿಗರಿಂದ ಒಳ್ಳೆ ರಿಪ್ಲೇ ಬಂದಿಲ್ಲ ನಂಗೆ ಎಂದರು.

ನನಗೆ ಅನಿಸಿದ ಮಟ್ಟಿಗೆ ಆರ್ಟಿಸ್ಟ್ ಎಂದರೆ ಅವರು ಎಲ್ಲಾ ರೀತಿಯ ಪಾತ್ರವನ್ನು ಮಾಡಬೇಕು. ಬೋಲ್ಡ್ ಆಗಿ, ಫ್ಯಾಷನ್ ಆಗಿ, ಹಳ್ಳಿ ಗಮಾರನಾಗಿ, ಹುಚ್ಚರ ರೀತಿ ಹೀಗೆ ಎಲ್ಲಾ ರೀತಿಯ ಪಾತ್ರ ಮಾಡ್ಬೇಕು. ಕಾಮನ್ ಆಗಿ ಎಲ್ಲರೂ ನನ್ನನ್ನು ನೆಗೆಟಿವ್ ರೋಲ್ ನಲ್ಲಿ ನೋಡಿದ್ದಾರೆ. ನಾನು ಅದರಲ್ಲಿ ಇನ್ವಲ್ಮೆಂಟ್ ಆದ ಕಾರಣದಿಂದಲೇ ಜನ ನನ್ನ ಬೈಕೊಳ್ತಾರೆ. ಜನ ಬೈಕೊಳ್ತಿದ್ದಾರೆ ಎಂದರೆ ನಾನು ನನ್ನ ಪಾತ್ರಕ್ಕೆ ಪ್ರಾಮಾಣಿಕ ವಾಗಿ ಶ್ರಮಿಸಿದ್ದೀನಿ ಎಂದರ್ಥ. ಆದರೆ ನಮ್ಮ ಕನ್ನಡದವರು ನಮ್ಮನ್ನ ಬೆಂಬಲಿಸಬೇಕು ಎಂದರು.




