SALMAN KHAN THREAT CALL: ಸಲ್ಮಾನ್ ಖಾನ್ ಕೊಲೆಗೆ ಸಂಚು: ಸಲ್ಲು ಮನೆ ಸುತ್ತ ಪೊಲೀಸ್ ಸರ್ಪಗಾವಲು

ಮುಂಬೈ: ಪಾತಕಿ ಲಾರೆನ್ಸ್ ಬಿಷ್ಣೋಯಿಯ ನಟೋರಿಯಸ್ ಗ್ಯಾಂಗ್, ನಟ ಸಲ್ಮಾನ್ ಖಾನ್ ವಿರುದ್ದ ಕತ್ತಿ ಮಸೆಯುತ್ತಿದ್ದು, ಮತ್ತೊಮ್ಮೆ ಸಲ್ಲು ಕೊಲೆಗೆ ಸಂಚು ರೂಪಿಸಿದೆ. ತಿಹಾರ್ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ಖಾನ್ ನನ್ನು ಕೊಲ್ಲವುದೇ ನನ್ನ ಜೀವನದ ಅಂತಿಮ ಗುರಿ ಎಂದಿದ್ದ. ಇದೀಗ ಮತ್ತೊಂದು ಬೆದರಿಕೆ ಬಂದಿದ್ದು, ಬಾಂದ್ರಾ ದಲ್ಲಿರುವ ಸಲ್ಮಾನ್ ಖಾನ್ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಇ ಮೇಲ್ ಮೂಲಕ ಕೊಲೆ ಸಂಚಿನ ಬಗ್ಗೆ ಸೂಚಿಸಿರೋ ಪಾತಕಿಗಳು, ಸಲ್ಮಾನ್ ಖಾನ್ ರನ್ನು ಕೊಲ್ಲುವುದಾಗಿಯೇ ತಿಳಿಸಿದ್ದಾರೆ. ಸಲ್ಮಾನ್ ಮ್ಯಾನೇಜರ್ ಪ್ರಶಾಂತ್ ಗುಂಜಲ್ಕರ್ ಮೇಲ್ ಮಾಡಿರುವ ಪಾತಕಿ ಗೋಲ್ಡಿ ಬ್ರಾರ್ನ ಆಪ್ತ ಮೋಹಿತ್ ಗರ್ಗ್ ಶೀಘ್ರದಲ್ಲೇ ಮುಗಿಸೋದಾಗಿ ಸೂಚನೆ ನೀಡಿದ್ದಾರೆ.
ಸಲ್ಮಾನ್ ಖಾನ್ ಮೇಲೆ ಕೊಲ್ಲುವಷ್ಟು ದ್ವೇಷ ಯಾಕೆ..?
2018ರಲ್ಲೇ ಸಲ್ಮಾನ್‌ ಅವರನ್ನು ಹತ್ಯೆ ಮಾಡಲು ಪ್ಲಾನ್‌ ನಡೆದಿತ್ತಂತೆ. ಆದರೆ ಹೆಚ್ಚಿನ ಭದ್ರತೆಯಿಂದ ಅದು ಸಾಧ್ಯವಾಗಲಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಲಾರೆನ್ಸ್‌ ಬಿಷ್ಣೋಯಿ ಬಾಯಿ ಬಿಟ್ಟಿದ್ದಾನೆ. ಕೃಷ್ಣಮೃಗ ಬೇಟೆ ಪ್ರಕರಣವೇ ನಟ ಸಲ್ಮಾನ್ ಖಾನ್ ಜೀವ ಬೆದರಿಕೆಗೆ ಕಾರಣ ಎನ್ನಲಾಗಿದೆ.

ಕೃಷ್ಣ ಮೃಗವನ್ನು ಬಿಷ್ಣೋಯಿ ಸಮುದಾಯ ದೇವರಂತೆ ಆರಾಧಿಸುತ್ತಾರೆ. ತಮ್ಮ ಆರಾಧನಾ ದೈವ ಕೃಷ್ಣಮೃಗವನ್ನು ಕೊಂದು ಸಲ್ಮಾನ್‌ ಖಾನ್‌ ತಪ್ಪು ಮಾಡಿದ್ದಾರೆ. ಬಿಕಾನೇರ್‌ ದೇವಸ್ಥಾನಕ್ಕೆ ಹೋಗಿ ಆತ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದಿದ್ದ. ಇದೀಗ ಮತ್ತೆ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಮೇಲ್ ಬಂದಿದೆ.
ಶನಿವಾರ ಮಧ್ಯಾಹ್ನ ಇಮೇಲ್ ಬಂದಿದ್ದು, ”ಗೋಲ್ಡಿ ಅಣ್ಣ ನಿನ್ನ ಬಾಸ್ ಜೊತೆ ಮಾತನಾಡಬೇಕು ಎಂದಿದ್ದಾರೆ. ಅವರು ಲಾರೆನ್ಸ್ ನ ಹೇಳಿಕೆ ನೋಡಿಯೇ ಇರಬೇಕು. ಇಲ್ಲ ಅಂದರೆ ಸಂದರ್ಶನ ತೋರಿಸು. ಈ ವಿಷಯ ಇಲ್ಲಿಗೆ ಮುಗಿಸಬೇಕು ಎಂದಿದ್ದರೆ ಗೋಲ್ಡಿ ಅಣ್ಣನ ಜೊತೆ ಮಾತಾಡಲು ಹೇಳು ಅವನಿಗೆ. ಅದೂ ನೇರಾ-ನೇರಾವಾಗಿ ಮಾತನಾಡಬೇಕು. ಈಗ ಸಮಯ. ತಡಮಾಡಿದರೆ ಅಥವಾ ಬರದಿದ್ದರೆ ಹೊಡೆಯುತ್ತೇವೆ ಎಂದು ಮೋಹಿತ್ ಗರ್ಗ್ ಎಂಬಾತನಿಂದ ಮೇಲ್ ಬಂದಿದೆ.

ಕೊಲೆ ಬೆದರಿಕೆ ಇ-ಮೇಲ್ ಬಂದ ಬೆನ್ನಲ್ಲೇ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು IPC ಸೆಕ್ಷನ್ 506 ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ನಿವಾಸಕ್ಕೆ ಭಿಗಿ ಭದ್ರತೆ ಒದಗಿಸಲಾಗಿದೆ.

More News