TEAM INDIA LOST THE SERIES: ಭಾರತದ ವಿರುದ್ಧ ODIನಲ್ಲಿ ವಿಶೇಷ ದಾಖಲೆ ಬರೆದ ಆಡಂ ಜ್ಹಂಪ

ಭಾರತ ವಿರುದ್ಧದ ODI ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ ತಂಡದ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಆಡಂ ಜ್ಹಂಪ, ಟೀಂ ಇಂಡಿಯಾ ವಿರುದ್ಧ ವಿಶೇಷ ದಾಖಲೆ ಬರೆದಿದ್ದಾರೆ.
ಚೆನ್ನೈನಲ್ಲಿ ನಡೆದ ಭಾರತ ವಿರುದ್ಧದ ODI ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಪರಿಣಾಮಕಾರಿ ಬೌಲಿಂಗ್‌ ದಾಳಿ ನಡೆಸಿದ ಜ್ಹಂಪ, ಆಸೀಸ್‌ ಗೆಲುವಿನ ಹೀರೋ ಆಗಿ ಮಿಂಚಿದರು.
ಟೀಂ ಇಂಡಿಯಾ ಬ್ಯಾಟಿಂಗ್‌ ಬೆನ್ನೆಲುಬು ಮುರಿದ ಲೆಗ್‌ ಸ್ಪಿನ್ನರ್‌, ಪ್ರಮುಖ ನಾಲ್ಕು ವಿಕೆಟ್‌ ಪಡೆದು ಕಮಾಲ್‌ ಮಾಡಿದರು.
ಅತ್ಯುತ್ತಮ ಪ್ರದರ್ಶನ ನೀಡಿದ ಆಡಂ ಜ್ಹಂಪ, ಆ ಮೂಲಕ ಭಾರತದ ವಿರುದ್ಧದ ODIನಲ್ಲಿ ಎರಡು ಬಾರಿ ನಾಲ್ಕು ವಿಕೆಟ್‌ಗಳನ್ನ ಪಡೆದ ಏಕೈಕ ಸ್ಪಿನ್ನರ್‌ ಎಂಬ ವಿಶೇಷ ದಾಖಲೆ ಬರೆದಿದ್ದಾರೆ. ಈ ಹಿಂದೆ 2020ರಲ್ಲಿ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ODI ಪಂದ್ಯದಲ್ಲಿ ಜ್ಹಂಪ, ಮೊದಲ ಬಾರಿಗೆ ನಾಲ್ಕು ವಿಕೆಟ್‌ ಪಡೆದಿದ್ದರು.
ಟೀಂ ಇಂಡಿಯಾ ವಿರುದ್ಧ ಈವರೆಗೂ ಕೆಲವೇ ಸ್ಪಿನ್ನರ್‌ಗಳಷ್ಟೇ ಸಕ್ಸಸ್‌ ಕಂಡಿದ್ದು, ಈವರೆಗೂ ನಾಲ್ವರು ಸ್ಪಿನ್ನರ್‌ಗಳು ಮಾತ್ರವೇ ಭಾರತದ ವಿರುದ್ಧ ODIನಲ್ಲಿ ನಾಲ್ಕು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಆಡಂ ಜ್ಹಂಪ ಅವರಿಗಿಂತಲೂ ಮೊದಲು, 2007ರಲ್ಲಿ ಬ್ರಾಡ್‌ ಹಾಗ್‌ 4 ವಿಕೆಟ್‌ ಪಡೆದು ಮಿಂಚಿದ್ದರು.
ಆಡಂ ಜ್ಹಂಪ ಅವರ ಸ್ಪಿನ್‌ ಕಮಾಲ್‌ನಿಂದ ಟೀಂ ಇಂಡಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್‌ ಪಡೆಯುವ ಮೂಲಕ ಆಸೀಸ್‌ ತಂಡಕ್ಕೆ 2-1ರ ಅಂತರದಿಂದ ಏಕದಿನ ಸರಣಿ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

More News