AGAIN I WILL FIGHT SAYS AHIMSA CHETAN: ಮತ್ತೇ ಹೋರಾಡ್ತೀನಿ.. ಮತ್ತೇ ಜೈಲಿಗೆ ಹೋಗಲೂ ರೆಡಿ ಇದ್ದೇನೆ: ಜೈಲಿಂದ ಹೊರ ಬಂದ ನಟ ಚೇತನ್ ಕಿಡಿ

ಬೆಂಗಳೂರು: ಹಿಂದುತ್ವ ದ್ವೇಷ ಮತ್ತು ಸುಳ್ಳಿನ ಮೇಲೆ ಕಟ್ಟಿದೆ. ಅದನ್ನು ಸಮಾನತವಾದಿಗಳೆಲ್ಲಾ ಪ್ರಶ್ನೆ ಮಾಡುತ್ತೇವೆ. ಆ ಮೂಲಕ ಸಮ ಸಮಾಜವನ್ನು ಕಟ್ಟುತ್ತೇವೆ. ಮುಂದಿನ ದಿನಗಳಲ್ಲೂ ಸಹ ಅನ್ಯಾಯದ ವಿರುದ್ಧ ಹೋರಾಡುತ್ತೇನೆ. ಮತ್ತೇ ಜೈಲಿಗೆ ಹಾಕಿದರೂ ಪರ್ವಾಗಿಲ್ಲ ಎಂದು ಸ್ಯಾಂಡಲ್ ವುಡ್ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅಬ್ಬರದಿಂದ ಮಾತನಾಡಿದರು.
ಹಿಂದುತ್ವದ ವಿರುದ್ಧ ಟೀಕೆ ಮಾಡಿದ್ದಾರೆ ಎಂಬ ಹಿನ್ನಲೆಯಲ್ಲಿ ನಟ ಚೇತನ್ ರನ್ನು ಬಂಧಿಸಲಾಗಿತ್ತು. ಜಾಮೀನು ಪಡೆದು ಹೊರ ಬಂದ ನಟ ಚೇತನ್ ಮತ್ತೇ ಹಿಂದುತ್ವದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ತಂದೆ ಪೆರಿಯಾರ್ 15 ವರ್ಷದಲ್ಲಿ 23 ಬಾರಿ ಜೈಲಿಗೆ ಹೋಗ್ತಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಯಾವ್ದಕ್ಕಾದರೂ ತಯಾರಿರ್ತಿದ್ರು. ಭಗತ್ ಸಿಂಗ್ ಹೋರಾಡುತ್ತಲೇ ಜೀವ ಕೊಟ್ಟವರು. ಇವರೆಲ್ಲ ನಮ್ಮ ಮಾರ್ಗದರ್ಶಕರು. ಪ್ರಜಾಪ್ರಭುತ್ವದ ಅಡಿಯಲ್ಲಿ ನಾವು ಹಿಂದುತ್ವವನ್ನು ಪ್ರಶ್ನೆ ಮಾಡ್ಬಹುದು. ಹಿಂದೂ ಧರ್ಮವನ್ನೂ ಪ್ರಶ್ನೆ ಮಾಡ್ಬಹುದು ಎಂದರು.

ಮುಂದುವರೆದು ಮಾತನಾಡಿದ ಅವರು, ಹಿಂದುತ್ವ ಇಂದು ದಾಳಿ ಮಾಡ್ತಿದೆ. ನಮ್ಮ ಹಕ್ಕನ್ನು ಕಸಿದುಕೊಳ್ತಿದೆ. ಹೋದ ವರ್ಷ ನಾನು ಮಾಡಿದ ಟ್ವೀಟ್ ಒಂದರ ಮೇಲೆ 7 ದಿನ ಜೈಲಲ್ಲಿ ಇರಿಸಿದ್ದರು. ಈಗ ಮತ್ತೇ ಟ್ವೀಟ್ ವಿಚಾರ ಒಂದಕ್ಕೆ ನನ್ನನ್ನು ಮತ್ತೇ ಜೈಲಿಗೆ ಕಳಿಸಿದರು. ಹೋರಾಟಗಾರರಿಗೆ ಸೆರೆ ಮನೆಯೇ ಅರಮನೆಯಂತಿರಬೇಕು.
ಹಿಂದುತ್ವ ದ್ವೇಷ ಮತ್ತು ಸುಳ್ಳಿನ ಮೇಲೆ ಕಟ್ಟಿದೆ. ಅದನ್ನು ಸಮಾನತವಾದಿಗಳೆಲ್ಲಾ ಪ್ರಶ್ನೆ ಮಾಡುತ್ತೇವೆ. ಆ ಮೂಲಕ ಸಮ ಸಮಾಜವನ್ನು ಕಟ್ಟುತ್ತೇವೆ. ಮುಂದಿನ ದಿನಗಳಲ್ಲೂ ಸಹ ಅನ್ಯಾಯದ ವಿರುದ್ಧ ಹೋರಾಡುತ್ತೇನೆ. ಮತ್ತೇ ಜೈಲಿಗೆ ಹಾಕಿದರೂ ಪರ್ವಾಗಿಲ್ಲ ಎಂದು ತಿಳಿಸಿದರು.
ಭಾರತದ ಪ್ರಜಾಪ್ರಭುತ್ವ ಅತ್ಯಂತ ಅದ್ಭುತ ಪ್ರಜಾಪ್ರಭುತ್ವ. ಆದರೆ ಭಾರತದ ಪ್ರಜಾಪ್ರಭುತ್ವವನ್ನು ನುಚ್ಚು ನೂರು ಮಾಡಲಾಗ್ತಿದೆ. ನಾನು ಮಾತನಾಡಿದ್ದು ಹಿಂದುತ್ವದ ಬಗ್ಗೆ. ಆದ್ರೆ ಧರ್ಮ ನಿಂದನೆ ಮಾಡಿದ್ದೇನೆ ಎಂದು ಜೈಲಿಗೆ ಹಾಕಿದರು.
ಹಿಂದೂ ಧರ್ಮ ಬೇರೆ. ಹಿಂದುತ್ವ ಬೇರೆ. ಹಿಂದುತ್ವ ಅನ್ನೋದು 100 ವರ್ಷಗಳ ಕಾಲದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಸಿದ್ದಾಂತ. ಹಿಂದುತ್ವಕ್ಕೂ ಪ್ರತ್ಯೇಕ ಧರ್ಮ ಆಗ್ಬೇಕೆಂದರೆ ಹೇಳಿ. ನಿಮ್ಮ ಜೊತೆಗೆ ನಿಂತು ಪ್ರತ್ಯೇಕ ಧರ್ಮ ಮಾಡುತ್ತೇವೆ. ಆದರೆ ನೀವು ಹಿಂದೂ ಧರ್ಮ ನೀವೇ, ಹಿಂದುತ್ವ ನೂ ನೀವೇ ಎಂದು ಹೈಜಾಕ್ ಮಾಡಿಕೊಳ್ಳಲು ಬಿಡಲ್ಲ ಎಂದು ಆಕ್ರೋಶಗೊಂಡರು.
ನಟ ಚೇತನ್ ಟ್ವೀಟ್ ವಿವಾದವೇನು..?
ಉರಿಗೌಡ ನಂಜೇಗೌಡ ರಾಜಕೀಯ ಗದ್ದಲದ ಕುರಿತು ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದ ನಟ ಚೇತನ್ ಅವರು, ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಬರೆದ ಪೋಸ್ಟ್ ಹಿಂದೂಪರ ಸಂಘಟನೆಗಳ ಕೆಂಗಟ್ಟಿಗೆ ಗುರಿಯಾಗಿತ್ತು.
ಸಾರ್ವರ್ಕರ್ ಹೇಳುತ್ತಾರೆ ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎನ್ನುವುದು ಒಂದು ಸುಳ್ಳು. ಬಾಬರಿ ಮಸೀದಿ ರಾಮನ ಜನ್ಮ ಭೂಮಿ ಎಂಬುದೂ ಒಂದು ಸುಳ್ಳು. ಈಗ 2023ರಲ್ಲಿ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು ಎನ್ನುವುದು ಇದು ಕೂಡ ಒಂದು ಸುಳ್ಳು.
ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು, ಸತ್ಯವೇ ಸಮಾನತೆ ಎಂದು ಬರೆದುಕೊಂಡಿದ್ದರು. ಚೇತನ್ ಪೋಸ್ಟ್ ನಿಂದ ಸಿಟ್ಟಾದ ಶಿವಕುಮಾರ್ ಎಂಬುವರು, ಚೇತನ್ ಅವರು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ದೂರು ನೀಡಿದ ಕಾರಣ ಬಂಧಿಸಲಾಗಿತ್ತು.

More News