PM MODI AGAIN IN KARNATAKA: ಮತ್ತೇ ಕರುನಾಡಿಗೆ ಪ್ರಧಾನಿ ಮೋದಿ ಭೇಟಿ: ಕರ್ನಾಟಕ ಮತಗಳೇ ಮೈನ್ ಟಾರ್ಗೆಟ್

ರಾಜ್ಯ ಚುನಾವಣಾ ಅಖಾಡ ರಂಗೇರುತ್ತಿದೆ. ರಾಜ್ಯಕ್ಕೆ ಈಗಾಗಲೇ ಬಂದು ಮೋಡಿ ಮಾದಿದ್ದ ಪ್ರಧಾನಿ ಮೋದಿ ಇಂದು ಪುನಃ ರಾಜ್ಯಕ್ಕೆ ಆಗಮಿಸಲಿದ್ದಾರೆ. ವಿಜಯ ಸಂಕಲ್ಪ ಸಮಾವೇಶದ ಮೂಲಕ ಮತ ಸಂಕಲ್ಪದ ಪಣ ತೊಟ್ಟಿದ್ದಾರೆ.

ಇಂದು ರಾಜ್ಯಕ್ಕೆ ಭೇಟಿ ಕೊಡುತ್ತಿರುವ ಪ್ರಧಾನಿ ಮೋದಿ, ಬೆಂಗಳೂರು, ಚಿಕ್ಕಬಳ್ಳಾಪುರ, ಮಧ್ಯ ಕರ್ನಾಟಕದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಮತ್ತೊಮ್ಮೆ ಬಿಜೆಪಿ ಪತಾಕೆ ರಾಜ್ಯದಲ್ಲಿ ಹಾರಿಸಲು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಇಂದು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಕೊನೆ ದಿನವಾದ ಕಾರಣ ಬಿಜೆಪಿಯ ಕಿಂಗ್ ನ್ನೇ ಅಖಾಡಕ್ಕೆ ಇಳಿಸಿ, ಭರ್ಜರಿ ಮತ ಭೇಟೆಗೆ ಕಮಲ ಪಾಳಯ ಸಿದ್ದತೆ ನಡೆಸುತ್ತಿದೆ. ನಗರಗಳ ಬೀದಿಗಳಲ್ಲಿ ತೆರಳುವ ಯಾತ್ರೆಗೆ ಪ್ರಧಾನಿ ಸಾಥ್ ನೀಡಲಿದ್ದಾರೆ.
ಪ್ರಧಾನಿ ಮೋದಿಯವರ ಇಂದಿನ ಪ್ರವಾಸ ಪಟ್ಟಿ
ಬೆಳಗ್ಗೆ 10.25ಕ್ಕೆ HAL ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರು ಅಲ್ಲಿಂದ ಚಿಕ್ಕಬಳ್ಳಾಪುರಕ್ಕೆ 10.50ಕ್ಕೆ ತಲುಪಲಿದ್ದಾರೆ. 11.15ಕ್ಕೆ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟನೆ ಮಾಡಿದ ಬಳಿಕ ಮಧ್ಯಾಹ್ನ 1.45ಕ್ಕೆ ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್​ಗೆ ಆಗಮನ. ಮಧ್ಯಾಹ್ನ 1.50 ಗಂಟೆಗೆ ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಉದ್ಘಾಟನೆ ಬಳಿಕ ವೈಟ್​​ಫೀಲ್ಡ್ – ಕೆ. ಆರ್​ ಪುರ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಪ್ರಯಾಣಿಸುವರು. ಮಧ್ಯಾಹ್ನ3.20ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಪ್ರಯಾಣ ಮಾಡಲಿದ್ದು, ಮಧ್ಯಾಹ್ನ 3.30ಕ್ಕೆ ದಾವಣಗೆರೆಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ ಭರ್ಜರಿ ಭಾಷಣ ಮಾಡಲಿದ್ದಾರೆ. ಸಂಜೆ 5.15ಕ್ಕೆ ದಾವಣಗೆರೆಯಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಪ್ರಯಾಣಿಸಿ ಅಲ್ಲಿ ಸಂಜೆ 5.55ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಮತ್ತು ಗದಗ, ವಿಜಯನಗರ, ಬಳ್ಳಾರಿ ಯಲ್ಲಿ ಕಮಲ ಅರಳಿಸಲು ಬಿಜೆಪಿ ಭಾರೀ ತಯಾರಿ ನಡೆಸುತ್ತಿದೆ. ರಾಜ್ಯಾದ್ಯಂತ ಬಿಜೆಪಿ ಧ್ವಜ ಹಾರಿಸುವುದು, ತಳ ಮಟ್ಟದಿಂದ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ 42 ಪ್ರಮುಖ ನಾಯಕರ ಸಮಿತಿ ರಚಿಸಿರುವ ಕೇಸರಿ, ಪ್ರತಿಬ್ಬರಿಗೂ ೫ ಕ್ಷೇತ್ರದ ಉಸ್ತುವಾರಿ ವಹಿಸಿದೆ. ಹೀಗೇ ರಾಜಕೀಯ ಲೆಕ್ಕಾಚಾರ ಹಾಕಿರುವ ಬಿಜೆಪಿ, ಇಂದು ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನಕ್ಕೆ ಸನ್ನದ್ದವಾಗಿದೆ.
ವಿಜಯ ಸಂಕಲ್ಪ ಯಾತ್ರೆಗಾಗಿ ಇಂದು ದಾವಣಗೆರೆ ಜಿಎಂಐಟಿ ಕಾಲೇಜ್ ಪಕ್ಕದ 400 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ದಗೊಂಡಿದೆ. 6 ಲಕ್ಷ ಜನರನ್ನು ಸೇರುವ ಲೆಕ್ಕಾಚಾರ ಇದೆ. ಇನ್ನು ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ದಾವಣಗೆರೆ ಯಲ್ಲಿ ಪೊಲೀಸ್ ಭಿಗಿ ಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

#PMMODI #NARENDRAMODI #PRIMEMINISTER #KARNATAKA #TOUR #POLITICALRALLY #METRO #FOURTHVISIT

More News