ಸಂಜು ವೆಡ್ಸ್ ಗೀತಾ.. ಸಿನಿಮಾ ತೆರೆ ಮೇಲೆ ಬಂದು 12 ವರ್ಷ ಕಳೆದರೂ ಇನ್ನೂ ಆ ಪ್ರೇಮ ಕಥೆ ಎಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಕಾಂಬಿನೇಷನ್ ಸಿನಿಮಾ ತೆರೆ ಮೇಲೆ ಮೋಡಿ ಮಾಡಿತ್ತು..
ಗಾಢ ಪ್ರೇಮದ ಕಥೆಯ ಚಿತ್ರವನ್ನು ನೋಡಿದ ಸಿನಿ ಪ್ರೇಮಿಗಳು ಭೇಷ್ ಎಂದು ಮನದುಂಬಿ ಹರಸಿದ್ದರು.. ಮತ್ತದೇ ಪ್ರೇಮ ಕಥೆಯ ಎಳೆಯನ್ನು ತೆರೆ ಮೇಲೆ ತರೋ ಸಿದ್ದತೆ ತೆರೆಮರೆಯಲ್ಲೇ ನಡೆಯುತ್ತಿದೆ.

ಇತ್ತೀಚೆಗೆ ತೆರೆ ಕಂಡ ಎಲ್ಲಾ ಸಿನಿಮಾಗಳು ಹಿಟ್ ಕಂಡ ಬೆನ್ನಲ್ಲೇ ಸರಣಿ ಪ್ರದರ್ಶನದ ಕಥೆ ಹೊತ್ತು ಬರ್ತಿದೆ. ಹಿಟ್ ಕಂಡಷ್ಟು ಸರಣಿ ಪ್ರದರ್ಶನ ಹೆಚ್ಚಾಗ್ತಿವೆ.. ಒಂದು ಕಾಲದಲ್ಲಿ ಮಿಂಚಿ, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಮಾಯಿ ಮಾಡಿ ಹೋದ ಸಂಜು ವೆಡ್ಸ್ ಗೀತಾ ಸಿನಿಮಾವನ್ನು ಮತ್ತೇ ತೆರೆ ಮೇಲೆ ತರೋ ಸಿದ್ದತೆ ನಡೆಯುತ್ತಿದೆ. ಈಗಾಗಲೇ ನಟ ಶ್ರೀನಗರ ಕಿಟ್ಟಿ ಹಾಗೂ ನಾಗಶೇಖರ್ ಮೊದಲ ಹಂತದ ಮಾತುಕತೆ ನಡೆಸಿದ್ದು, ಸಿನಿಮಾ ತಯಾರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸಿನಿಮಾ ತೆರೆ ಮೇಲೆ ತರೋ ಕುರಿತು ಶ್ರೀನಗರ ಕಿಟ್ಟಿ ಹಾಗೂ ನಾಗಶೇಖರ್ ಮೊದಲ ಹಂತದ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ, ನಾಗಶೇಖರ್ ಕಥೆ ಹೆಣೆಯುವ ಕೆಲಸ ಶುರುವಿಟ್ಟಿದ್ದಾರಂತೆ. ಸಂಜುವೆಡ್ಸ್ ಗೀತಾ ಪಾರ್ಟ್ 2 ನಲ್ಲಿ ರಮ್ಯಾ ಇರಲಿದ್ದಾರಾ ಎಂಬ ಗೊಂದಲ ಇದೆ.. ಸಧ್ಯಕ್ಕೆ ರಾಜಕೀಯ ದಿಂದ ಸಿನಿಮಾ ರಂಗಕ್ಕೆ ಮರಳಿರುವ ನಟಿ ರಮ್ಯಾ, ಒಳ್ಳೆ ಸ್ಕ್ರಿಪ್ಟ್ ಆಯ್ಕೆಯಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಮತ್ತೇ ಅವರನ್ನೇ ಅಪ್ರೋಚ್ ಮಾಡ್ತಾರಾ.. ಇಲ್ವಾ.. ಎಂಬ ಬಗ್ಗೆ ಸಧ್ಯದ ವರೆಗೂ ಮಾಹಿತಿ ಸಿಕ್ಕಿಲ್ಲ.

ಶ್ರೀನಗರ ಕಿಟ್ಟಿ ಹಾಗೂ ನಿರ್ದೇಶಕ ನಾಗಶೇಖರ್ ಇಬ್ಬರೂ ‘ಸಂಜು ವೆಡ್ಸ್ ಗೀತಾ 2’ ಆಸಕ್ತಿ ತೋರಿದ್ದಾರಂತೆ. ಹೀಗಾಗಿಯೇ ಇತ್ತೀಚೆಗೆ ಶ್ರೀನಗರ ಕಿಟ್ಟಿ ಹಾಗೂ ನಾಗಶೇಖರ್ ಇಬ್ಬರೂ ಒಟ್ಟಿಗೆ ಸೇರಿದ್ದರು ಎನ್ನಲಾಗಿದೆ. ಈ ಸಿನಿಮಾ ಏನಾದ್ರು ಟೇಕಾಫ್ ಆದರೆ 12 ವರ್ಷದ ಬಳಿಕ ‘ಸಂಜು ವೆಡ್ಸ್ ಗೀತಾ’ ನವಿರಾದ ಪ್ರೇಮವನ್ನು ತೆರೆಮೇಲೆ ನೋಡಬಹುದು.




