Madal Virupakshappa Arrest: ಭ್ರಷ್ಟಾಚಾರದ ಆರೋಪ: ಬಿಜೆಪಿ ಶಾಸಕ‌ ಮಾಡಾಳು ಕೊನೆಗೂ ಅರೆಸ್ಟ್..

ಭ್ರಷ್ಟಾಚಾರ ಆರೋಪ‌ ಪ್ರಕರಣ ಕ್ಕೆ ಸಂಬಂಧಿಸಿದಂತೆ ‌ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಗೆ
ಹೈಕೋಟ್೯ ಜಾಮೀನು ರದ್ದು ಗೊಳಿಸಿದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಇಂದು ಬಂಧಿಸಿದ್ದಾರೆ.

ಕೆಎಸ್‌ಡಿಎಲ್ ಟೆಂಡರ್ (KSDL) ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ A1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮಾರ್ಚ್‌ 7 ರಂದು ಹೈಕೋರ್ಟ್‌ ಮಧ್ಯಂತರ ಜಾಮೀನು ಮಜೂರು ಮಾಡಿತ್ತು. ಆದರೆ ಇಂದು ಹೈಕೋರ್ಟ್‌ನಿಂದ ಪಡೆದಿದ್ದ ಮಧ್ಯಂತರ ಜಾಮೀನು ರದ್ದಾದ ಬೆನ್ನಲ್ಲೇ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಇಂದು ವಿವಿಧ ಕಾಮಗಾರಿ, ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮ ಮಧ್ಯಯೇ ಪರಾರಿಯಾಗಿದ್ದ ಶಾಸಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ‌.

ಚನ್ನಗಿರಿ ಕಾರ್ಯಕ್ರಮದಿಂದ ಎಸ್ಕೇಪ್ ಆಗಿದ್ದ ಶಾಸಕ ಮಾಡಾಳ್, ಬೆಂಗಳೂರು ದಾರಿ ಹಿಡಿದಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ತೆರಳಿರಬಹುದು ಎಂದು ಅಂದಾಜಿಸಿ ದಾವಣಗೆರೆ ಲೋಕಾಯುಕ್ತ ಡಿವೈಎಸ್ಪಿ ರಾಮಕೃಷ್ಣ ನೇತೃತ್ವದಲ್ಲಿ ತಂಡ ಚನ್ನೇಶಪುರದಲ್ಲಿರುವ ಮಾಡಳ್ ವಿರುಪಾಕ್ಷಪ್ಪ ಮನೆಗೆ ಭೇಟಿ ನೀಡಿ ಶೋಧಿಸಿದರು. ಆದರೆ ಮಾಡಾಳ್ ನಾಪತ್ತೆಯಾಗಿದ್ದರು. ಬಳಿಕ ಶಾಸಕರ ಟ್ರ್ಯಾವಲ್ ಹಿಸ್ಟರಿ ಹಿಡಿದು ಹೊರಟ ಪೊಲೀಸರಿಗೆ ಮಾಡಾಳ್ ಸಿಕ್ಕಿ ಬಿದ್ದಿದ್ದಾರೆ.
ತುಮಕೂರಿನ ಕ್ಯಾತ್ಸಂದ್ರ ಟೋಲ್ ಬಳಿ ಶಾಸಕರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಬಂಧನಕ್ಕು ಮುನ್ನ ಭಾವುಕರಾಗಿ ಭಾಷಣ ಮಾಡಿದ್ದ ಮಾಡಾಳ್

ಕಾಣದ ಕೈಗಳ ಷಡ್ಯಂತ್ರದಿಂದ ನನ್ನ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಬಂದಿದೆ. ಆ ಕಳಂಕ ತೊಡೆದು ಶೀಘ್ರದಲ್ಲೇ ಬರುವೆ ಎಂದು ವೇದಿಕೆ ಮೇಲೆ ಶಾಸಕ ಮಾಡಾಳ್ ಭಾವುಕರಾಗಿ ಮಾತನಾಡಿದರು. ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಇದೀಗ ಕಾಣದ ಕೈಗಳ ಷಡ್ಯಂತ್ರದಿಂದ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಬಂದಿದೆ.ಅದರ ಕಳಂದ ತೊಳೆದು ಹೊರ ಬರುತ್ತೇನೆ. ನಾನು ನಿಮ್ಮ ಜೊತೆ ಇರುತ್ತೇನೆ, ನೀವು ನನ್ನ ಜೊತೆ ಇರಿ. ಅಧಿಕಾರ ಇರಲಿ ಬಿಡಲಿ ನಾನು ಜನರ ಮಧ್ಯೆ ಇರುತ್ತೇನೆ ಎಂದು ಗದ್ಗತಿತರಾದರು.

More News