ನನ್ನ ಅಪ್ಪನನ್ನು ಕಳೆದುಕೊಂಡ ಮೇಲೆ ನಾನು ತುಂಬಾ ಕಷ್ಟ ಪಟ್ಟೆ. ನನ್ನ ಜೀವನವನ್ನೇ ಕೊನೆಗೊಳಿಸಬೇಕು ಅಂತ ತೀರ್ಮಾನಿಸಿದ್ದೆ. ಆದರೆ, ನನ್ನ ಸಾವು ಬದುಕಿನ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬದುಕಿನ ಪಾಠವನ್ನು ಹೇಳಿಕೊಟ್ಟರು. ನಾನು ಜೀವನದಲ್ಲಿ ಭಾವನಾತ್ಮಕವಾಗಿ ನರಳಿದಾಗ ಸ್ಪೂರ್ತಿ ತುಂಬಿದರು ಎಂದು ರಮ್ಯ ಹೇಳಿಕೊಂಡಿದ್ದಾರೆ
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 ರಮ್ಯಾ ಬದುಕಿನ ಹಲವು ವಿಚಾರಗಳನ್ನು ಮುನ್ನಲೆಗೆ ತಂದಿದೆ. ಈ ಸಲ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಸಾಧಕರನ್ನು ಚರ್ಚೆಗೆ ಕರೆತಂದಿದ್ದು, ಅವರ ಜೀವನ ಕಥೆಗಳನ್ನು ಜನರ ಮುಂದಿಡಲು ಮುಂದಾಗಿದೆ. ಈಸೀಸನ್ ನಲ್ಲಿ ಮೊದಲನೇ ಅತಿಥಿಯಾಗಿ ರಮ್ಯಾ ಅವರನ್ನು ಆಹ್ವಾನಿಸಿದ್ದು, ಎರಡು ದಿನಗಳ ಕಾಲ ಅವರ ಕುರಿತು ಅನೇಕ ವಿಚಾರಗಳನ್ನು ಪ್ರಸಾರ ಮಾಡಲಾಗುತ್ತದೆ.

ರಾಹುಲ್ ಗಾಂಧಿ ಹಾಗೂ ತಮ್ಮ ನಡುವಿನ ಸ್ನೇಹದ ಕುರಿತು ಮಾತನಾಡಿದ ನಟಿ, ನನ್ನ ಮೊದಲನೇ ಪ್ರೇರಣೆ ನಮ್ಮ ಅಪ್ಪ – ಅಮ್ಮ ಆಗಿದ್ದಾರೆ. ನಾನು ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ಸಸ್ ಆಗಿರುವೆ. ಸಿನಿಮಾ ರಂಗದಲ್ಲಿ ನಂಬರ್ 1 ಆಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೋಲಿಗಿಂತ ಗೆಲುವು ಕಂಡಿರುವೆ. ಇದೆಕ್ಕೆಲ್ಲಾ ಮುಖ್ಯವಾದ ಕಾರಣ ನನ್ನ ತಂದೆ – ತಾಯಿ ಎಂದು ಮನಬಿಚ್ಚಿ ಮಾತಾಡಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ನೆಲೆ ನಿಲ್ಲುವಂತೆ ರಾಜಕೀಯ ಕ್ಷೇತ್ರದಲ್ಲಿ ನೆಲೆಯೂರುವುದು ಸಾಕಷ್ಟು ಕಷ್ಟ. ಹೀಗಾಗಿ, ಅನೇಕ ಕಷ್ಟಗಳನ್ನು ಎದುರಿಸಿದೆ. ರಾಜಕೀಯ ಪ್ರಚಾರದ ವೇಳೆಯಲ್ಲಿ ತಂದೆ ತೀರಿಕೊಂಡರು. ನಾನು ಮಂಡ್ಯದಿಂದ ಪಾರ್ಲಿಮೆಂಟ್ ಗೆ ಆಯ್ಕೆಯಾದ ವೇಳೆ ಸ್ವಲ್ಪವೂ ಜ್ಞಾನವಿರಲಿಲ್ಲ. ಅಲ್ಲದೆ, ಇದೇ ಸಮಯದಲ್ಲಿ ನನಗೆ ಬಹಳಷ್ಟು ಗೊಂದಲಕ್ಕೀಡಾಗಿ, ಬದುಕನ್ನೇ ಕೊನೆಗೊಳಿಸಬೇಕು ಅಂತ ಡಿಸೈಡ್ ಮಾಡಿದ್ದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಹಳಷ್ಟು ಪ್ರೇರಣೆ ನೀಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಚುನಾವಣೆಯಲ್ಲಿ ಗೆದ್ದ ನಂತರ ಪಾರ್ಲಿಮೆಂಟ್ ಗೆ ಹೋಗಿದ್ದೆ. ಅದು ಹೊಸದು ನನಗೆ. ಅಲ್ಲಿನ ನೀತಿ ನಿಯಮಗಳ ಬಗ್ಗೆ ಅರಿವಿರಲಿಲ್ಲ. ಇನ್ನೂ ಹೊಸ ಸದಸ್ಯೆಗೆ ಸಂಸತ್ತಿನಲ್ಲಿ ಯಾರೂ ಗೊತ್ತಿಲ್ಲದೇ ಅಪರಿಚಿತಳಾಗಿದ್ದೆ. ಆದರೆ, ನಾನು ಬಹಳಷ್ಟು ಕಲಿತೆ. ಅದಕ್ಕೆ ಮಂಡ್ಯದ ಜನರಿಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಹ ಸಾಲದು ಎಂದಿದ್ದಾರೆ.




