Aadhaar-PAN Link Date Extension: ಪಾನ್ ಕಾಡ್೯ ಜೊತೆ ಆಧಾರ್ ಜೋಡಣೆ: ಜೂ.೩೦ರವೆಗೆ ವಿಸ್ತರಣೆ.

ಕೇಂದ್ರ ಸರ್ಕಾರ ಆಧಾರ್ ಪಾನ್ ಕಾಡ್೯ ಲಿಂಕ್ ಮಾಡಲು ಗಡುವು ಮುಗಿಯುವ ಎರಡು ದಿನಗಳು ಮುಂಚಿತವಾಗಿಯೇ ದಿನಾಂಕ ವಿಸ್ತರಿಸಿದೆ.

ಪರ್ಮನೆಂಟ್‌ ಅಕೌಂಟ್‌ ನಂಬರ್‌ ಅಂದರೆ ಪ್ಯಾನ್ ಕಾರ್ಡ್ ಅತ್ಯಂತ ಪ್ರಮುಖ ಬ್ಯುಸಿನೆಸ್‌ ದಾಖಲೆಯಾಗಿದ್ದು, ಪ್ಯಾನ್‌ ನಂಬರ್ ಇಲ್ಲದೆ ಯಾವುದೇ ಹಣಕಾಸಿನ ಕೆಲಸವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಿಲ್ಲ.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಈ ಹಿಂದೆ ಮಾರ್ಚ್​ 31 ಕೊನೆಯ ದಿನಾಂಕವೆಂದು ಹೇಳಲಾಗಿತ್ತು. ಅಂದು ಕೂಡ ಲಿಂಕ್ ಮಾಡಿಸದೇ ಇದ್ದಲ್ಲಿ 10 ಸಾವಿರ ಫೈನ್ ಕಟ್ಟಬೇಕು ಎಂದೂ ಸಹ ಆದೇಶ ಹೊರಡಿಸಿತ್ತು. ಆದರೆ ಇದೀಗ ಜೂನ್ 30ರವರೆಗೂ ಗಡುವು ವಿಸ್ತರಿಸಲಾಗಿದೆ.

ಆಧಾರ್, ಪಾನ್ ಕಾರ್ಡ್ ಲಿಂಕ್ ಮಾಡಿಸಲು ಸೈಬರ್​ ಸೆಂಟರ್​ಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಫೈನ್ ಕಟ್ಟುವ ಭೀತಿಯಲ್ಲಿ ಕ್ಯೂನಲ್ಲಿ ನಿಂತು ಲಿಂಕ್​​ ಮಾಡಿಸುತ್ತಿದ್ದಾರೆ. ಇದನ್ನೇ ಕೆಲ ಸೈಬರ್ ಸೆಂಟರ್​ಗಳು ಬಂಡವಾಳ‌ ಮಾಡಿಕೊಂಡಿವೆ. ಬೇರೆ ಬೇರೆ ವೆಬ್​ಸೈಟ್​ಗಳಲ್ಲಿ ಪಾನ್ ಹಾಗೂ ಆಧಾರ್ ಲಿಂಕ್‌‌ ಮಾಡುತ್ತಿದ್ದಾರೆ. ಒಂದು ಸಾವಿರ ಶುಲ್ಕದ ಜೊತೆಗೆ ಸೈಬರ್ ಸೆಂಟರ್ ಮಾಲೀಕರು ಜೊತೆಗೆ ಪ್ರೊಸೆಸಿಂಗ್ ಶುಲ್ಕ ಎಂದು 500 ರೂಪಾಯಿ ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ. ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಇಲಾಖೆಯು ತೆರಿಗೆದಾರರಿಗೆ ತನ್ನ ವೆಬ್‌ಸೈಟ್‌ನಲ್ಲಿ ಲಿಂಕ್‌ಗಳನ್ನು ನೀಡಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು.

More News