Daali Dhananjaya: ಕೆಟ್ಟ ಎಕ್ಸ್ ಪೀರಿಯನ್ಸ್ ನಿಂದ ಹೊರ ಬನ್ನಿ: ನಟ ಡಾಲಿ ಧನಂಜಯ

ಬೆಂಗಳೂರು: ಡಾಲಿ ಧನಂಜಯ.. ಕನ್ನಡ ಸಿನಿಮಾ ಇಂಡಸ್ಟ್ರಿ ಯ ನಟ ರಾಕ್ಷಸ ಎಂದೇ ಖ್ಯಾತಿ ಗಳಿಸಿದ ಸೆನ್ಸಿಬಲ್ ಆ್ಯಕ್ಟರ್.. ಯಾವ್ದೇ ಸಿನಿಮಾ ಬ್ಯಾಗ್ರೌಂಡ್ ಇಲ್ದೇ ಸಿನಿ ಇಂಡಸ್ಟ್ರಿ ಗೆ ಕಾಲಿಟ್ಟಾಗ ಆದ ಘಟನೆಯನ್ನು ನಟ ಮೆಲುಕು ಹಾಕುವ ಜೊತೆಗೆ ಒಂದಷ್ಟು ಕಿವಿ ಮಾತನ್ನೂ ಹೇಳಿದ್ದಾರೆ. ಕೆಟ್ಟ ಎಕ್ಸ್ಪೀರಿಯನ್ಸ್ ನಿಂದ ಆಚೆ ಬನ್ನಿ.. ಇಲ್ದಿದ್ರೆ ಅದು ನಮ್ಮನ್ನ ಸ್ಯಾಡಿಸ್ಟ್ ಆಗುವಂತೆ ಮಾಡಿಬಿಡುತ್ತೆ ಎಂದು ತಿಳಿಸಿದ್ದಾರೆ.

ಡಾಲಿ ಧನಂಜಯ ನಟನೆಯ 25 ನೇ ಸಿನಿಮಾ ಹೊಯ್ಸಳ ಚಿತ್ರದ ಕುರಿತು ಖಾಸಗಿ ಚಾನಲ್ ನಲ್ಲಿ ಮಾತನಾಡುವ ವೇಳೆ ತಮ್ಮ ಸಿನಿ ಜರ್ನಿಯ ಪ್ರಾರಂಭದ ದಿನಗಳನ್ನು ಮೆಲುಕು ಹಾಕಿದರು. ನಾನು ಏನ್ ಮಾಡ್ಬಾರ್ದು ಎಂಬುದನ್ನು ತುಂಬಾ ಚನ್ನಾಗಿ ಕಲಿತುಕೊಂಡು ಬಂದಿದ್ದೇನೆ. ನಮಗೆ ಆದ ಕೆಟ್ಟ ಅನುಭವಗಳಿಂದ ನಾವು ಆಚೆ ಬರಬೇಕು.. ಯಾವಾಗ ನಾವು ಆ ನೋವಿನಿಂದ ಹೊರ ಬರೋದಿಲ್ವೋ ಆಗ ನಮ್ಗೆ ಆದ ಕೆಟ್ಟ ಅನುಭವವನ್ನೇ ನಾವು ಪಾಸ್ ಮಾಡ್ತಾ ಹೋಗುತ್ತೇವೆ.. ನಾವು ಸ್ಯಾಡಿಸ್ಟ್ ಆಗ್ಬಿಡ್ತೇವೆ. ಎಷ್ಟೇ ನೋವಾದರೂ ನಿಮಗೆ ಆದ ಕೆಟ್ಟ ಅನುಭವದಿಂದ ಆಚೆ ಬನ್ನಿ ಎಂದು ಕಿವಿ ಮಾತು ಹೇಳಿದ್ದಾರೆ ಡಾಲಿ.

“ಶೂಟಿಂಗ್ ಸಮಯದಲ್ಲಿ ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದರು”

ಒಬ್ಬ ಮನ್ಷನ್ನ ಹೇಗೆ ಟ್ರೀಟ್ ಮಾಡ್ಬೇಕು ಅನ್ನೋದೇ ಗೊತ್ತಿಲ್ವಲ್ಲ ಎಂದು ಪ್ರಾರಂಭದ ದಿನಗಳಲ್ಲಿ ತುಂಬಾ ಕೋಪ, ಸಿಟ್ಟು, ಅಸಹನೆ ಇತ್ತು. ಎಷ್ಟೋ ಬಾರಿ ಶೂಟಿಂಗ್ ಸಮಯದಲ್ಲಿ ಕೆಟ್ಟದಾಗಿ ನಡೆಸಿಕೊಂಡದ್ದೂ ಇದೆ. ಶೂಟಿಂಗ್ ವೇಳೆ ಸಾಮಾನ್ಯವಾಗಿ ಜನ ಸೇರಿರುತ್ತಾರೆ. ಆ ವೇಳೆಯೂ ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಎಷ್ಟೋ ಬಾರಿ ಶೂಟಿಂಗ್ ವೇಳೆ ಭಾಗಿ ಆಗಿದ್ದ ಜನರೇ ಬಂದು ಕೇಳಿದ್ದಾರೆ.. ಯಾಕೆ.. ಏನಾಯ್ತು.. ಎಂದು.. ಆದರೂ ಅದೆಲ್ಲವೂ ಬದುಕಿನ ಬಂದು ಭಾಗ ಎಂದು ಸುಮ್ಮನೆ ಬಂದಿದ್ದೇನೆ ಎಂದು ನೆನೆದರು.

ಡಾಲಿ- ಅಮೃತ ಪ್ರೀತಿ ಕಥೆ ನಿಜವಾ..?

ಇನ್ನು ವೇದಿಕೆ ಮೇಲೆ ಅಮೃತ ಮತ್ತು ಡಾಲಿ ಬಗ್ಗೆ ನಟ ಸುದೀಪ್ ಮಾಡಿದ ಕಾಮಿಡಿ ಕುರಿತು ಮಾತನಾಡಿದ ಅವರು, ಸುದೀಪ್ ಸರ್ ರೇಗಿಸೋದು ಚಂದ ಇರುತ್ತೆ. ಆದರೆ ಅದೆಲ್ಲವೂ ನಿಜ ಅಲ್ಲ. ಪೆವರೇಟ್ ಜೋಡಿ ಅಂತ ಇತ್ತಲ್ವಾ.. ನಮಗೂ.. ಮೊದಲಿನಿಂದ.. ಹಾಗೇ.. ಇದು. ನಾನು ಅಂಮೃತ ಜೊತೆಗೆ ಕೆಲಸ ಮಾಡಿದಾಗ ಆ ರೀತಿಯ ಸುದ್ದಿ ಬರುತ್ತೆ. ಈಗ ಮೂರನೇ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡ್ತಿದ್ದೇವೆ. ಹಾಗಾಗಿ ಸುದೀಪ್ ರೇಗಿಸುತ್ತಿದ್ದರು. ಎಂದರು. ಇದಕ್ಕೆ ನಗುತ್ತಾ ಉತ್ತರಿಸಿದ ನಟಿ ಅಮೃತ
ನಾನು ಡಾಲಿ ಎಲ್ಲಾ ಒಂದು ಫ್ರೆಂಡ್ ಗ್ಯಾಂಗ್.. ಡಾಲಿ ಗೆ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ಆದರೆ ನಮ್ಮ ಬಗ್ಗೆ ಹೆಚ್ಚು ಚರ್ಚೆ ಆಗ್ತಿದೆ. ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೋದ್ರಿಂದ ಹೀಗೆ ಆಗ್ತಿದೆ ಎಂದರು.

More News